ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭರವಸೆಗಳ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಸ್ವತ: ಸರ್ಕಾರದ ಸಚಿವರೊಬ್ಬರು ಈ ಯೋಜನೆಗಳು ಚುನಾವಣಾ ಗಿಮಿಕ್ ಎಂದಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.
ಕೃಷಿ ಸಚಿವ ಚಲುವರಾಯಸ್ವಾಮಿ ಗ್ಯಾರಂಟಿ ಯೋಜನೆಗಳು ಚುನಾವನಾ ಗಿಮಿಕ್ ಎಂದು ಟೀಕಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚುನಾವಣೆಯಲ್ಲಿ ಗೆದ್ದು ಬಂದರೆ ತಾನೆ ಯೋಜನೆಗಳು ಜಾರಿ ಮಾಡುವುದು, ಅಧಿಕಾರ ಹಿಡಿಯುವ ಉದ್ದೇಶಕ್ಕೆ ಇಂತಹ ಯೋಜನೆಗಳನ್ನು ಘೋಷಿಸಲಾಗಿದೆ. ಉಚಿತ ಯೋಜನೆಗಳ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಯಿತು. ನಾವೂ ಕೂಡ ಇಂತಹ ಯೋಜನೆಗಳು ಸರಿಯಲ್ಲ ಎಂದು ಚರ್ಚೆ ಮಾಡಿದೆವು. ಫ್ರೀ ಫ್ರೀ ಅಂತ ಹೋದರೆ ಮುಂದೆ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ. ಹಾಗಾಗಿ ಇದು ಒಳ್ಳೆಯದಲ್ಲ ಎಂದು ಚರ್ಚಿಸಿದೆವು. ಅಧಿಕಾರಕ್ಕೆ ಬಂದರೆ ನಾವೂ ಏನಾದರೂ ಕೆಲಸ ಮಾಡಬಹುದು ಎಂಬ ವಿಚಾರ ಬಂದಾಗ ರಿಸಲ್ಟ್ ಅನಿವಾರ್ಯವಾಗುತ್ತೆ. ರಿಸಲ್ಟ್ ಬರಬೇಕು ಎಂದಾಗ ಈರೀತಿ ಚೀಪ್ ಪಾಪ್ಯುಲಾರಿಟಿ ಮಾಡ್ತೀವಿ. ಅದು ನಮ್ಮ ಮನಸ್ಸಿಗೆ ಇಷ್ಟ ಆಗುತ್ತೊ ಇಲ್ವೋ, ಸಿದ್ದರಾಮಯ್ಯನವರ ಮನಸ್ಸಿಗೆ ಇಷ್ಟ ಆಗುತ್ತೋ ಇಲ್ವೋ ಕೆಲವೊಂದು ಮಾಡಿಕೊಂಡು ಹೋಗಬೇಕಾಗುತ್ತೆ ಇನ್ನು ಕೆಲವೊಂದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಸಚಿವ ಚಲುವರಾಯಸ್ವಾಮಿ ನಾನು ಗ್ಯಾರಂಟಿ ಗಳನ್ನು ಚುನಾವಣಾ ಗಿಮಿಕ್ ಎಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
https://pragati.taskdun.com/karnatakaheavy-rainalertimd-3/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ