ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಾಸಕ ಅಭಯ ಪಾಟೀಲ ನೇತೃತ್ವದ ಪರಿವರ್ತನ ಪರಿವಾರ ಸಂಸ್ಥೆಯ ವತಿಯಿಂದ ರಾಜ್ಯದಲ್ಲಿ ಪ್ರ ಪ್ರಥಮವಾಗಿ ಪ್ಯಾರಾ ಗ್ಲೈಡಿಂಗ್ ಕಾರ್ಯಕ್ರಮವನ್ನು ಬೆಳಗಾವಿ ತಾಲೂಕಿನ ಯಳ್ಳೂರಿನ ರಾಜಹಂಸಗಡ ಪರಿಸರದಲ್ಲಿಬುಧವಾರ ಹಾಗೂ ಗುರುವಾರ ಆಯೋಜಿಸಲಾಗಿದೆ.
ಪ್ಯಾರಾ ಗ್ಲೈಡಿಂಗ್ ಕಾರ್ಯಕ್ರಮ ಬೆಳಗ್ಗೆ8.30ರಿಂದ ಸಂಜೆ 6 ಗಂಟೆಯ ವರೆಗೆ ಏರ್ಪಡಿಸಲಾಗಿದ್ದು, ಅದರ ಉದ್ಘಾಟನೆಯನ್ನು ಬೆಳಿಗ್ಗೆ 9 ಗಂಟೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಉದ್ಘಾಟಿಸಲಿದ್ದಾರೆ.
ಗುರುವಾರ ಬೆಳಗ್ಗೆ 8.30ರಿಂದ 9.30ರ ವರೆಗೆ ರಾಜ್ಯದ ಹಲವಾರು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ