ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಟ್ಯಾಕ್ಸಿ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ದರ ಏರಿಕೆ ಬರೆ ನೀಡಿದೆ. ಎಲ್ಲಾ ಬಗೆಯ ಟ್ಯಾಕ್ಸಿ ಲಗೇಜ್, ಕಾಯುವಿಕೆ ಮತ್ತು ಇನ್ನಿತರೆ ದರಗಳನ್ನು ನಿಗದಿ ಪಡಿಸಿ ಆದೇಶ ಹೊರಡಿಸಿದೆ.
ಹವಾನಿಯಂತ್ರಿತ ಟ್ಯಾಕ್ಸಿಗಳಿಗೆ 4 ಕಿ.ಮೀ ವರೆಗೆ 100 ರೂ. ನಂತರ ಪ್ರತಿ ಕೀ.ಮೀಗೆ 24 ರೂ. ನಿಗದಿ ಮಾಡಿದೆ. ಹವಾನಿಯಂತ್ರಣ ರಹಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕೀ.ಮೀವರೆಗೆ 75 ರೂ ಮತ್ತು ನಂತರ ಪ್ರತಿ ಕಿ.ಮೀಗೆ 18 ರೂ ದರ ನಿಗದಿ ಮಾಡಿದೆ.
ಟ್ಯಾಕ್ಸಿಗಳ ಕಾಯುವಿಕೆ ದರ, ಲಗೇಜ್ ದರ ಮತ್ತು ರಾತ್ರಿ ದರಗಳನ್ನು ಸಹ ನಿಗದಿ ಮಾಡಿದ್ದು, ಇಂದು ರಾತ್ರಿಯಿಂದಲೇ ನೂತನ ದರ ಜಾರಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ