ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಬರಿ 10 ವರ್ಷದ ಬಾಲಕನೊಬ್ಬ ಜೈಲು ಸೇರಿದ್ದಾನೆ. ಈತ ಮಾಡಿದ ಘನಘೋರ ತಪ್ಪು ಯಾವುದು ಗೊತ್ತಾ? ತನ್ನ ತಾಯಿಯ ಕಾರಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು!
ಈ ಘಟನೆ ನಡೆದಿರುವುದು ಯುಎಸ್ ನ ಮಿಸ್ಸಿಸಿಪಿಯ ಕಾರ್ ಪಾರ್ಕಿಂಗ್ ಒಂದರಲ್ಲಿ. ಲೆಟೊನ್ಯಾ ಈಸನ್ ಎಂಬುವವರು ವಕೀಲರ ಕಚೇರಿಯೊಂದಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಪುತ್ರ ಕ್ಯಾಂಟವೀಯಸ್ ಈಸನ್ ಕಾರಿನಲ್ಲಿ ಹಿಂಭಾಗದಲ್ಲಿ ಮೂತ್ರ ವಿಸರ್ಜಿಸಿದ್ದನ್ನು ಕಂಡಿದ್ದಾರೆ.
ಇದೇ ದೊಡ್ಡ ರಂಪಾಟವಾಗಿ ಅಲ್ಲಿದ್ದ ಪೊಲೀಸ್ ಆಕ್ಷೇಪಿಸಿದ್ದಾರೆ. ಈ ವೇಳೆ ಬಾಲಕನ ತಾಯಿ ಮಗುವನ್ನು ಪ್ರಶ್ನಿಸಿದಾಗ ಆತ ಇಲ್ಲಿ ಮೂತ್ರಿಖಾನೆ ಇಲ್ಲ ಎಂದು ಸೋದರಿ ಹೇಳಿದ್ದಕ್ಕೆ ಕಾರಲ್ಲಿ ಬಂದು ಮೂತ್ರ ವಿಸರ್ಜಿಸಿದ್ದಾಗಿ ಹೇಳಿಕೊಂಡಿದ್ದಾನೆ. ಪುಟ್ಟ ಬಾಲಕನಾದ ಕಾರಣ ಆತನಿಗೆ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು.
ಆದರೆ ಏಕಾಏಕಿ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡವೊಂದು ಬಾಲಕನನ್ನು ಬಂಧಿಸಿ ಕರೆದೊಯ್ದು ಜೈಲಿಗಟ್ಟಿತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಾಲಕನ ತಾಯಿ, “ನನ್ನ ಮಗ ತಪ್ಪು ಮಾಡಿರುವುದು ನಿಜ. ಆದರೆ ಆತನನ್ನು ಬಂಧಿಸಿರುವುದಕ್ಕೆ ಬೇಸರವಿದೆ” ಎಂದು ಹೇಳಿಕೊಂಡಿದ್ದಾರೆ. ಏತನ್ಮಧ್ಯೆ ಬಾಲಕನನ್ನು ‘ಸೇವೆಗಳ ಅಗತ್ಯವಿರುವ ಮಗು’ ಎಂದು ಪರಿಗಣಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ