Latest

ಕನ್ನಡ ಕಟ್ಟುವ ಕಾರ್ಯದಲ್ಲಿ ಕಂಕಣಬದ್ಧರಾಗಬೇಕಿದೆ -ಹುಕ್ಕೇರಿ ಶ್ರೀ

 

ಪ್ರಗತಿವಾಹಿನಿ ಸುದ್ದಿ, ನಿಡಸೋಸಿ
ಪ್ರಯಾಗದಲ್ಲಿ, ವಾರಣಾಸಿಯಲ್ಲಿ ಕಾಶಿ ಜಂಗಮವಾಡಿ ಮಠ ಕರ್ನಾಟಕವನ್ನು ಉಳಿಸಿ ಬೆಳೆಸುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಪಂಚ ಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಸಿಂಹಾಸನ ಜಂಗಮವಾಡಿ ಮಠ ಇವತ್ತು ಕನ್ನಡದ ಉಳಿವಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಹುಕ್ಕೇರಿ ತಾಲೂಕಿನ ನಿಡಸೋಸಿಯಲ್ಲಿ ಜರುಗಿದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾನಿಧ್ಯವಹಿಸಿ ಮಾತನಾಡಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಸ್ವಾಮಿಗಳಿಗೆ ವಿದ್ಯಾದಾನವನ್ನು ಮಾಡುವುದರ ಮುಖಾಂತರ ಇವತ್ತು ಶತಮಾನದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಕಾಶಿ ಜಂಗಮವಾಡಿ ಮಠ, ಕಾಶಿಯಲ್ಲಿ ಮತ್ತು ಪ್ರಯಾಗದಲ್ಲಿ ತನ್ನ ಮಠವನ್ನು ಹೊಂದಿದೆ. ಜೊತೆಗೆ ಅಲ್ಲಿ ಕನ್ನಡದ ನಾಮಫಲಕವನ್ನು ಕೂಡ ಶ್ರೀ ಮಠದ ಮುಂದೆ ಇರುವುದನ್ನು ನೋಡಿದರೆ ಕನ್ನಡದ ಉಳಿವಿಗೆ, ಉಳಿವಿಗಾಗಿ ಕಾಶಿ ಪೀಠ ಶ್ರಮಿಸುತ್ತಿದೆ. ಸದ್ಯದ ಜಗದ್ಗುರುಗಳಾದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು 18 ಭಾಷೆಯಲ್ಲಿ ಸಿದ್ಧಾಂತ ಶಿಖಾಮಣಿಯನ್ನು ಅನುವಾದ ಮಾಡುವುದರ ಜತೆ ವಿಶ್ವ ವಿಖ್ಯಾತರಾಗಿದ್ದಾರೆ. ಇವತ್ತು ಕನ್ನಡ ಉಳಿವಿಗಾಗಿ ಶ್ರೀಮಠ ಶ್ರಮಿಸುತ್ತಿದೆ ಎಂದು ಹೇಳಿದರು.

Home add -Advt

ಇದೆ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಮಠ ಮಾನ್ಯಗಳಿಂದ ಇವತ್ತು ಶಿಕ್ಷಣ ಉಳಿದಿದೆ. ಜಾತಿ ಮತ ಪಂಥವೆನ್ನದೇ ಎಲ್ಲರಿಗೂ ಶಿಕ್ಷಣ ನೀಡುತ್ತಿರುವ ವೀರಶೈವ ಮಠಗಳ ಪಾತ್ರ ಅನನ್ಯ ಎಂದರು.

ಸಮ್ಮೇಳನದ ಅಧ್ಯಕ್ಷ ಎಲ್. ವಿ. ಪಾಟೀಲ್ ಮಾತನಾಡಿ, ಹುಕ್ಕೇರಿ ತಾಲೂಕಿನಲ್ಲಿ ನಿಡಸೋಶಿ ಹಾಗೂ ಹುಕ್ಕೇರಿ ಶ್ರೀಮಠಗಳು ಕನ್ನಡದ ಮಠಗಳಾಗಿ ಬೆಳೆದು ನಿಂತು, ಗಡಿಭಾಗದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಕನ್ನಡದ ಕಾಳಜಿಯನ್ನು ಕೇವಲ ವೇದಿಕೆ ಮುಖಾಂತರ ಮಾಡಿದರೆ ಸಾಲದು ಕನ್ನಡದ ಅಧ್ಯಯನ, ಕನ್ನಡದ ಶಿಕ್ಷಣ, ಕನ್ನಡದ ಬಳಕೆ ಇದರಿಂದ ಕನ್ನಡ ಉಳಿಯುವುದರಲ್ಲಿ ಎರಡು ಮಾತಿಲ್ಲ. ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ನಾವೆಲ್ಲಾ ಸನ್ನದ್ಧರಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಮಾತನಾಡಿ, ಹುಕ್ಕೇರಿ ತಾಲೂಕು ಚಂದ್ರಶೇಖರ್ ಕಂಬಾರ ಅವರಂತ ದಿಗ್ಗಜರನ್ನು ಪಡೆದಿದೆ. ಘೋಡಗೇರಿ ಅವರ ಸಮಗ್ರ ಸಾಹಿತ್ಯದ ಅಧ್ಯಯನ ಮಾಡುವ ವಿಶಿಷ್ಟ ಗ್ರಾಮವಾಗಲಿ, ಅದು ಯಾತ್ರಾಸ್ಥಳವಾಗಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರಕಾಶ್ ದೇಶಪಾಂಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅನೇಕ ಸಾಹಿತಿಗಳನ್ನು ಸನ್ಮಾನಿಸಲಾಯಿತು.

Related Articles

Back to top button