ಬೆಳಗಾವಿಗೆ ದತ್ತು ಸ್ವೀಕಾರ ಕೇಂದ್ರ ಮಂಜೂರು : ಮಕ್ಕಳಿಲ್ಲದ ದಂಪತಿಗೆ ಆಶಾಕಿರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಗೆ ನೂತನವಾಗಿ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರ ಮಂಜೂರಾಗಿದೆ.
ತಂದೆ ತಾಯಿಯಿಂದ ಒಪ್ಪಿಸಲಪಟ್ಟ ಮಗು, ಕಾನೂನು ಬಾಹಿರವಾಗಿ ಜನಸಿದ ಮಗು, ಅನಾಥ ಮಗು ಇಂತ ಮಕ್ಕಳನ್ನು ರಕ್ಷಣೆ ಮತ್ತು ಆರೈಕೆ ಮಾಡಲು ಸರಕಾರದಿಂದ ದತ್ತು ಸ್ವೀಕಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಮಂಗಳವಾರ ಕೇಂದ್ರದ ಉದ್ಘಾಟನೆ ನಡೆಯಲಿದೆ.
ದತ್ತು ಕೇಂದ್ರದಲ್ಲಿ ಅನಾಥ, ಒಪ್ಪಿಸಲ್ಪಟ್ಟ ಮಕ್ಕಳನ್ನು ಆರೈಕೆ ಮತ್ತು ರಕ್ಷಣೆ ಮಾಡಿ ಕಾರಾ ನೀಯಮಾನುಸಾರ ಆನ್ಲೈನ್ ಮೂಲಕ ಅರ್ಹದಂಪತಿಗಳಿಗೆ ದತ್ತು ನೀಡಲಾಗುತ್ತಿದೆ.
ಬೆಳಗಾವಿಯಲ್ಲಿ ಈಗಾಗಲೇ ಸ್ವಯಂ ಸೇವಾ ಸಂಸ್ಥೆಯ ಮೂಲಕ ಕಾರ್ಯ ನಿರ್ವಹಿಸುತ್ತಿರುವ ದತ್ತು ಸ್ವೀಕಾರ ಕೇಂದ್ರದಿಂದ 11 ವಿದೇಶಿ ದಂಪತಿಗಳಿಗೆ ಹಾಗೂ 119 ಸ್ವದೇಶಿ ದಂಪತಿಗಳಿಗೆ ಒಟ್ಟು 130 ಮಕ್ಕಳನ್ನು ಕಾರಾ (CARA) ನಿಯಮಗಳ ಪ್ರಕಾರ ದತ್ತು ನೀಡಲಾಗಿದೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ.
ಮಂಗಳವಾರ ಕುಮಾರ ಗಂಧರ್ವ ರಂಗಮನಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತು ಸ್ವೀಕಾರ ಕೇಂದ್ರ ಉದ್ಘಾಟನೆಯಾಗಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಗುವನ್ನು ದತ್ತು ಪಡೆಯಲು ಇಚ್ಛಿಸುವ ಅರ್ಹ ದಂಪತಿಗಳು www.cara.nic.in ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದಿಂದ ದತ್ತು ಸ್ವೀಕಾರ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಮಕ್ಕಳ ವ್ಯವಸ್ಥಿತ ಆರೈಕೆಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ
- ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ