ಭಾರತೀಯ ಬಿಲಿಯನೇರ್ ಹರಪಾಲ್ ರಾಂಧಾವಾ ಹಾಗೂ ಪುತ್ರ ಸಹಿತ ಆರು ಜನ ವಿಮಾನ ದುರಂತದಲ್ಲಿ ಸಾವು
ಪ್ರಗತಿವಾಹಿನಿ ಸುದ್ದಿ, ಜಿಂಬಾಬ್ವೆ: ಭಾರತೀಯ ಬಿಲಿಯನೇರ್ ಹರಪಾಲ್ ರಾಂಧವಾ ಮತ್ತು ಅವರ ಪುತ್ರ ಸೇರಿದಂತೆ ಆರು ಜನ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ನೈಋತ್ಯ ಜಿಂಬಾಬ್ವೆಯಲ್ಲಿ ಖಾಸಗಿ ವಿಮಾನ ಪತನಗೊಂಡು ಈ ಅವಘಡ ಸಂಭವಿಸಿದೆ. ಮೃತರ ಗುರುತುಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸದಿದ್ದರೂ, ಜಿಂಬಾಬ್ವೆಯ ಪತ್ರಕರ್ತ-ಚಲನಚಿತ್ರ ನಿರ್ಮಾಪಕ ಹಾಗೂ ಹರಪಾಲ್ ಅವರ ಆಪ್ತ ಮಿತ್ರ ಹೋಪ್‌ವೆಲ್ ಚಿನೋನೊ ಅವರು ಹರಪಾಲ್ ಮತ್ತು ಅವರ ಪುತ್ರ ಅಮರ್ ರಾಂಧವಾ (22) ಕೂಡ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು X ನಲ್ಲಿ ಹಂಚಿಕೊಂಡಿದ್ದಾರೆ.
ಹರ್ಪಾಲ್ ರಾಂಧವಾ, ಚಿನ್ನ, ಕಲ್ಲಿದ್ದಲು, ರಿಫೈನಿಂಗ್ ನಿಕಲ್ ಮತ್ತು ತಾಮ್ರವನ್ನು ಉತ್ಪಾದಿಸುವ ವೈವಿಧ್ಯಮಯ ಗಣಿಗಾರಿಕೆ ಕಂಪನಿಯಾದ RioZim ನ ಮಾಲೀಕರಾಗಿದ್ದರು. ರಾಂಧವಾ 4-ಬಿಲಿಯನ್ ಡಾಲರ್ ಖಾಸಗಿ ಇಕ್ವಿಟಿ ಸಂಸ್ಥೆ GEM ಹೋಲ್ಡಿಂಗ್ಸ್ ಅನ್ನು ಸಹ ಸ್ಥಾಪಿಸಿದ್ದರು. ಅವರು ತಮ್ಮ ಶಿಕ್ಷಣವನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಲಂಡನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದರು.
ಹರಪಾಲ್ ರಾಂಧಾವಾ ಅವರ ಪುತ್ರ ಅಮರ ಪೈಲಟ್ ಆಗಿದ್ದು ಅವರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ