ಧಾರವಾಡ ಬಳಿ ಟ್ಯಾಂಕರ್ ಪಲ್ಟಿ: ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರು – ಪುಣಾ ರಾಷ್ಟ್ರೀಯ ಹೆದ್ದಾರಿಯ ಧಾರವಾಡ ಹೈಕೋರ್ಟ್ ಬಳಿ ಬುಧವಾರ ಸಂಜೆ ಟ್ಯಾಂಕರ್ ಒಂದು ಪಲ್ಟಿಯಾಗಿದ್ದು, ಹೆದ್ದಾರಿ ಸಂಚಾರ ಬಂದ್ ಆಗಿದೆ.
ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಯಾವುದೇ ರೀತಿಯ ಅನಾಹುತವಾಗಬಾರದೆನ್ನುವ ಕಾರಣಕ್ಕೆ ಎರಡೂ ಕಡೆ ಸುಮಾರು 2 ಕಿಮೀ ದೂರದಲ್ಲೇ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇನ್ನೂ ಕೆಲವು ಗಂಟೆಗಳ ಕಾಲ ಸಂಚಾರ ಬಂದ್ ಆಗುವುದರಿಂದ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಬೆಳಗಾವಿಯಿಂದ ಸಂಚರಿಸುವ ವಾಹನಗಳಿಗೆ ಗೋಕಾಕ -ಯರಗಟ್ಟಿ – ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಬೆಂಗಳೂರು – ಪುಣಾ ರಾಷ್ಟ್ರೀಯ ಹೆದ್ದಾರಿಯ ಧಾರವಾಡ ಹೈಕೋರ್ಟ್ ಬಳಿ ಬುಧವಾರ ಸಂಜೆ ಟ್ಯಾಂಕರ್ ಒಂದು ಪಲ್ಟಿಯಾಗಿದ್ದು, ಹೆದ್ದಾರಿ ಸಂಚಾರ ಬಂದ್ ಆಗಿದೆ.
Alternative Routes
1)Kittur–Tadakod–Garag–Dharwad and from city limits.
2)Hirebagewadi–Bailahongal–Belawadi –tadakod–Garg–Dharwad.
3) Sankeshwar –Hukkeri–Ghataprabha–Gokak–Yaragatti–Savadatti–Dharwad.
4)Nippani–Chikkodi–Hukkeri–Ghataprabha–Gokak–Yaragatti–Savadatti–Dharwad.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ