Kannada NewsLatestNational

*ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಿದ ದಂಪತಿ*

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಐಫೋನ್ ಖರೀದಿಗೆ ದಂಪತಿ 8 ತಿಂಗಳ ಮಗುವನ್ನೇ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಸತಿ ಹಾಗೂ ಜೈದೇವ್ ಎಂಬ ದಂಪತಿ ಮೊಬೈಲ್ ಖರೀದಸಲು ತಮ್ಮ ಮಗುವನ್ನು ಮಾರಿದ್ದಾರೆ. ದಂಪತಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಅಲ್ಲದೇ ಅಕ್ಕಪಕ್ಕದವರ ಬಳಿ ಆಗಾಗ ಸಾಲ ಕೇಳಿ ಪಡೆಯುತ್ತಿದ್ದರು. ಈ ಮಧ್ಯೆ ದಂಪತಿ ಇನ್ ಸ್ಟಾಗ್ರಾಂ ರೀಲ್ಸ್ ಮಾಡಲು ಐಫೋನ್ ಖರೀದಿಸಲು ತೀರ್ಮಾನಿಸಿದ್ದರು. ಆದರೆ ಫೋನ್ ಖರೀದಿಸುವಷ್ಟು ಹಣ ಇರಲಿಲ್ಲ.

ಐಫೋನ್ ಖರೀದಿಗೆ ತಮ್ಮ ಮಗುವನ್ನೇ ಮಹಿಳೆಯೊಬ್ಬರಿಗೆ ಮಾರಿದ್ದಾರೆ. ಬಳಿಕ ಐಫೋನ್ ಖರೀದಿಸಿದ್ದೂ ಅಲ್ಲದೆ ಆರ್ಥಿಕವಾಗಿ ಸಬಲರಾಗಿದ್ದಾರೆ. ಇತ್ತೀಚೆಗೆ ದಂಪತಿ ಇದ್ದಕ್ಕಿದ್ದಂತೆ ಬದಲಾಗಿದ್ದನ್ನು ಕಂಡು ಅಕ್ಕಪಕ್ಕದವರಿಗೆ ಅಚ್ಚರಿಯಾಗಿದೆ. ಅಲ್ಲದೇ ಅವರ 8 ತಿಂಗಳ ಮಗು ಕೂಡ ಕಾಣಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡು ನೆರೆಹೊರೆಯವರು ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ದಂಪತಿ ಮಗು ಮಾರಿದ್ದಾಗಿ ತಿಳಿಸಿದ್ದಾರೆ.

ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಮಗುವಿನ ತಾಯಿ ಸತಿ ಹಾಗೂ ಮಗುವನ್ನು ಖರೀದಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆ ಜೈದೇವ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

Home add -Advt

Related Articles

Back to top button