ನನ್ನ ಚಾರಿತ್ರ್ಯ ವಧೆ ಮಾಡುವ ಮುನ್ನ ಹಿಂತಿರುಗಿ ನೋಡಿಕೊಳ್ಳಿ – ಗರಂ ಆದ ಸ್ಪೀಕರ್ ರಮೇಶ ಕುಮಾರ
ಪ್ರಗತಿವಾಹಿನಿಸುದ್ದಿ, ಬೆಂಗಳೂರು –
ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ನಡೆಯಲಿದ್ದು, ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ.
ಇಂದು ಕೇವಲ ಶಾಸಕರ ಅಭಿಪ್ರಾಯ, ಅದಕ್ಕೆ ಉತ್ತರ ಮತ್ತು ಮತ ಹಾಕುವುದಕ್ಕೆ ಮಾತ್ರ ಸೀಮಿತಗೊಳಿಸಲು ಸ್ಪೀಕರ್ ರಮೇಶ ಕುಮಾರ ನಿರ್ಧರಿಸಿದ್ದು, ಬೇರೆ ಯಾವುದೇ ವಿಷಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನ ಸಿದ್ದರಾಮಯ್ಯ ಪ್ರಸ್ಥಾಪಿಸಿರುವ ಕ್ರಿಯಾಲೋಪಕ್ಕೆ ಮಧ್ಯಾಹ್ನದ ಹೊತ್ತಿಗೆ ರೂಲಿಂಗ್ ನೀಡುವುದಾಗಿ ರಮೇಶ ಕುಮಾರ ತಿಳಿಸಿದರು.
ಆರಂಭದಲ್ಲಿ ತೀವ್ರ ನೊಂದು , ಆಕ್ರೋಶಭರಿತರಾಗಿ ಮಾತನಾಡಿದ ಸ್ಪೀಕರ್, ನನ್ನ ಚಾರಿತ್ರ್ಯವಧೆ ಮಾಡಲು ಯತ್ನಿಸುವವರು ಒಮ್ಮೆ ಹಿಂತಿರುಗಿ ನೋಡಿಕೊಳ್ಳಿ ಎಂದರು.
ನನ್ನ ವಯಕ್ತಿಕ ಜೀವನವನ್ನೊಮ್ಮೆ ನೋಡಿ ಮಾತನಾಡಿ. ಲಕ್ಷ ಲಕ್ಷ ಕೋಟಿ ಸಂಪಾದಿಸಿರುವವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಇತಿಹಾಸ ಸೃಷ್ಟಿಸಬೇಕೆಂದು ಬಯಸುವವನೇ ವಿನಃ ಸ್ವಂತ ಲಾಭಕ್ಕಾಗಿ ಬಂದವನಲ್ಲ ಎಂದು ಅವರು ಹೇಳಿದರು. ನನ್ನ ಬಗ್ಗೆ ಮಾತನಾಡುತ್ತಿರುವ ಬಗ್ಗೆ, ಮಾಧ್ಯಮಗಳಲ್ಲಿ ಬಂದಿರುವ ಬಗ್ಗೆ ತೀರಾ ನೋವಾಗಿದೆ. ಮಾತನಾಡುವ ಮುನ್ನ ವಿಚಾರ ಮಾಡಿಕೊಳ್ಳಿ ಎಂದು ಗಂಭೀರವಾಗಿಯೇ ವಿನಂತಿಸಿದರು.
ನಂತರ, ಬೇರೆ ಯಾವುದೇ ವಿಷಯಕ್ಕೆ ಇಂದು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ, ಮುಖ್ಯಮಂತ್ರಿಗಳು ಮಾತನಾಡಲು ಸೂಚಿಸಿದರು.
ಕುಮಾರಸ್ವಾಮಿ ತಾವು ರಾಜಕೀಯಕ್ಕೆ ಬಂದಾಗಿನಿಂದ ಇಲ್ಲಿಯವರೆಗಿನ ವಿವಿಧಘಟನೆಗಳ ಕುರಿತು ಸವಿಸ್ತಾರವಾಗಿ ಮಾತನಾಡುತ್ತಿದ್ದಾರೆ.
ಸದಸ್ಯರೆಲ್ಲ ಮಾತನಾಡಿ, ಅದಕ್ಕೆ ಮುಖ್ಯಮಂತ್ರಿಗಳ ಉತ್ತರದ ನಂತರ ವಿಶ್ವಾಸ ಗೊತ್ತುವಳಿಗೆ ಮತಕ್ಕೆ ಹಾಕುವ ಪ್ರಕ್ರಿಯೆ ಇದೇ ನಡೆಯುವುದು ಅನುಮಾನ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ