Kannada NewsKarnataka NewsLatest
*ಚಂದ್ರಯಾನ-3: ಚಂದ್ರನಂಗಳದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಪ್ರಜ್ಞಾನ್ ರೋವರ್…!*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತದ ಚಂದ್ರಯಾನ-3 ಯಶಸ್ವಿಯಗಿದ್ದು, ಚಂದ್ರನಂಗಳದಲ್ಲಿ ಇಳಿದಿರುವ ಪ್ರಜ್ಞಾನ್ ರೋವರ್ ತನ್ನ ಕೆಲಸವನ್ನು ಆರಂಭಿಸಿದೆ.
ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿದಿರುವ ಪ್ರಜ್ಞಾನ್ ರೋವರ್ ಹಗಲಿನಲ್ಲಿ ಚಂದ್ರನ ತಾಪಮಾನ ಎಷ್ಟಿರಲಿದೆ ಎಂಬ ಪರೀಕ್ಷೆ ನಡೆಸಿದ್ದು, ಅದರ ವರದಿಯನ್ನು ಇಸ್ರೋಗೆ ಕಳುಹಿಸಿದೆ.
ಈ ಕುರಿತು ಇಸ್ರೋ ಮಾಹಿತಿ ಬಿಡುಗಡೆ ಮಾಡಿದೆ. ಚಂದ್ರನ ಅಂಗಳದಲ್ಲಿ 10 ಸೆ.ಮೀ ನಷ್ಟು ಕೊರೆದು ಪರೀಕ್ಷಿಸಿರುವ ಪ್ರಜ್ಞಾನ್ ರೋವರ್, ಚಂದ್ರನಲ್ಲಿ 50 ಡಿಗ್ರಿಯಿಂದ ಮೈನಸ್ 10 ಸೆಲ್ಸಿಯಸ್ ನಷ್ಟು ತಾಪಮಾನ ಇರುತ್ತದೆ ಎಂದು ತಾಪಮಾನ ವರದಿ ರವಾನಿಸಿದೆ. 10 ಸೆನ್ಸರ್ ಗಳ ಮೂಲಕ ಚಂದ್ರನ ನೆಲವನ್ನು ಕೊರೆದು ಪರೀಕ್ಷಿಸಿದೆ. ಪ್ರಜ್ಞಾನ್ ರೋವರ್ ChaSTE ಪರೀಕ್ಷೆ ನಡೆಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ