Latest

ಮೈತ್ರಿ ಸರಕಾರಕ್ಕೆ ‘ಆನೆ’ ಬಲವಿಲ್ಲ!

ಮೈತ್ರಿ ಸರಕಾರಕ್ಕೆ ‘ಆನೆ’ ಬಲವಿಲ್ಲ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಸೋಮವಾರ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಮುಖವಾದ ದಿನ. ಸಮ್ಮಿಶ್ರ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಹೇಳಿದೆ. ವಿಶ್ವಾಸಮತ ಗೆಲ್ಲುತ್ತಾ, ಸೋತು ಅಧಿಕಾರದಿಂದ ಕೆಳಗಿಳಿಯುತ್ತಾ ಎನ್ನುವ ಕುತೂಹಲ ಎಲ್ಲರಲ್ಲಿದೆ.

Related Articles

15 ಶಾಸಕರು ರಾಜಿನಾಮೆ ನೀಡಿರುವುದರಿಂದ ಸರಕಾರದ ಬಲ ಕಡಿಮೆಯಾಗಿದೆ. ವಿಶ್ವಾಸ ಗೊತ್ತುವಳಿಯಲ್ಲಿ ಸರಕಾರ ಸೋತರೆ ಬಿಜೆಪಿ ಸರಕಾರ ರಚಿಸುವುದಾಗಿ ಹಕ್ಕು ಮಂಡಿಸಬಹುದು.

ಸಧ್ಯದ ಪರಿಸ್ಥಿತಿಯಲ್ಲಿ ಪಕ್ಷೇತರ ಶಾಸಕ ನಾಗೇಶ ಹಾಗೂ ಕೆಪಿಜೆಪಿ ಶಾಸಕ ಶಂಕರ್ ಸಹ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡುವುದಾಗಿ ಈ ಹಿಂದೆ ಪತ್ರ ನೀಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾಗಾಗಿ ನಿಶ್ಚಿತವಾಗಿ ಬಿಜೆಪಿ ಬಲ ಹೇಳುವುದು ಕಷ್ಟವಾದರೂ 15 ಶಾಸಕರ ರಾಜಿನಾಮೆ ಅಂಗೀಕಾರವಾದರೆ ಅಗತ್ಯ ಬಲ ಪ್ರದರ್ಶನ ಬಿಜೆಪಿಯಿಂದ ಸಾಧ್ಯವಾಗಬಹುದು.

ಈ ಮಧ್ಯೆ ಬಹುಜನ ಸಮಾಜ ಪಕ್ಷದ ಶಾಸಕ ಎನ್.ಮಹೇಶ ತಾವು ಸೋಮವಾರ ಸದನಕ್ಕೆ ಹೋಗುವುದಿಲ್ಲ. ಹೋದರೂ ವಿಶ್ವಾಸಮತ ಪರ ಮತ ಚಲಾಯಿಸುವುದಿಲ್ಲ ಎಂದಿದ್ದಾರೆ. ಪಕ್ಷದ ನಾಯಕಿ ಮಾಯಾವತಿ ತಟಸ್ಥರಾಗಿರುವಂತೆ ಸೂಚಿಸಿದ್ದರಿಂದ ತಾವು ಹಾಗೆ ಮಾಡುವುದಾಗಿ ಮಹೇಶ ಹೇಳಿದ್ದಾರೆ.

ಹಾಗಾಗಿ ಮೈತ್ರಿ ಸರಕಾರಕ್ಕೆ ಆನೆ ಬಲ (ಆನೆ ಪಕ್ಷದ ಚಿಹ್ನೆ) ಸಿಗುವುದು ಸಂಶಯವಾಗಿದೆ. ಇದರಿಂದಾಗಿ ಮತ್ತೊಂದು ಮತವನ್ನು ಸರಕಾರ ಕಳೆದುಕೊಳ್ಳಬಹುದು.

ಈವರೆಗಿನ ಬೆಳವಣಿಗೆ ಗಮನಿಸಿದರೆ ಸರಕಾರದ ಪರ 98 ಮತ್ತು ವಿರುದ್ಧ 107 ಮತ ಬರುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಏನೇನು ಮ್ಯಾಜಿಕ್ ನಡೆಯುತ್ತದೆ ಕಾದು ನೋಡಬೇಕಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button