*ಆ ರೀತಿ ಹೇಳಿದವರು ಇಂದು ಏನಾಗಿದ್ದಾರೆ? ರಾಜಕೀಯದಲ್ಲಿರುವ ಕೆಲವರು ಆ ಯುವಕರ ದಾರಿ ತಪ್ಪಿಸಿದರು; ಡಿಸಿಎಂ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ನೊಣವಿನಕೆರೆ: ಅನೇಕ ದಿನಗಳಿಂದ ನೊಣವಿನಕೆರೆ ಮಠಕ್ಕೆ ಭೇಟಿ ನೀಡಬೇಕು ಅಂದುಕೊಂಡಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಇಂದು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಈ ಮಠಕ್ಕೆ ಬಂದಾಗ ನನಗೆ ಚೈತನ್ಯ ಹೆಚ್ಚುತ್ತದೆ. ನಾನು ಹೆಚ್ಚು ನಂಬುವ ಹಾಗೂ ಪ್ರೀತಿಸುವ ಸ್ಥಳ ಇದು. ಶ್ರೀಗಳ ಆಶೀರ್ವಾದ ನನ್ನ ಮೇಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನೊಣವಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇತ್ತೀಚಿನ ದಿನಗಳಲ್ಲಿ ಕಮಿಷನ್ ವಿಚಾರ ಹಾಗೂ ಮಠದಲ್ಲಿ ಆಣೆ ಪ್ರಮಾಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಆ ರೀತಿ ಹೇಳಿದವರು ಇಂದು ಏನಾಗಿದ್ದಾರೆ? ಅಜ್ಜಯ್ಯನ ಹೆಸರು ತೆಗೆದುಕೊಂಡವರು ನಂತರ ಅದನ್ನು ಹಿಂಪಡೆದಿದ್ದಾರೆ. ಅದೇ ಅಜ್ಜಯ್ಯನ ಶಕ್ತಿ. ನಾನು ತಪ್ಪು ಮಾಡಿದ್ದರೆ ಯೋಚನೆ ಮಾಡಬೇಕು. ಈ ವಿಚಾರದಲ್ಲಿ ಗುತ್ತಿಗೆದಾರರ ತಪ್ಪು ಇಲ್ಲ ಬಿಡಿ. ರಾಜಕೀಯದಲ್ಲಿರುವ ಕೆಲವರು ಆ ಯುವಕರನ್ನು ದಾರಿ ತಪ್ಪಿಸಿದರು ಎಂದು ತಿಳಿಸಿದರು.
ರೇಣುಕಾಚಾರ್ಯ ಅವರು ಸಂಪರ್ಕಿಸಿದ ಬಗ್ಗೆ ಕೇಳಿದಾಗ, “ಈಗ ಆ ಪಟ್ಟಿ ಹೇಳಲಾಗುವುದಿಲ್ಲ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ