Kannada NewsKarnataka NewsLatest

*ಲಂಚಕ್ಕೆ ಕೈಯೊಡ್ಡಿದ್ದ ಅಧಿಕಾರಿ; 15 ಕಿ.ಮೀ ಚೇಸ್ ಮಾಡಿ ಫುಡ್ ಇನ್ಸ್ ಪೆಕ್ಟರ್ ನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಹಾರ ನಿರೀಕ್ಷಕ ಟ್ರೇಡಿಂಗ್ ಲೈಸೆನ್ಸ್ ಗಾಗಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದಾಗ ಸಿನಿಮೀಯ ರೀತಿಯಲ್ಲಿ ಅಧಿಕಾರಿಯನ್ನು ಚೇಜ್ ಮಾಡಿ ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಫುಡ್ ಇನ್ಸ್ ಪೆಕ್ಟ ಮಹಂತೇಗೌಡ ಬಂಧಿತ ಆರೋಪಿ. ಕೆ.ಜಿ.ಸರ್ಕಲ್ ಬಳಿ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಮಹಂತೇಗೌಡ ಬಿ ಕಡಬಾಳು ಕೆಲಸ ಮಾಡುತ್ತಿದ್ದರು. ರಂಗದಾಮಯ್ಯ ಎಂಬುವವರಿಗೆ ಟ್ರೇಡ್ ಲೈಸನ್ಸ್ ಮಾದಿಕೊಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.

ಮುಂಗಡ ಹಣವಾಗಿ 43 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಫುಡ್ ಇನ್ಸ್ ಪೆಕ್ಟರ್ ಮಹಂತೇಗೌಡ ತಪ್ಪಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಈ ವೇಳೆ ಸುಮಾರು 15 ಕಿ.ಮೀ ವರೆಗೆ ಲೋಕಾಯುಕ್ತ ಪೊಲೀಸರು ಫುಡ್ ಇನ್ಸ್ ಪೆಕ್ಟರ್ ನನ್ನು ಹಿಂಬಾಲಿಸಿಕೊಂಡು ಹೋಗಿ ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಬಳಿ ಕಾರನ್ನು ಸುತ್ತುವರಿದಿದ್ದಾರೆ. ಈ ವೇಳೆ ಲೋಕಾಯುಕ್ತ ಪೊಲೀಸರ ಮೇಲೆಯೇ ಕಾರು ಹಾಯಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಲೋಕಾಯುಕ್ತ ಪೊಲೀಸರು ಮಹಾಂತೇಗೌಡನನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button