ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಜೊಲ್ಲೆ ಸಭೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ನಿಪ್ಪಾಣಿ ನಗರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಸಭೆ ನಡೆಸಿದರು.
ಬೆಳಗಾವಿಯಿಂದ ಸಂಕೇಶ್ವರ – ನಿಪ್ಪಾಣಿ ಮೂಲಕ ಮಹಾರಾಷ್ಟ್ರ ಗಡಿಯವರೆಗೆ 3972 ಕೋಟಿ ರೂ. ಮೊತ್ತದಲ್ಲಿ 6 ಲೈನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯ ನೀಲನಕ್ಷೆ ವೀಕ್ಷಿಸಿದರು.
ನಿಪ್ಪಾಣಿ ಮತಕ್ಷೇತ್ರದ ತವಂದಿ ಘಾಟ್ ಹತ್ತಿರ ಅಪಘಾತ ಹೆಚ್ಚು ಆಗುತ್ತಿರುವ ಕಾರಣ ಅಲ್ಲಿ ಬ್ರಿಡ್ಜ್ ನಿರ್ಮಿಸಿ ವ್ಯವಸ್ಥಿತವಾಗಿ ಮಾಡುವಂತೆ ಸಲಹೆ ಕೊಡಲಾಯಿತು. ಮಾಂಗುರ ಕ್ರಾಸ್ ಮತ್ತು ಸೌಂದಲಗಾ ಕ್ರಾಸ್ ಹತ್ತಿರ ಓವರ್ ಬ್ರಿಡ್ಜ್ ಮಾಡುತ್ತಿದ್ದು, ಮಳೆಗಾಲದಲ್ಲಿ ಮಹಾಪೂರ ಬಂದಾಗ ಮುಂದೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ರೀತಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕಣಗಲಾ ಗ್ರಾಮದ ಬೈರಾಪುರ ಕುಂಬಾರ ಸರ್ಕಲ್ ಹತ್ತಿರ ಕೆಳ ಸೇತುವೆ ನಿರ್ಮಾಣ (ಅಂಡರ್ ಬ್ರಿಡ್ಜ್) ನಿರ್ಮಾಣ ಮಾಡಬೇಕು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕರಾದ ಭುವನೇಶ ಕುಮಾರ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಜೀತ ಬೋಗಾರ, ಗುತ್ತಿಗೆದಾರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ