*ಸದನದಲ್ಲಿ ನಡೆದ ಘಟನೆ ವಿಷಾದಕರ; ರಾಜಕಾರಣಿಗಳು ಮೌಲ್ಯಗಳನ್ನು ಪಾಲಿಸಬೇಕು; ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಖಡಕ್ ಮಾತು*
ಪ್ರಗತಿವಾಹಿನಿ ಸುದ್ದಿ; ಹಾಸನ: ವಿಧಾನಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಮೇಲೆ ಕಾಗದು ಹರಿದು ಎಸೆದ ವಿದ್ಯಮಾನಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಹೆಗ್ಡೆ, ನಿನ್ನೆ ಸದನದಲ್ಲಿ ನಡೆದ ಘಟನೆ ವಿಷಾದಕರ. ನಮ್ಮ ರಾಜಕಾರಣಿಗಳು ಕೆಲವು ಮೌಲ್ಯಗಳನ್ನು ಪಾಲಿಸಬೇಕು. ಸದನದ ಶಿಸ್ತನ್ನು ಕಾಯ್ದುಕೊಳ್ಳಬೇಕು ಎಂದರು.
ವಿಧನಸಭೆಯಲ್ಲಿ ಸ್ಪೀಕರ್ ಹುದ್ದೆ ಅತ್ಯುನ್ನತವಾದದ್ದು, ಅವರು ಹೇಳಿದ್ದನ್ನು ಸದನದಲ್ಲಿ ಒಪ್ಪಿಕೊಳ್ಳಬೇಕು. ಸದನದೊಳಗೆ ಸರಿ ತಪ್ಪು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು. ಭಿನ್ನಭಿಪ್ರಾಯವಿದ್ದರೆ ಹೊರಗೆ ಬಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳಬಹುದು. ಬೇರೆದಾರಿಯಿದೆ.ಆದರೆ ಸದನದಲ್ಲಿ ಮನಬಂದಂತೆ ವರ್ತಿಸುವುದು, ಪ್ರತಿಭಟಿಸುವುದು ಸರಿಯಲ್ಲ ಎಂದರು.
ಸರ್ಕಾರ ತಮಗೆ ಸಂಬಳ ಕೊಡುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು. ನಾವು ಮಾಡಬೇಕಾದ ಕೆಲಸವೇನು? ಅಜೆಂದಾದಲ್ಲಿ ಏನಿದೆ ಎಂಬುದನ್ನು ಮುಗಿಸುವ ಕೆಲಸವನ್ನು ಮಾಡಬೇಕು ಹೊರತು ಈರೀತಿ ಸದನದ ಸಮಯ ವ್ಯರ್ಥವಾಗುಂತೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ