Kannada NewsLatestPolitics

ಡಾ. ಪ್ರಭಾಕರ ಕೋರೆ ಜನ್ಮ ದಿನದ ಅಂಗವಾಗಿ ರಕ್ತ ದಾನ ಶಿಬಿರ

ಡಾ. ಪ್ರಭಾಕರ ಕೋರೆ ಜನ್ಮ ದಿನದ ಅಂಗವಾಗಿ ರಕ್ತ ದಾನ ಶಿಬಿರ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಡಾ. ಪ್ರಭಾಕರ ಕೋರೆ ಉತ್ತರ ಕರ್ನಾಟಕದ ತಿಲಕ. ಇಂದು ನಮ್ಮ ಬೆಳಗಾವಿ ಜಿಲ್ಲೆ ವಿಶ್ವದಾದ್ಯಂತ ಹೆಸರುವಾಸಿಯಾಗಲು ಕೆ ಎಲ್ ಇ ಸಂಸ್ಥೆ ಹಾಗೂ ಪ್ರಭಾಕರ ಕೋರೆ ಅವರ ಕೊಡುಗೆ ಅಪಾರವೆಂದು ಡಾ. ಪ್ರಭಾಕರ ಕೋರೆ ಸಹಕಾರಿ ಕೋಆಪರೇಟಿವ್ ಬ್ಯಾಂಕಿನ ಚೆರಮನ್ನರಾದ ಅಮೃತರಾಜ ನೇಸರಿ ಮಾತನಾಡಿದರು.

ಅವರು ಇಂದು ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಸಂಕೇಶ್ಬರ ಪಟ್ಟಣದಲ್ಲಿ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು..

Home add -Advt

ಕೆ ಎಲ್ ಇ ಸಂಸ್ಥೆಯು ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ಉದ್ದಿಮೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಭಾರತವಷ್ಟೇ ಅಲ್ಲದೇ ದೇಶವಿದೇಶಗಳಲ್ಲಿಯೂ ಹೆಸರುವಾಸಿಯಾಗುವಂತಹ ಕಾರ್ಯವನ್ನು ನಿರ್ವಹಿಸುವಂತೆ ಮಾಡಿದ ಡಾ. ಪ್ರಭಾಕರ ಕೊರೆ ಅವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.

ಇನ್ನೊಬ್ಬ ಮುಖ್ಯ ಅತಿಥಿ ಶ್ರೀ ಸಂಜಯ ಶಿರಕೋಲಿ ಮಾತನಾಡುತ್ತ ರಕ್ತವೂ ಶರೀರ ಮುಖ್ಯ ಅಂಗವಾಗಿದೆ ಅದನ್ನು ಬೇರಾವ ಮಾರ್ಗಗಳಿಂದಲೂ ಉತ್ಪಾದಿಸಲು ಸಾಧ್ಯವಿಲ್ಲ. ಅಂತಹ ಅಮೂಲ್ಯವಾದ ಭಾಗವನ್ನು ಇಂದು ಡಾ. ಪ್ರಭಾಕರ ಕೋರೆ ಜನ್ಮ ದಿನದ ನಿಮಿತ್ತವಾಗಿ ದಾನಮಾಡುತ್ತಿರುವದು ನಿಜಕ್ಕೂ ಪ್ರಶಂಸನೀಯ.

ಡಾ. ಪ್ರಭಾಕರ ಕೋರೆಯವರು ಕೆ ಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷರಾಗಿ ಆಯ್ಕೆಗೊಂಡಂದಿನಿಂದ ಇಂದಿನವರೆಗೂ ಜನೋಪಕಾರಿಯಾಗಿದ್ದಾರೆ, ಜನರ ಅಗತ್ಯತೆಗಳನ್ನು ಅರಿತು ಜನರ ಮನಗಳಲ್ಲಿ ಮನೆಮಾಡಿದ್ದಾರೆ. ಇದೇ ರೀತಿ ಅವರ ಸೇವೆಯು ಮುಂದುವರೆಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ 41 ಜನರು ರಕ್ತದಾನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮುನ್ಸಿಪಲ್ ಕಾರ್ಪೊರೇಟ್‌ನ ಸದಸ್ಯ  ಸುನಿಲ ಪರ್ವತರಾವ್, ಬಸವರಾಜ ಬಿ, ಅಭಿಜಿತ ಕುರನಕರ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತಭಂಡಾರ ಅಧಿಕಾರಿ ಡಾ. ವಸಂತ ಶಿಂಧೆ, ಸಾರ್ವಜನಿಕ ಸಂಪರ್ಕಾಧಿಕಾರಿ ಅರುಣ ನಾಗಣ್ನವರ ಇತರೆ ವೈದ್ಯಕೀಯ ಸಿಬ್ಬಂದಿ ಹಾಗೂ ಸಂಕೇಶ್ವರ ಪಟ್ಟಣವಾಸಿಗಳು ಭಾಗವಹಿಸಿದ್ದರು. ////

Related Articles

Back to top button