ರೆಡ್ ಎಫ್ ಎಂ ಇಂಡೀ ಹೈ ಹಮ್ ಸ್ಟೇಜ್ ನಲ್ಲಿ ಇಂದ್ರಜಿತ್ ಲಂಕೇಶ್ ಪುತ್ರನ ರ‍್ಯಾಂಪ್ ವಾಕ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶದ ಅತಿ ದೊಡ್ಡ ಮತ್ತು ಹೆಚ್ಚು ಪ್ರಶಸ್ತಿ ಪಡೆದ ಖಾಸಗಿ ರೇಡಿಯೋ FM ನೆಟ್‌ವರ್ಕ್‌ಗಳಲ್ಲಿ ಒಂದಾದ RED ಲೈವ್ ಅಡಿಯಲ್ಲಿ ಮಿತ್ರಾಜ್, ಕಬೀರ್ ಕೆಫೆ ಮತ್ತು ಆದಿತ್ಯ ಜತೆಗೆ ಇಂಡೀ ಹೈ ಹಮ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಕಾರ್ಯಕ್ರಮ ನಡೆದಿದ್ದು ಮೂರು ವಿಭಿನ್ನ ಕಲಾವಿದರನ್ನು ಒಂದೇ ಸೂರಿನಡಿ ಕರೆತರುವ ಮತ್ತು ಲೈವ್ ಸಂಗೀತದ ಅನುಭವವನ್ನು ನೀಡುವ ಉದ್ದೇಶದಿಂದ ಕರ್ನಾಟಕದ RED FM ನ ಜನರಲ್ ಮ್ಯಾನೇಜರ್ ಸುರೇಶ್ ಗಣೇಶನ್ ಇಂಡೀ ಹೈ ಹಮ್ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಿದ್ದರು.
“ಮಿತ್ರಾಜ್” 2020 ರಿಂದ ಪಾಪ್ ಸಾಂಗ್ಸ್ ಮತ್ತು ಡ್ಯಾನ್ಸ್ ಜೋಡಿಯಾಗಿದೆ. ಪ್ರತೀಕ್ ಮತ್ತು ಅನ್ಮೋಲ್ ಜೋಡಿ ಇತ್ತೀಚಿನ ದಿನದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದೆ. ಇನ್ನು ನೀರಜ್ ಆರ್ಯ ಸಹ ಆರು ವರ್ಷಗಳಿಂದ ಕಬೀರ್ ಪದ್ಯಗಳನ್ನ ಹಾಡುಗಳನ್ನಾಗಿ ಪ್ರಸೆಂಟ್ ಮಾಡುವುದರಲ್ಲಿ ಫೇಮಸ್ ಆಗಿದ್ದಾರೆ
ಇನ್ನು ಇದೇ ವೇದಿಕೆಯಲ್ಲಿ ಸದ್ಯದಲ್ಲೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿರುವ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ರ‍್ಯಾಂಪ್ ವಾಕ್ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲಿ ಮಿಂಚಿನ ಸಂಚಲನ ಮೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ