*ಬೆಳಗಾವಿಯಲ್ಲಿ ಪ್ರವಾಹ ಭೀತಿ; 12ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ; ಜನಜೀವನ ಅಸ್ತವ್ಯಸ್ಥ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಬೆಳಗವೈ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳ ಒಳಹರಿವು ಹೆಚ್ಚಳವಾಗಿದ್ದು, ಹಲವೆಡೆ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಘಟಪ್ರಭಾ, ಮಲಪ್ರಭಾ, ದೂದ್ ಸಾಗರ್, ವೇದಗಂಗಾ, ಹಿರಣ್ಯಕೇಶಿ ನದಿಗಳು ಅಪಾಯದಮಟ್ಟದಲ್ಲಿ ಹರಿಯುತ್ತಿವೆ. ಬೆಳಗಾವಿಯಲ್ಲಿ ಸುಮಾರು 12 ಸೇತುವೆಗಳು ಮುಳುಗಡೆಯಾಗಿದ್ದು, ಗ್ರಾಮಗಳು ಜಲಾವೃತವಾಗಿವೆ.
ಭೋಜ್-ಕರಾದಗಾ, ಭೋಜವಾಡಿ-ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರ್ವಾಡ್-ಕುನ್ನೂರು, ಸಿದ್ನಾಳ್-ಅಕ್ಕೊಳ್, ಭೋಜ್ ಕುನ್ನೂರ್, ಭೀವಶಿ-ಜತ್ರಾಟ್, ಮಂಜರಿ-ಬಿ.ಸಂವೌಂದತ್ತಿ, ಮಂಗವಟ್ಟಿ-ರಾಜಾಪುರ, ಗೋಕಾಕ್ ಹಿಲ್-ಶಿಂಗಲಾಪುರ್, ಕುರ್ಣಿ-ಕೊಚಾರಿ, ಶೆಟ್ಟಿಹಳ್ಳಿ-ಮರನಹೊಳ್, ಖಾನಾಪುರ-ಹೆಮ್ಮಡಗಾ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ