*ಮೆತ್ತಗಾದ ಕೆನಡಾ; ಭಾರತದೊಂದಿಗೆ ನಿರಂತರ ಸಹಕರಿಸುತ್ತೇವೆ; ವಿದೇಶಾಂಗ ಸಚಿವೆ ಮೆಲಾನಿ ಜೋಲಿ*
ಪ್ರಗತಿವಾಹಿನಿ ಸುದ್ದಿ; ಒಟ್ಟಾವ: ಪ್ರಸ್ತುತ ಸನ್ನಿವೇಶದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಸಾಮಾನ್ಯವಾಗಿ ಪರಿಗಣಿಸುವಂತಿಲ್ಲ. ಅದರ ಕುರಿತು ಮಾತನಾಡುವಾಗಲೂ ಎಚ್ಚರಿಕೆಯಿಂದಿರಬೇಕೆಂಬ ಸಂದೇಶ ಕೆನಡಾದ ವಿಷಯದ ಮೂಲಕ ರವಾನೆಯಾಗಿದೆ. ಕರೋನಾದ ಹೊಡೆತಕ್ಕೂ ಬಗ್ಗದೇ ವಿಶ್ವದಲ್ಲೇ ತನ್ನ ಆರ್ಥಿಕ ಸ್ಥಿರತೆಯನ್ನು ಮತ್ತೆ ಕಾಯ್ದುಕೊಂಡು ವೇಗವಾಗಿ ಬೆಳೆಯುತ್ತಿರುವ ಭಾರತದ ಬಗ್ಗೆ ಘಟನುಘಟಿ ರಾಷ್ಟ್ರಗಳು ಸರಳವಾಗಿ ಬಾಯಿ ಬಿಡುವಂತಿಲ್ಲ. ಅದರ ಪರಿಣಾಮ ತಮ್ಮ ಬುಡಕ್ಕೇ ಬರುತ್ತದೆಂಬುದನ್ನು ತೋರಿಸಿಕೊಟ್ಟಿದೆ. ಇದೀಗ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ” ಭಾರತದಲ್ಲಿನ ತನ್ನ ರಾಜತಾಂತ್ರಿಕ ಉಪಸ್ಥಿತಿಯ ಕುರಿತು ಭಾರತದೊಂದಿಗೆ ನಿರಂತರ ಸಹಕಾರ ಮತ್ತು ಮಾತುಕತೆಯಲ್ಲಿದ್ದೇವೆ” ಎಂದು ಹೇಳುವ ಮೂಲಕ ಮೂಲ ಸಂಬಂಧಕ್ಕೆ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ವಿವಾದವುಂಟಾದುದೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಿಖ್ ಪ್ರತ್ಯೇಕತಾವಾದಿಯ ಸಾವಿನ ಬಗ್ಗೆ ಭಾರತವನ್ನು ದೂಷಿಸಿದ್ದಕ್ಕಾಗಿ. ಇದರ ಪರಿಣಾಮ ಈಗ ಕೆನಾಡಕ್ಕೆ ಅರಿವಾಗುತ್ತಿದೆ.
ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೆರ , ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಭಾರತದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯ ಬಗ್ಗೆ ” ಭಾರತದೊಂದಿಗೆ ನಿರಂತರ ಸಹಕರಿಸುತ್ತೇವೆ ಮತ್ತು ಮಾತುಕತೆಯಲ್ಲಿದ್ದೇವೆ” ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ