Kannada NewsKarnataka NewsLatestPolitics

*ಪ್ರವಾಹದಲ್ಲಿ ಕೊಚ್ಚಿ ಹೋದರೂ ಬಚಾವ್ ಆಗಿ ಜೀವರಕ್ಷಣೆಗಾಗಿ ರಾತ್ರಿಯಿಡಿ ಮರವೇರಿ ಕುಳಿತ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ; ಕೊಲ್ಲಾಪುರ: ಮಹಾರಾಷ್ಟ್ರದಾದ್ಯಂತ ಧಾರಾಕಾರ ಮಳೆಯಿಂದಾಗಿ ನದಿಗಳು ಪ್ರವಾಹದಂತೆ ಅಬ್ಬರ್ಸುತ್ತಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಪವಾಡದ ರೀತಿಯಲ್ಲಿ ಪಾರಾದ ಘಟನೆ ಕೊಲ್ಲಾಪುರ-ಸಾಂಗ್ಲಿ ಗಡಿಭಾಗದಲ್ಲಿ ನಡೆದಿದೆ.

ಕೊಲ್ಹಾಪುರ-ಸಾಂಗ್ಲಿ ಜಿಲ್ಲೆಯ ಗಡಿಭಾಗದ ಮಾಂಗ್ಲೆ-ಕಾಖೆ ಸೇತುವೆ ಬಳಿ ಗುರುವಾರ ರಾತ್ರಿ 9 ಪ್ರವಾಹದ ನೀರಿನಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿ ಲದೇವಾಡಿ ಗ್ರಾಮದ ಬಜರಂಗ ಖಾಮಕರ್ (58) ಪ್ರವಾದ ಮಧ್ಯೆ ಮರಕ್ಕೆ ಸಿಲುಕಿ ರಾತ್ರಿಯೆಲ್ಲ ಮರದಲ್ಲೇ ಕಾಲಕಳೆದಿದ್ದಾರೆ.

Home add -Advt

ಪ್ರವಾಹದ ನೀರಿನಲ್ಲಿ ಸುಮಾರು 700 ಮೀಟರ್ ನಷ್ಟು ಕೊಚ್ಚಿ ಹೋದ ಭಜರಂಗ, ವಾರಣಾ ನದಿಯ ಮಧ್ಯದಲ್ಲಿರುವ ಮರಕ್ಕೆ ಅಪ್ಪಳಿಸಿದ್ದರು. ಈ ವೇಳೆ ಮರದ ಕೊಂಬೆಗಳ ನ್ನು ಹಿಡಿದು ಮರವೇರಿ ಕುಳಿತು ಸಹಾಯಕ್ಕಾಗಿ ಮೊರೆ ಇಟಿದ್ದಾರೆ.

ರಾತ್ರಿ ಸಹಾಯಕ್ಕಾಗಿ ಕೂಗಿದರೂ ಯಾರೂ ಬರಲಿಲ್ಲ. ಬೆಳಗಾಗುವವರೆಗೂ ಮರದ ಕೊಂಬೆ ಮೇಲೆಯೇ ಕುಳಿತು ಜೀವಭಯದಲ್ಲೇ ಕಾಲಕಳೆದಿದ್ದಾರೆ. ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಹೊಲದಲ್ಲಿರುವ ಜನರು ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಎನ್‌ಡಿಆರ್‌ಎಫ್ ತಂಡ ಬೋಟ್ ಸಾಹಯದಿಂದ ಭಜರಂಗನನ್ನು ರಕ್ಷಿಸಿದೆ.

ಬಜರಂಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆರೋಗ್ಯವಾಗಿರುವುದಾಗಿ ವೈದ್ಯರು ಹೇಳಿದ ಬಳಿಕ ಮನೆಗೆ ಕಳುಹಿಸಿದ್ದಾರೆ.

ಈ ಸಂದರ್ಭದಲ್ಲಿ ಶಿರಾಳಾ ತಹಸೀಲ್ದಾರ್ ಶ್ಯಾಮಲಾ ಖೋತ್ ಪಾಟೀಲ್, ಪನ್ಹಾಳಾ ತಹಸೀಲ್ದಾರ್ ಮಾಧವಿ ಶಿಂಧೆ ಜಾಧವ, ಶಿರಾಳಾ ಪೊಲೀಸ್ ನಿರೀಕ್ಷಕ ಸಿದ್ಧೇಶ್ವರ ಜಂಗಮ, ಕೋಡೋಲಿ ಪೊಲೀಸ್ ಠಾಣೆ ಪಿಎಸ್ ಐ ಶೀತಲಕುಮಾರ ದೋಯಿಜಡ ಉಪಸ್ಥಿರಿದರು.

Related Articles

Back to top button