Latest

ಕೇಂದ್ರ ಬಜೆಟ್ : ಶೇರು ಮಾರುಕಟ್ಟೆಯಲ್ಲಿ ಗೂಳಿ ಜಿಗಿತ

ಪ್ರಗತಿವಾಹಿನಿ ಸುದ್ದಿ; ಮುಂಬೈ: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಶೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ ನಲ್ಲಿ ಶೇ. 5ರಷ್ಟು ಏರಿಕೆಯಾಗಿದೆ.

ಕೇಂದ್ರ ಬಜೆಟ್ ನಲ್ಲಿ ವಿಮಾ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆಯ ಮೇಲಿನ ಮೊತ್ತ ಹೆಚ್ಚಿಸುವ ಮತ್ತು ಆರೋಗ್ಯ ವೆಚ್ಚ ದ್ವಿಗುಣಗೊಳಿಸುವ ಯೋಜನೆಗಳನ್ನು ರೂಪಿಸಿದ್ದಾರೆ. ಇದರ ಬೆನ್ನಲ್ಲೇ ಬೆಂಚ್ ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಶೇ.5ರಷ್ಟು ಏರಿಕೆಯಾಗಿವೆ.

Home add -Advt

ಬಜೆಟ್ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 2314.84 ಅಂಕ ಅಥವಾ ಶೇ.5ರಷ್ಟು ಏರಿಕೆ ಕಂಡು 48,600.61 ಅಂಕಗಳಿಗೆ ತಲುಪಿದೆ. ಇತ್ತ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 646.60 ಅಂಕ ಅಥವಾ ಶೇ.4.74ರಷ್ಟು ಏರಿಕೆ ಕಂಡು 14,281.20 ಅಂಕಗಳಿಗೆ ತಲುಪಿದೆ.

ಎಸ್ ಬಿಐ, ಏರ್ ಟೆಲ್, ಕೊಟಕ್, ಐಸಿಐಸಿಐ ಬ್ಯಾಂಕ್ ಸೆನ್ಸೆಕ್ಸ್ ಗಳಿಕೆಯಲ್ಲಿ ಏರಿಕೆ ಕಂಡಿದ್ದು, ಮಹೀಂದ್ರಾ ಮತ್ತು ಹೆಚ್ ಯು ಎಲ್ ಇಳಿಕೆ ಕಂಡಿದೆ.

Related Articles

Back to top button