Latest

ಸ್ಪೀಕರ್ ರಮೇಶಕುಮಾರ ರಾಜಿನಾಮೆ

ಸ್ಪೀಕರ್ ರಮೇಶಕುಮಾರ ರಾಜಿನಾಮೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಕಳೆದ 14 ತಿಂಗಳಿನಿಂದ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಕುಮಾರ ಸ್ಪೀಕರ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಮೇಶಕುಮಾರ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ -ಜೆಡಿಎಸ್ ನನ್ನನ್ನು ಸೂಚಿಸಿದ್ದರೂ ಎಲ್ಲರೂ ಸೇರಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ರಮೇಶಕುಮಾರ ಹೇಳಿದರು.

ಸ್ಪೀಕರ್ ಆಗಿದ್ದ ಸಮಯದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಗೌರವ, ಘನತೆಗೆ ಧಕ್ಕೆ ಬಾರದಂತೆ ನಡೆದುಕೊಂಡಿದ್ದೇನೆ. ಯಾವುದೇ ರೀತಿಯಲ್ಲಿ ತಪ್ಪಾಗಿದ್ದರೆ ಕ್ಷಮಿಸಿ ಎಂದು ಅವರು ವಿನಂತಿಸಿದರು.

ಈ ದೇಶದ ಭ್ರಷ್ಟಾಚಾರದ ಮೂಲ ಚುನಾವಣೆ ವ್ಯವಸ್ಥೆ. ಚುನಾವಣೆಯಲ್ಲಿ ಸುಧಾರಣೆ ಬರಬೇಕಾಗಿದೆ. ಸುಮ್ಮನೇ ಮಾತಿನಿಂದ ಪ್ರಯೋಜನವಿಲ್ಲ. ಈ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ವಿಶ್ವಾಸ ಬರಬೇಕಾಗಿದೆ. ರಾಜಕೀಯ ಪಕ್ಷಗಳು ಕೂಡ ಸಾಂಸ್ಥಿಕ ವ್ಯವಸ್ಥೆ ಪಡೆಯಬೇಕು. ಅವು ಕೌಟುಂಬಿಕ ವ್ಯವಸ್ಥೆಯಾಗಬಾರದು. ವಿಕೃತ ದಾರಿ ಹಿಡಿಯಬಾರದು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು ಎಂದು ಅವರು ಹೇಳಿದರು.

ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಅಧಿಕಾರ ಬಂದ ತಕ್ಷಣ ಯಾರ್ಯಾರೋ ಬಂದು ಮುತ್ತಿಕೊಳ್ಳುತ್ತಾರೆ. ಎಲ್ಲರಿಂದ ಎಚ್ಚರಿಕೆಯಿಂದಿರಬೇಕು. ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದ ಕುರಿತು ತನಿಖೆಯೇ ಆಗುವುದಿಲ್ಲ. ಅದು ತನಿಖೆಯಾಗಬೇಕು. ಅಲ್ಲಿಯವರೆಗೆ ವ್ಯವಸ್ಥೆ ಸುಧಾರಿಸುವುದಿಲ್ಲ ಎಂದರು.

ಈ ಜವಾಬ್ದಾರಿಯಿಂದ ನಾನು ಮುಕ್ತನಾಗುತ್ತೇನೆ ಎಂದು ಅವರು ತಿಳಿಸಿದರು.

ಸಂಜೆ 5 ಗಂಟೆಗೆ ಸದನವನ್ನು ಮುಂದೂಡಲಾಗಿದೆ.

ಇದನ್ನೂ ಓದಿ –

ಇಂದು 3 ಪ್ರಮುಖ ರಾಜಕೀಯ ಬೆಳವಣಿಗೆಗಳು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button