Uncategorized

*ಬಿಜೆಪಿ ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಕೆಂಡಾಮಂಡಲ; ರಾಜಕಾರಣದಲ್ಲಿ ಕಷ್ಟ ಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೇವೆ. ನೀವು ಬಂದು ಉಗಿದು ಹೋಗ್ತಿರ್ತೀರಿ ಎಂದು ಕಿಡಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿದವರ ವಿರುದ್ಧ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಸಭೆಯಲ್ಲಿ ಕೆಂಡಾಮಂಡಲರಾದ ಘಟನೆ ನಡೆದಿದೆ.

ಪಕ್ಷದ ವಿರುದ್ಧ ಬಿಜೆಪಿ ನಾಯಕರೇ ಬಹಿರಂಗ ಹೇಳಿಕೆ ನೀಡಿತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ಬಿಜೆಪಿ ನಾಯಕರ ವಿವರಣೆ ಪಡೆಯಲಾಯಿತು. ಈ ವೇಳೆ ಹೊಂದಾಣಿಕೆ ರಾಜಕಾರಣದ ಬಗ್ಗೆ ಆರೋಪ ಮಾಡಿದವರ ವಿರುದ್ಧ ಗುಡುಗಿದ ಮಾಜಿ ಸಿಎಂ ಬೊಮ್ಮಾಯಿ, ರಾಜಕಾರಣದಲ್ಲಿ ಕಷ್ಟ ಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೇವೆ. ನೀವು ಬಂದು ಉಗಿದು ಹೋಗ್ತಿರ್ತೀರಿ. ಆರೋಪದ ಶಾಯಿ ತೆಗೆದು ನಮಗೆ ಎಸೆಯುತ್ತಿರುತ್ತೀರಿ ಎಂದು ಫುಲ್ ಗರಂ ಅಗಿದ್ದಾರೆ.

ನೀವು ಆರೋಪ ಮಾಡುತ್ತಿರುತ್ತೀರಿ. ಅದರ ಹಿಂದೆ ಏನಾಗಿರುತ್ತದೆ ಅಂತ ಗೊತ್ತಿರಲ್ಲ ನಿಮಗೆ. ನೀವು ಮಾಡಿರುವ ಕಲೆಯನ್ನು ಅಳಿಸೋಕೆ ಬಹಳ ಸಮಯಬೇಕು. ಈರೀತಿ ಯಾರೂ ಮಾದಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಚುನಾವಣೆ ಸೋಲಿನ ಬೆನ್ನಲ್ಲೇ ರಾಜ್ಯ ಬಿಜೆಪಿ ಕೆಲ ನಾಯಕರು ಹೊಂದಾಣಿಕೆ ರಾಜಕಾರಣದ ಬಗ್ಗೆ ಅರೋಪಿಸಿದ್ದರು. ಅಲ್ಲದೇ ಪಕ್ಷದ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಇಂದು ತೀಕ್ಷ್ಣವಾಗಿ ಮಾತನಾಡಿದ್ದಾರೆ.

Related Articles

Back to top button