Belagavi NewsBelgaum NewsKannada NewsKarnataka NewsLatest

*ಅಪಘಾತದಲ್ಲಿ ಮೃತಪಟ್ಟ ಕಾಡಸಿದ್ದೇಶ್ವರ ಮಠದ ಇಬ್ಬರು ಭಕ್ತರು; ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೋರಾಟದ ವೇಳೆ ಕಾಡಸಿದ್ದೇಶ್ವರ ಮಠದ ಭಕ್ತರಿಬ್ಬರು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಕಾಡಸಿದ್ದೇಶ್ವರ ಮಠದ ಸೇವಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಮೃತಪಟ್ಟ ಇಬ್ಬರು ಭಕ್ತರ ಕುಟುಂಬಕ್ಕೆ ತಕ್ಷಣ ಪರಿಹರ ನೀಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮೂಲಕ ಸರ್ಕಾರಕ್ಕೆ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

ಮುಪ್ಪಿನ ಕಾಡಸಿದ್ದೇಶ್ವರ ಮಠದ ಶಿವಾಪುರ ಸ್ವಾಮೀಜಿಯವರು ಹೋರಾಟ ನಡೆಸುತ್ತಿದ್ದ ವೇಳೆ ಹೋರಾಟದಲ್ಲಿ ಭಾಗಿಯಾಗಿದ್ದ ಭಕ್ತರಿಬ್ಬರು ಅಪಘಾತದ ಸಂದರ್ಭದಲ್ಲಿ ಮೃತ ಪಟ್ಟಿದ್ದು, ಭಕ್ತರ ವಿಷಯದಲ್ಲಿ ಧರ್ಮ ತಾರತಮ್ಯ ಮಾಡುವ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಕಾಡಸಿದ್ದೇಶ್ವರ ಮಠದ ಹೋರಾಟ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಗಂಗಾಧರ ಸ್ವಾಮೀಜಿಯವರು ಬೇರೆ ಕೋಮಿನವರಿಗೆ 25ಲಕ್ಷ ಕೇಳದೆ ಕೊಡುತ್ತೀರಿ, ಮಂತ್ರಿ ಜಹೀರ ಅಹ್ಮದ್, ಹೊಸಪೇಟೆಯಲ್ಲಿ ಆದ ಅಪಘಾತದ ಸಂದರ್ಭದಲ್ಲಿ ತಕ್ಷಣ ಮೃತಪಟ್ಟ ಕುಟುಂಬದವರಿಗೆ 2 ಲಕ್ಷ, ವಕ್ಫ್ ಮಂಡಳಿಯಿಂದ 1 ಲಕ್ಷ ಕೊಡುತ್ತಾರೆ. ಇಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಹುನಗರದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬದವರಿಗೆ 2 ಲಕ್ಷ, ಲಕ್ಷ್ಮಿ ಪೌಂಡೇಷನ್ ನಿಂದ 1ಲಕ್ಷ ಪರಿಹಾರ ಕೊಟ್ಟು ಮಾನವೀಯತೆ ಮೆರೆದರು. ಆದರೆ ಸ್ವತಹ ಜಿಲ್ಲಾ ಮಂತ್ರಿ ಕೇತ್ರದಲ್ಲಿ ಅಪಘಾತದಲ್ಲಿ ಮೃತಪಟ್ಟ ಎರಡು ನಿರಪರಾಧಿ ಜೀವಿಗಳಿಗೆ ಪರಿಹಾರ ನೀಡಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ ಅಪಘಾತದಲ್ಲಿ ಪಾರಾದ ಸದಾ ಗೋ ಸೇವೆಯೇ ತನ್ನ ಬದುಕು ಎಂದು ನಂಬಿದ ಗೋಭಕ್ತ ಪೂಜ್ಯ ಸ್ವಾಮೀಜಿಯವರಿಗೆ ಗೋವಿನ ಸಲುವಾಗಿ ಬರುವ 1,5 ಲಕ್ಷ ಅನುದಾನ ಕಡಿತಮಾಡಲಾಗಿದೆ. ಇದು ನ್ಯಾಯವೆ? ಎಂದು ಪ್ರಶ್ನಿಸಿದರು.

ಈ ನಿಟ್ಟಿನಲ್ಲಿ ನಾವು ತಾರತಮ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಗೊ ಭಕ್ತರ ಮೇಲೆ ಕೇಸ್ ಹಾಕುವುದು, ಮಠಮಂದಿರ ಅನುದಾನ ನಿಲ್ಲಿಸುವುದು, ಈ ರೀತಿ ದ್ವೇಷ ರಾಜಕಾರಣವನ್ನು ನಾವು ಖಂಡಿಸುತ್ತೇವೆ. ತಕ್ಷಣ ಮೃತರ ಕುಟುಂಬದವರಿಗೆ ಪರಿಹಾರ ಕೊಡಬೇಕು ಇಲ್ಲದಿದ್ದರೆ ಧರಣಿ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಹರಿಗುರು ಮಹಾರಾಜ, ರುದ್ರಕೇಸರೀ ಮಠದ ಸ್ವಾಮೀಜಿಯವರು ಚುನಾವಣೆಯಲ್ಲಿ ನಿಮಗೆ ಸ್ವಾಮೀಜಿಯವರ ನೆನಪಾಗುತ್ತದೆ. ಆಗ ಬಸವಣ್ಣನಿಗೆ, ಶಿವಾಜಿ ಮಹಾರಾಜರಿಗೆ 500ರೂ, 1000ರೂ ಹಾರ ಹಾಕ್ತೀರಿ. ನಿಮಗೆ ಅವರ ನೀತಿ ಬೇಡ ಅವರ ಜಾತಿಯ ಓಟು ಬೇಕು. ಈಗ ಪಂಚಾಕ್ಷರಿ ಹಿರೇಮಠ ಬಸವತತ್ವದ ಆರಾಧಕ, ಪಾಂಡುರಂಗ ಜಾಧವ ಶಿವಾಜಿಯ ವಂಶಸ್ಥ, ಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಬಸವತತ್ವದಂತೆ, ಶಿವಾಜಿಯ ಆದರ್ಶದಂತೆ ಬದಕುತ್ತಿದ್ದಾರೆ. ಕೈ ಮುರಿದರೂ ತಮ್ಮ ಗೋ ಸೇವೆ ನಿಲ್ಲಿಸಲಿಲ್ಲ, ಭಕ್ತರ ಸೇವೆ ನಿಲ್ಲಿಸಲಿಲ್ಲ. ರಾಜಕಾರಣಿಗಳಿಗೆ ಹೇಗೆ ನಿಮ್ಮ ಕಾರ್ಯ ಕರ್ತರು ಶ್ರೇಷ್ಟರೋ ಸಂತರಾದ ನಮಗೆ ನಮ್ಮ ಭಕ್ತರೇ ಪರಮಾತ್ಮ ಸ್ವರೂಪಿ. ನಿಮಗೆ ಪಕ್ಷ ಬದಲಾದಾಗ ಕಾರ್ಯ ಕರ್ತರು ಬದಲಾಗಬಹುದು, ನಮಗೆ ಹಾಗಲ್ಲ ಒಮ್ಮೆ ಭಕ್ತರು ಕೋನೆತನಕ ಭಕ್ತರೆ. ಹಾಗಾಗಿ ನಮ್ಮ ಭಕ್ತರಿಗೆ ಅನ್ಯಾಯ ಆದಾಗ ನಾವು ಬೀದಿಗೆ ಇಳಿಯಲೇ ಬೇಕಾಗುತ್ತದೆ. ಬೇರೆಯವರಿಗೆ ಪರಿಹಾರ ಕೊಟ್ಟಂತೆ ನಮ್ಮ ಭಕ್ತರಿಗೂ ಪರಿಹಾರ ಕೋಡಿ. ನಮಗೆ ಗೋಮಾತೆ ನಮ್ಮ ತಾಯಿ, ಗೋಹತ್ಯೆ ಆಗಬಾರದು ಎಂದು ಕಾಯ್ದೆ ಉಳಿಸುವ ಧರ್ಮ ಕಾರ್ಯಕ್ಕೆ ಅಂತ ಬಂದವರು ನಮ್ಮ ಭಕ್ತರು, ಮುಪ್ಪಿಮಠದ ಸ್ವಾಮೀಜಿಯವರು. ಹಾಗಾಗಿ ಕಾವಿ ಬಟ್ಟೆ ಹಾಕಿದ ನಮಗೆ ಬಸವಣ್ಣ, ಶಿವಾಜಿ ತತ್ವ ಮುಖ್ಯ.ನಮಗೆ ಎಲ್ಲರೂ ಒಂದೆ. ಸಕಲಜೀವಿಗಳ ಲೇಸು ಬಯಸುವ ನಮಗೆ ಯಾವದೇ ಜಾತಿಯನ್ನ ಖುಷಿ ಪಡಿಸಿ ಮಂತ್ರಿ ಆಗಬೇಕಿಲ್ಲ. ತಕ್ಷಣ ಪರಿಹಾರ ಕೋಡಿ. ಇಲ್ಲವಾದರೆ ನಾವೂ ಕಾವಿ ಹಾಕಿ ರಸ್ತೆ ಮೇಲೆ ಕುಳಿತರೆ ಅದರಿಂದ ಆಗುವ ಅನಾಹುತಕ್ಕೆ ನೀವೇ ಜವಾಬ್ದಾರರು ಎಂದರು.

ನಮ್ಮ ಭಕ್ತರು ಧರ್ಮ ರಕ್ಷಣೆ, ಗೋ ಮಾತೆಯ ರಕ್ಷಣೆಗೆ ಹೋರಾಟದಲ್ಲಿ ಬಾಗಿಯಾಗಲು ಬಂದವರು. ಚುನಾವಣೆಗೆ ಮೊದಲು ಗೋವಿನ ಬಗ್ಗೆ, ಲವ್ ಜೇಹಾದ ಬಗ್ಗೆ ದೊಡ್ಡ,ದೊಡ್ಡ ಬಾಷಣ ಬಿಗಿಯುವ ಗೋರಕ್ಷಕ ಪಕ್ಷ ಎಂದು ಬೀಗುವ ಬಿಜೆಪಿ ಈಗ ಎಲ್ಲಿ ಮಲಗಿದೆ. ನಮಗೆ ಹಿಂದೂ ಧರ್ಮ ಮುಖ್ಯ ನಮಗೆ ನಮ್ಮ ಭಕ್ತರಿಗೆ ಪರಿಹಾರ ಕೋಡಿ. ಇಲ್ಲದಿದ್ದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಮುಕ್ತಾನಂದ ಸ್ವಾಮೀಜಿಯವರು ಮಾತನಾಡಿ, ಕಾಂಗ್ರೆಸ್ ಗೆ ಎಲ್ಲರೂ ಮತ ನೀಡಿದ್ದರಿಂದ ಅಧಿಕಾರಕ್ಕೆ ಬಂದೀದ್ದೀರಿ. ಹಿಂದೂಗಳು ನಿಮಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡದೆ ಎಲ್ಲಾ ಮತದಾರರ ಕ್ಷೇತ್ರದಲ್ಲೂ ಒಂದೇ ನ್ಯಾಯ ಇರಲಿ. ಧರ್ಮ ಮಾರ್ಗ ತಪ್ಪಿದರೆ ನಮ್ಮ ಶಿಷ್ಯರ ಸಲುವಾಗಿ ಧರ್ಮ ದಂಡ ಹಿಡಿಯಲೇ ಬೇಕಾಗುತ್ತದೆ ಹಾಗಾಗಿ ಮೃತ ಭಕ್ತರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button