Kannada NewsKarnataka NewsLatest
ಮಡಿಕೇರಿಯಿಂದ ನಾಪತ್ತೆಯಾಗಿ ಮಲ್ಪೆ ಸಮುದ್ರದಲ್ಲಿ ಸಮುದ್ರ ಪಾಲಾದ ಬಾಲಕಿಯರು; ಓರ್ವಳ ಸಾವು, ಇನ್ನೊಬ್ಬಳ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿ ಇಲ್ಲಿನ ಮಲ್ಪೆಗೆ ಆಗಮಿಸಿದ್ದ ಇಬ್ಬರು ಬಾಲಕಿಯರು ಸಮುದ್ರದಲ್ಲಿ ಕೊಚ್ಚಿಹೋಗಿದ್ದು ಈ ಪೈಕಿ ಒಬ್ಬಳು ಮೃತಪಟ್ಟಿದ್ದು ಇನ್ನೊಬ್ಬಳನ್ನು ರಕ್ಷಿಸಲಾಗಿದೆ.
ಮಡಿಕೇರಿಯ ಮಾನ್ಯ ಮತ್ತು ಯಶಸ್ವಿನಿ ಮೂರು ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದರು. ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು.
ಶನಿವಾರ ತಡರಾತ್ರಿ ಇಬ್ಬರೂ ಮಲ್ಪೆಗೆ ಆಗಮಿಸಿದ್ದು ಸಮುದ್ರ ಪಾಲಾಗಿದ್ದರು. ಈ ವೇಳೆ ಈಶ್ವರ್ ಎಂಬುವವರು ಸಮುದ್ರಕ್ಕೆ ಧುಮುಕಿ ಇಬ್ಬರ ರಕ್ಷಣೆಗೆ ಮುಂದಾದರು. ಆದರೆ ಭಾರಿ ಅಲೆಗಳ ಹೊಡೆತಕ್ಕೆ ಮಾನ್ಯ ಮೃತಪಟ್ಟಿದ್ದು ಯಶಸ್ವಿನಿಯನ್ನು ಬದುಕಿಸಲಾಗಿದೆ. ಸದ್ಯ ಯಶಸ್ವಿನಿಗೆ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.