ಟ್ರೆಕ್ಕಿಂಗ್ ಪಾಯಿಂಟ್, ಕುಕ್ಕೆ ಬಳಿಯ ಕಾಡು ಪ್ರವೇಶಕ್ಕೆ ನಿರ್ಬಂಧ
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ವರುಣಾರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಈ ನಡುವೆ ಭೂಕುಸಿತ, ಗುಡ್ಡಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಚಾರ್ಮಡಿ ಘಾಟ್ ನಲ್ಲಿ ಕೆಲವೆಡೆ ಈಗಾಗಲೇ ಭೂಕುಸಿತವುಂಟಾಗಿದ್ದು ಸ್ಥಳೀಯರು ಜೀವಭಯದಲ್ಲಿ ಕಾಲಕಳೆಯುತ್ತಿದ್ದಾರೆ. ಈ ನಡುವೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಚಾರ್ಮಡಿ ಘಾಟ್ ನಲ್ಲಿ 34 ಕಡೆ ಭುಕುಸಿತವುಂಟಾಗುವ ಸಾಧ್ಯತೆ ಇದ್ದು, ಯಾವೆಲ್ಲ ಸ್ಥಳಗಳಲ್ಲಿ ಭೂಕುಸಿತವಾಗಬಹುದೆಂದು ಗುರುತಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಛಾರ್ಮಡಿ ಘಾಟ್ ನ 34 ಕಡೆಗಳಲ್ಲಿ ಭೂಕುಸಿತವಾಗಬಹುದುದಾದ ಸಾಧ್ಯತೆ ಬಗ್ಗೆ ಜಾಗಗಳನ್ನು ಗುರುತು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುರುಗನ್ ತಿಳಿಸಿದ್ದಾರೆ.
ಪ್ರವಾಹ ಸಾಧ್ಯತೆಯಿಂದ ರಸ್ತೆ, ಗುಡ್ಡ ಸೇರಿದಂತೆ ಹಲವೆಡೆ ಭೂಕುಸಿತವಾಗುವ ಸಂಭವವಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಲ್ಕು ದಾರಿಗಳಿದ್ದು, ಅದರಲ್ಲಿ ಎರಡು ದಾರಿಗಳು ಭೂಕುಸಿತದಿಂದ ಬಂದ್ ಆಗಿವೆ. ಹಾಗಾಗಿ ಯಾತ್ರಿಕರು, ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ ಮುಂದೂಡಿ ಎಂದು ಮನವಿ ಮಾಡಿದ್ದಾರೆ.
ರೆಡ್ ಅಲರ್ಟ್ ಇರುವ ಸ್ಥಳಗಳಲ್ಲಿ ರಸ್ತೆ ಪ್ರಯಾಣ ಸೂಕ್ತವಲ್ಲ. ಯಾವುದೇ ರಸ್ತೆ ಬಿರುಕು ಬಿಟ್ಟಿದ್ದು ಗಮನಕ್ಕೆ ಬಂದರೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ. ದೇವಸ್ಥಾನಕ್ಕೆ ಬರುವವರು ನೀರಿಗೆ ಇಳಿಯುವಂತಿಲ್ಲ, ದೇವರ ದರ್ಶನವಷ್ಟೆ ಪಡೆದು ವಾಪಸ್ ಆಗಬೇಕು. ಟ್ರೆಕ್ಕಿಂಗ್ ಪಾಯಿಂಟ್, ಕುಕ್ಕೆ ಬಳಿಯ ಕಾಡು ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ನಿಯಮ ಮೀರಿ ಪ್ರವೇಶ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ