*ಕೆಎಲ್‌ಎಸ್ ಜಿಐಟಿ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಪ್ರವಾಸ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಎಸ್ ಜಿಐಟಿಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಅಂಗವಾಗಿ ಸರಸ್ ಜೈಪುರ ಡೈರಿ ಮತ್ತು ದೈನಿಕ್ ಭಾಸ್ಕರ್ ಜೈಪುರ ಇಂಡಸ್ಟ್ರೀಸ್‌ಗೆ ಭೇಟಿ ನೀಡಿದ್ದಾರೆ.
ಕೆಎಲ್‌ಎಸ್ ಜಿಐಟಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂಬಿಎ ವಿಭಾಗದ ವಾರ್ಷಿಕ ಶೈಕ್ಷಣಿಕ ಪ್ರವಾಸ ಇದಾಗಿದ್ದು, ಸೆ.6 ರಿಂದ 11ರವರೆಗೆ ಈ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.
ದೆಹಲಿ, ಆಗ್ರಾ ಮತ್ತು ಜೈಪುರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು, ಈ ವೇಳೆ ಸರಸ್ ಜೈಪುರ ಡೈರಿಗೆ ಭೇಟಿ ನೀಡಿದ ವಿದ್ಯಾರ್ಥಿಗಳ ತಂಡ ಡೈರಿ ಉದ್ಯಮದ ಕಾರ್ಯಾಚರಣೆಗಳು, ಸುಸ್ಥಿರ ಅಭ್ಯಾಸಗಳು ಮತ್ತು ಪ್ರಾದೇಶಿಕ ಆರ್ಥಿಕತೆಯಲ್ಲಿ ಅದರ ಮಹತ್ವದ ಪಾತ್ರದ ಬಗ್ಗೆ ಮಾಹಿತಿ ಪಡೆದರು.
ಇದೇ ವೇಳೆ ಪ್ರಮುಖ ಮಾಧ್ಯಮ ಸಂಸ್ಥೆಯಾದ ದೈನಿಕ್ ಭಾಸ್ಕರ್ ಜೈಪುರ ಇಂಡಸ್ಟ್ರೀಸ್ ಗೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಇದು ಪ್ರವಾಸದ ಗಮನಾರ್ಹವಾದ ಕಲಿಕೆಯ ಅನುಭವವಾಗಿತ್ತು. ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮ ಮತ್ತು ಪತ್ರಿಕೋದ್ಯಮದ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಕಾರಿಯಾಯಿತು.
KLS GITಯ ವಿದ್ಯಾರ್ಥಿಗಳಿಗೆ ಎಂಬಿಎ ವಿಭಾಗದ ಡಾ.ಗೋವಿಂದರಾಜ್ ಆರ್ ಮಾನೆ, ಡಾ.ವಾಣಿಹುಂಡೇಕರ್ ಮತ್ತು ಪ್ರೊ.ರೇಖಾಬಿರ್ಜೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಈ ಪ್ರವಾಸದ ಬಗ್ಗೆ ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರು ಮತ್ತು ಮ್ಯಾನೇಜ್‌ಮೆಂಟ್ ನವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹಾಗೂ ಅವರನ್ನು ಉದ್ಯಮದತ್ತ ಸೆಳೆಯಲು ಮಹತ್ವದ ಪಾತ್ರವಹಿಸುತ್ತದೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ