*ಎಲ್ಲಾ ಶಾಸಕರಿಗೂ ಲೋಕಾಯುಕ್ತ ನ್ಯಾಯಮೂರ್ತಿ ವಾರ್ನಿಂಗ್; ಡೆಡ್ ಲೈನ್ ಒಳಗಾಗಿ ಆಸ್ತಿ ವಿವರ ಸಲ್ಲಿಸಲು ಖಡಕ್ ಸೂಚನೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಖಡಕ್ ಸೂಚನೆ ನೀಡಿದ್ದು, ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಗಡುವು ನೀಡಿದ್ದಾರೆ.
ಎಲ್ಲಾ 224 ಶಾಸಕರು ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಬೇಕು. ಈಗಾಗಲೇ ಆದೇಶ ನೀಡಿ 15 ದಿನಗಳು ಕಳೆದರು ಕೂಡ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂಎ ಸರ್ಕಾರದ ಸಿಎಸ್ ಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಡೆಡ್ ಲೈನ್ ನೀಡಿದ್ದಾರೆ.
ಕಳೆದ ಬಾರಿ ಆಸ್ತಿವಿವರ ಸಲ್ಲಿಸಿದ್ದೇವೆ ಎಂದು ಸುಮ್ಮನಿರುವಂತಿಲ್ಲ. ಈ ಬಾರಿ ಮತ್ತೊಮ್ಮೆ ಸಲ್ಲಿಸಬೇಕು. ಪುನರಾಯ್ಕೆಯಾದ ಶಾಸಕರು ಮಾತ್ರವಲ್ಲ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು ಕೂಡ ಆಸ್ತಿ ವಿವರ ಸಲ್ಲಿಸಬೇಕು. ಜೂನ್ 30ರೊಳಗೆ ಎಲ್ಲಾ ಶಾಸಕರು ಆಸ್ತಿ ವಿವರ ಸಲ್ಲಿಸದಿದ್ದರೆ ಕ್ರಮ ಜರುಗಿಸಲಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.
https://pragati.taskdun.com/shakti-schemesiddaramaiahbusconductor/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ