Belagavi NewsBelgaum NewsKannada NewsKarnataka News

ಬೆಂಕಿ ಆಕಸ್ಮಿಕ: ತಕ್ಷಣ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರಿಹಾಳ ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಿಂದ 2 ಮನೆಗಳು ಸುಟ್ಟು ಹೋಗಿದ್ದು, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಕ್ಷಣ ಸ್ಪಂದಿಸಿ, ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.

 ಗುರುಪುತ್ರ ಹಿರವಣ್ಣವರ ಹಾಗೂ ಸಿದ್ದಪ್ಪ ಹಿರವಣ್ಣವರ ಇವರ ಮನೆಗಳು ಆಕಸ್ಮಿಕ ಬೆಂಕಿ ಅನಾಹುತದಿಂದ ಸುಟ್ಟು, ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು, ಬಂಗಾರ, ಬೆಳ್ಳಿ, ಧವಸ ಧಾನ್ಯಗಳು, ಕಾಗದ ಪತ್ರಗಳು ಸುಟ್ಟು ಹೋಗಿವೆ.

ಸುದ್ದಿ ತಿಳಿದ ಕೂಡಲೇ ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕಳಿಸಿದ ಲಕ್ಷ್ಮೀ ಹೆಬ್ಬಾಳಕರ್, ಸಾಂತ್ವನ ಹೇಳಿದ್ದಲ್ಲದೆ ವಯಕ್ತಿಕವಾಗಿ ಹಾಗೂ ಸರಕಾರದಿಂದ ತಕ್ಷಣ ನೆರವು ನೀಡುವ ಭರವಸೆ ನೀಡಿದರು.

 ಈ ಸಮಯದಲ್ಲಿ ಬಸವರಾಜ ಮ್ಯಾಗೋಟಿ, ಯುವರಾಜ ಕದಂ, ಈರಣ್ಣ ಹಿರವಣ್ಣವರ, ಗುಡದಪ್ಪ ಗೊರವ್, ಶಂಕರಗೌಡ ನಿರವಾಣಿ, ಗಿರಿಜಾ ಪಾಟೀಲ, ಗುರು ಅಕ್ಕತಂಗೇರಹಾಳ, ಬಾಳೇಶ್ ಕರವಿನಕೊಪ್ಪ, ಅಶೋಕ ಸಾಳುಂಕೆ, ಬಸವರಾಜ ಚೌಗುಲಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button