Belagavi NewsBelgaum NewsKannada NewsKarnataka NewsLatest

ಮಹಾನ್ ಪುರುಷರ ಸಾಧನೆ ತಿಳಿಸಿಕೊಡಲು ಪುತ್ಥಳಿಗಳ ಪ್ರತಿಷ್ಠಾಪನೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರದಲ್ಲಿ, ರಾಜ್ಯದಲ್ಲಿ ಎಂತೆಂತಹ ಮಹಾನ್ ಪುರುಷರು ಆಗಿ ಹೋಗಿದ್ದಾರೆ ಎಂದು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಅಂತವರ ಪುತ್ಥಳಿಗಳನ್ನು ಸ್ಥಾಪಿಸುತ್ತೇವೆ. ಅವರ ಆದರ್ಶದಲ್ಲಿ ಮುನ್ನಡೆಯಲು ಅವು ನಮಗೆ ಪ್ರೇರಕವಾಗುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೊಳ್ಳಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು​ ಮಂಗಳವಾರ ಸಂಜೆ ಅನಾವರಣಗೊಳಿಸಿ​ ಅವರು ಮಾತನಾಡಿದರು. 

​ ಸಂಗೊಳ್ಳಿ ರಾಯಣ್ಣನಂತಹ ವೀರ ಪುರುಷರ ಮೂರ್ತಿಯನ್ನು ​ಸ್ಥಾಪಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು, ಇತಿಹಾಸವನ್ನು ಮುಂದಿನ ಪೀಳಿಗೆಗೆ​ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಮಾತುಗಳೇ ಸಾಧನೆಯಾಗಬಾರದು, ಸಾಧನೆಗಳೇ ಮಾತಾಗಬೇಕು. ನಾನು ತಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿ ತಮ್ಮೆಲ್ಲರ ಸೇವೆ ಮಾಡುವ ಅವಕಾಶ ಪಡೆದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಭಾಷೆಯನ್ನು ಕೇವಲ ಮೂರೇ ಮೂರು ತಿಂಗಳಲ್ಲಿ ಈಡೇರಿಸಿ ನಮಗೆಲ್ಲ ಆದರ್ಶವಾಗಿದ್ದಾರೆ. ನಾನು ಚುನಾವಣೆ ಪೂರ್ವ ವಚನ ಕೊಟ್ಟಂತೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಋಣ​ವನ್ನು ನಾನು ಸಾಯುವ ತನಕ ನನ್ನ ತಲೆ ಮೇ​ಲೆ ಹೊತ್ತುಕೊಂಡು ಓಡಾ​ಡುತ್ತೇನೆ. ಪಕ್ಷಾತೀತವಾಗಿ ಅಭಿವೃದ್ಧಿ ಮಾಡುವ ಮೂಲಕ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ತನ್ಮೂಲಕ ನಿಮ್ಮ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.

ಈ ವೇಳೆ ಸಿದ್ದಸಿರಿ ಸಿದ್ಧಾಶ್ರಮ ಹಣಮಾಪುರ ಮತ್ತು ಕೌಲಗುಡ್ಡದ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ವಿಧಾನ ಪರಿಷತ್ ಸದಸ್ಯ ​ಚ​ನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು, ಮೂರ್ತಿ ಸಂಸ್ಥಾಪಕರಾದ ರಾಮಲಿಂಗ ರಾ ಅನಗೊಳಕರ್, ಕುರುಬ ಸಮಾಜದ ಮುಖಂಡರು, ಸಂಗೊಳ್ಳಿ ರಾಯಣ್ಣ ಸಂಘದ ಪದಾಧಿಕಾರಿಗಳು, ಗ್ರಾಮ​ಸ​್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button