*ವಾಷಿಂಗ್ಟನ್ನಲ್ಲಿ ಜರುಗಿದ ತಾಯಿ ಮತ್ತು ಮಕ್ಕಳ ಜಾಗತಿಕ ಆರೋಗ್ಯ ಸಭೆಯಲ್ಲಿ ಡಾ.ಪ್ರಭಾಕರ ಕೋರೆ ಭಾಗಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್ಇ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಸಂಶೋಧನಾ ಘಟಕದ ಮೂಲಕ ಕೆಎಲ್ಇ ಸಂಸ್ಥೆ ಕಳೆದ
ಎರಡು ದಶಕಗಳಿಗೂ ಹೆಚ್ಚು ಕಾಲ ಜಗತ್ತಿನಾದ್ಯಂತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ
ತಾಯಿಯ ಮತ್ತು ನವಜಾತ ಶಿಶುಗಳ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯಲ್ಲಿ ತೊಡಗಿಕೊಂಡಿದೆ.
ಕೆಎಲ್ಇ ಜೆಎನ್ಎಂಸಿ ಮಹಿಳಾ ಮತ್ತು ಮಕ್ಕಳ ಸಂಶೋಧನಾ ಘಟಕವು ಪ್ರಸವಾನಂತರದ ರಕ್ತಹೀನತೆಯ ಚಿಕಿತ್ಸೆಯಲ್ಲಿ
ದೈನಂದಿನ ಕಬ್ಬಿಣಾಂಶದ ಪೌಷ್ಠಿಕಾಂಶ ಹಾಗೂ ಸಿಂಗಲ್ ಡೋಸ್-4 ಕಬ್ಬಿಣಾಂಶವನ್ನು ನೀಡುವ ಚಿಕಿತ್ಸೆಗಳ ಕುರಿತು
ಸಂಶೋಧನೆಗಳನ್ನು ಕೈಗೊಂಡಿದೆ. ನಾಗ್ಪುರ-ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಕೀನ್ಯಾ, ಜಾಂಬಿಯಾ ಡೆಮಾಕ್ರಟಿಕ್ ರಿಪಬ್ಲಿಕ್
ಆಫ್ ಕಾಂಗೋ ಮತ್ತು ಗ್ವಾಟೆಮಾಲಾದಲ್ಲಿನ ಜಾಗತಿಕ ಜಾಲಗಳ ಸ್ಥಳಗಳಲ್ಲಿ ಸಂಶೋಧನಾ ಅಧ್ಯಯನವನ್ನು ಮುನ್ನಡೆಸುತ್ತಿದೆ.
ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನೆಗಾಗಿ ಜಾಗತಿಕ ನೆಟ್ವರ್ಕ್ ನ ಸ್ಟೀರಿಂಗ್ ಸಮಿತಿಯ ಸಭೆಯು ಜೂನ್ 8,
2023ರಂದು ವಾಷಿಂಗ್ಟನ್ ಡಿಸಿಯ ಯುನ್ನಿಸ್ ಶ್ರೈವರ್ ಕೆನಡಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್
ಡೆವಲಪ್ಮೆಂಟ್ (NICHD) ನಲ್ಲಿ ಜರುಗಿತು. ಕೆಎಲ್ಇ ಸಂಸ್ಥೆಯ ಗೌರವಾನ್ವಿತ ಕಾರ್ಯಾಧ್ಯಕ್ಷರು ಹಾಗೂ ಕೆಎಲ್ಇ ಅಕಾಡೆಮಿ
ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನ ಕುಲಾಧಿಪಾತಿಗಳಾದ ಡಾ.ಪ್ರಭಾಕರ ಕೋರೆ ಅವರು ಕೆಎಲ್ಇ ಜೆಎನ್ಎಂಸಿಯ
ಬೆಲಗಾಂ ಪ್ರಯಾರಿಟಿ ಟ್ರಯಲ್ ಟೀಮ್ದೊಂದಿಗೆ ಸಭೆಯಲ್ಲಿ ಭಾಗಿಯಾಗಿದ್ದರು.
NICHDನ ಡಾ ಮರಿಯನ್ ಕೊಸೊ-ಥಾಮಸ್, ಎನ್ಐಎಚ್ ಫೌಂಡೇಶನ್ನ ಡಾ ರೆನಟ್ಟಾ ಹಾಫ್ಸ್ಟೆಟ್ಟರ್, ನಾರ್ತ್ ಕೆರೊಲಿನಾದ ಆರ್ಟಿಐ ಇಂಟರ್ನ್ಯಾಶನಲ್ನ ಡಾ ಎಲಿಜಬೆತ್ ಮೆಕ್ಕ್ಲೂರ್ ಮತ್ತು ಇತರ ಸಂಶೋಧಕರು ಉಪಸ್ಥಿತರಿದ್ದರು.
https://pragati.taskdun.com/siddaramaihdr-raj-kumar-academyupsc-candidatessanmana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ