Latest

ನಿಂಬಾಳಕರ್, ಸಂದೀಪ್ ಪಾಟೀಲ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ನಿಂಬಾಳಕರ್, ಸಂದೀಪ್ ಪಾಟೀಲ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಹೇಮಂತ ನಿಂಬಾಳಕರ್, ಸಂದೀಪ್ ಪಾಟೀಲ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮಾನವ ಹಕ್ಕುಗಳ ಆಯೋಗದ ಎಡಿಜಿಪಿ ಅಮರಕುಮಾರ ಪಾಂಡೆ ಅವರನ್ನು ಬೆಂಗಳೂರು ನಗರ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ಎಡಿಜಿಪಿ ಕಮಲ್ ಪಂತ್ ಅವರನ್ನು ಇಂಟಲಿಜೆನ್ಸ್ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.

ಇಂಟಲಿಜನ್ಸ್ ಎಡಿಜಿಪಿ ಬಿ.ದಯಾನಂದ ಅವರನ್ನು ರಿಸರ್ವ್ ಪೊಲೀಸ್ ಐಜಿಪಿಯಾಗಿ ವರ್ಗಾಯಿಸಲಾಗಿದೆ.

ಸಿಐಡಿ ಐಜಿಪಿ ಎಂ.ಚದ್ರಶೇಖರ್ ಅವರನ್ನು ಎಸಿಬಿಗೆ ಮರಳಿ ಕಳುಹಿಸಲಾಗಿದೆ. ಹಿಂದಿನ ಮೈತ್ರಿ ಸರಕಾರ ಈಚೆಗಷ್ಟೆ ಅವರನ್ನು ಎಸಿಬಿಯಿಂದ ಸಿಐಡಿಗೆ ಹಾಕಿ ಹೇಮಂತ ನಿಂಬಾಳಕರ್ ಅವರನ್ನು ಸಿಐಡಿಯಿಂದ ಎಸಿಬಿಗೆ ವರ್ಗಾಯಿಸಿತ್ತು. ಈಗ ಅವರನ್ನು ವಾಪಸ್ ಕಳುಹಿಸಲಾಗಿದ್ದು, ನಿಂಬಾಳಕರ್ ಅವರಿಗೆ ಜಾಗ ತೋರಿಸಿಲ್ಲ.

ಇಂಟಲಿಜನ್ಸ್ ಡಿಐಜಿ ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಮಂಗಳೂರು ಡಿಐಜಿ ಮತ್ತು ಕಮಿಶನರ್ ಆಗಿ ವರ್ಗಾಯಿಸಲಾಗಿದೆ.

ಮಂಗಳೂರು ಡಿಐಜಿ ಮತ್ತು ಕಮಿಶನರ್ ಸಂದೀಪ್ ಪಾಟೀಲ ಅವರನ್ನು ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಸಂದೀಪ ಪಾಟೀಲ ಕೆಫೆ ಕಫಿ ಡೇ ಮಾಲಿಕ ಸಿದ್ದಾರ್ಥ ಸಾವಿನ ತನಿಖೆ ಆರಂಭಿಸಿದ್ದ ವೇಳೆಯಲ್ಲೇ ವರ್ಗಾಯಿಸಿರುವುದು ಅಚ್ಛರಿ ತರಿಸಿದೆ.

ಪೊಲೀಸ್ ಫೈರ್ ಸರ್ವೀಸ್ ಡಿಐಜಿ ಎಸ್.ಎನ್. ಸಿದ್ದರಾಮಪ್ಪ ಅವರನ್ನು ಬೆಂಗಳೂರಿನ ಇನಫಾರ್ಮೇಶನ್ ಕಮಿಶರನ್ ಆಗಿ ವರ್ಗಾಯಿಸಲಾಗಿದೆ.

ರಾಮನಗರ ಎಸ್ಪಿ ಚೇತನ್ ಸಿಂಗ್ ರಾಠೋಡ ಅವರನ್ನು ಬೆಂಗಳೂರಿನ ಸೆಂಟ್ರಲ್ ಡಿಸಿಪಿ ಯಾಗಿ ವರ್ಗಾಯಿಸಲಾಗಿದೆ.

ಸಿಐಡಿ ಎಸ್ಪಿ ಅನೂಪ ಶೆಟ್ಟಿ ಅವರನ್ನು ರಾಮನಗರ ಎಸ್ಪಿಯನ್ನಾಗಿ ವರ್ಗಾಯಿಸಲಾಗಿದೆ.

ಇಂಟಲಿಜನ್ಸ್ ಡಿಸಿಪಿ ಕೆ.ಎಂ. ಶಾಂತರಾಜು ಅವರನ್ನು ಶಿವಮೊಗ್ಗ ಎಸ್ಪಿಯಾಗಿ ವರ್ಗಾಯಿಸಲಾಗಿದೆ.

ಮಂಗಳೂರು ಡಿಸಿಪಿ ಹನಮಂತರಾಯ ಅವರನ್ನು ದಾವಣಗೆರೆ ಎಸ್ಪಿಯನ್ನಾಗಿ ವರ್ಗಾಯಿಸಲಾಗಿದೆ.

ಹೊಸ ಸರಕಾರ ಬಂದ ತಕ್ಷಣ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button