ಲೋಕಮಾನ್ಯ ತಿಲಕರ ಪುಣ್ಯತಿಥಿ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : “ಬಾಲಗಂಗಾಧರ ತಿಲಕರವರು ದೇಶಾಭಿಮಾನ ಬಿತ್ತಲು ಆರಂಭಿಸಿದ ಶಿವಾಜಿ ಹಾಗೂ ಗಣೇಶ ಜಯಂತಿ ಇಂದಿಗೂ ಪ್ರೇರಕವಾಗಿವೆ. ತಿಲಕರ ದೇಶಸೇವೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಭಾರತಿಯರಲ್ಲಿ ಏಕತೆ ಮೂಡಿಸಿದರು” ಎಂದು ಶ್ರೀಬಸವೇಶ್ವರ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕಳಸಣ್ಣವರ ಹೇಳಿದರು.
ಅವರು ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ‘ಲೋಕಮಾನ್ಯ ತಿಲಕರ ಪುಣ್ಯತಿಥಿ’ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಗೌರವ ಅತಿಥಿಗಳಾಗಿ ಎನ್. ಎಫ್. ಬನ್ನೂರ ಅಸೊಶಿಯೆಷನ್ ಮತ್ತು ಆರ್ಕಿಟೆಕ್ಚರ್ ಇಂಜನೀಯರಾದ ಎನ್. ಎಫ್. ಬನ್ನೂರ ಮತ್ತು ಕಾರ್ಯಕ್ರಮದ ಅಧ್ಯಕ್ಷರಾಗಿ ವಿ. ಜಿ. ಇಂಗ್ಲೀಷ್ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಸಂಧ್ಯಾ ಪೂಜಾರ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಈಶಸ್ತವನನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯಾಧ್ಯಾಪಕರಾದ ಎಮ್. ಕೆ. ಮಾದಾರ ಪ್ರಸ್ತಾವಿಕ ಭಾಷಣ ದೊಂದಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯ ಮೇಲೆ ಆಸಿನರಾದ ಮಹನಿಯರು ತಿಲಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ತಿಲಕರ ಕುರಿತು ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ವೀಜೆತರಾದ ವಿದ್ಯಾರ್ಥಿನಿಯರಿಗೆ ನಗದು ಮತ್ತು ಪ್ರಮಾಣ ಪತ್ರ ನೀಡಿ ಎನ್. ಎಫ್. ಬನ್ನೂರ ಗೌರವಿಸಿದರು.
ಬಿ. ಇ. ಸಂಸ್ಥೆಯ ವಿ. ಜಿ. ಇಂಗ್ಲೀಷ್ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಸಂಧ್ಯಾ ಪೂಜಾರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕುರಿತು ತಿಲಕರು ಕೇವಲ ಭಾರತದ ರಾಷ್ಟ್ರೀಯ ನಾಯಕರಾಗಿರದೆ ಸಂಪೂರ್ಣ ಜಗತ್ತಿನ ‘ಲೋಕಮಾನ್ಯ’ರಾಗಲು ಅವರ ತಾಯಿಯ ಸಂಪ್ರದಾಯ, ಗುರುಗಳು ನೀಡಿದ ವಿದ್ಯಾಭ್ಯಾಸ ಕಾರಣವಾಗಿದೆ ಮತ್ತು ಸ್ವರಾಜ್ಯವನ್ನು ಪಡೆದಂತೆ ಶಿಕ್ಷಣವನ್ನು ಪಡೆಯುವುದು ಕೂಡ ಅವರ ಮೂಲ ಹಕ್ಕಾಗಿತ್ತು.
ತಿಲಕರಂತಹ ರಾಷ್ಟ್ರೀಯ ನಾಯಕರ ಸಾಧನೆ ಬಗ್ಗೆ ಓದಿ ವಿದ್ಯಾರ್ಥಿಗಳು ಅವರ ಗುಣಗಳನ್ನು ಅಳವಡಿಸಲು ಸಲಹೆ ನೀಡಿದರು. ಶಾಲೆಯಲ್ಲಿ ‘ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕರ ಸಾಧನೆಗಳು’ ಎಂಬ ವಿಷಯದ ಮೇಲಿನ ಭಾಷಣದಲ್ಲಿ ಕನ್ನಡ ಮಾಧ್ಯಮದಿಂದ ಪೂರ್ವಾ ಮುತಗೆಕರ ಪ್ರಥಮ, ನಿರೂಪಮಾ ತಾಳುಕರ ದ್ವಿತೀಯ, ಪೂಜಾ ಗರಗ ತೃತೀಯ ಹಾಗೂ ಮರಾಠಿ ಮಾಧ್ಯಮದಿಂದ ಶೃತಿ ರಾಜಗೋಳಕರ ಪ್ರಥಮ, ಪ್ರಣಾಲಿ ಶಿಂಗಟೆ ದ್ವೀತಿಯ, ಪ್ರಗತಿ ಮೆಣಸೆ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮವನ್ನು ಮಾನಸಿ ಬಿರ್ಜೆ ಸ್ವಾಗತಿಸಿ, ಸಾಕ್ಷಿ ಚವ್ಹಾಣ ನಿರೂಪಿಸಿ, ಸೌಮ್ಯಾ ಹೊನ್ನಾಯಿಕ ವಂದಿಸಿದರು. ಕಾರ್ಯಕ್ರಮದ ಸಂಚಾಲಿಕಿಯಾದ ಲಕ್ಷ್ಮಿ ಯಳವಟಕರ ಹಾಗೂ ಇನ್ನಿತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮ ಯಶಸ್ವಿಗೊಳ್ಳಲು ಶ್ರಮಿಸಿದರು..///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ