ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಬಿಪೊರ್‌ಜೊಯ್ ಚಂಡಮಾರುತ ಇನ್ನಷ್ಟು ತೀವ್ರ ಸ್ವರೂಪ ಪಡೆದಿದೆ. ಇದರ ಪರಿಣಾಮ ಕರ್ನಾಟಕ ಸೇರಿದಂತೆ ದೇಶದ 5 ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಒಳನಾಡಿನ ಕೆಲ ಜಿಲ್ಲೆಗಳು ಸೇರಿದಂತೆ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ತಾಸಿಗೆ 45-55 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದ್ದು, ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದ ವಿವಿಧ ನಗರಗಳಲ್ಲಿ ತಾಪಮಾನ ಹೀಗಿರಲಿದೆ:
ಬೆಂಗಳೂರು: 30-21, ಮಂಗಳೂರು: 31-26, ಶಿವಮೊಗ್ಗ: 32-23, ಬೆಳಗಾವಿ: 29-22, ಮೈಸೂರು: 31-22, ಮಂಡ್ಯ: 32-22,
ಮಡಿಕೇರಿ: 24-18, ರಾಮನಗರ: 33-22, ಹಾಸನ: 28-21, ಚಾಮರಾಜನಗರ: 32-22, ಚಿಕ್ಕಬಳ್ಳಾಪುರ: 32-21, ಕೋಲಾರ: 33-22
ತುಮಕೂರು: 32-22, ಉಡುಪಿ: 31-26, ಕಾರವಾರ: 31-27, ಚಿಕ್ಕಮಗಳೂರು: 27-20, ದಾವಣಗೆರೆ: 34-23, ಹುಬ್ಬಳ್ಳಿ: 32-23, ರಾಯಚೂರು: 37-26, ಯಾದಗಿರಿ: 38-26, ವಿಜಯಪುರ: 35-24, ಬೀದರ್: 36-25, ಕಲಬುರಗಿ: 37-26, ಬಾಗಲಕೋಟೆ: 36-24, ಚಿತ್ರದುರ್ಗ: 33-22, ಹಾವೇರಿ: 33-23, ಬಳ್ಳಾರಿ: 37-25, ಗದಗ: 33-23, ಕೊಪ್ಪಳ: 35-24.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ