Belagavi NewsBelgaum NewsKannada NewsKarnataka News

ಅರೆಕಾಲಿಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಾಲಕರ/ಬಾಲಕಿಯರ ಬಾಲಮಂದಿರ ಬೆಳಗಾವಿ, ಖಾನಾಪೂರ ಹಾಗೂ ಸವದತ್ತಿ ಸಂಸ್ಥೆಯ ಮಕ್ಕಳಿಗೆ ಬೋಧನೆ ಮಾಡಲು ೨೦೨೩-೨೪ ನೇ ಸಾಲಿಗೆ ಅರೆಕಾಲಿಕ ಟ್ಯೂಷನ್, ದೈಹಿಕ ಶಿಕ್ಷಕರ ಹಾಗೂ ಶಿಕ್ಷಕರನ್ನು ಮಾಸಿಕ ಗೌರವಧನ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತಿದೆ.
ಆಸಕ್ತಿಯುಳ್ಳ ಬಿ.ಎ. ಬಿ.ಎಡ್(ಇಂಗ್ಲೀಷ್), ಬಿ.ಎಸ್ಸಿ. ಬಿ.ಇಡಿ(ವಿಜ್ಞಾನ/ಗಣಿತ), ಡಿಪ್ಲೋಮಾ ಇನ್ ಫಿಜಿಕಲ್ ಎಜ್ಯುಕೇಶನ್ ಪಡೆದ ಅಭ್ಯರ್ಥಿಗಳಿಂದ ಮತ್ತು ಕಲೆ ಕ್ರಾಫ್ಟ್ ಹಾಗೂ ಸಂಗೀತ ಶಿಕ್ಷಕರನ್ನು ಸಂಗೀತ/ವಾದ್ಯ ಸಂಗೀತ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಅeಡಿಣiಜಿieಜ ಅouಡಿse ಪಾಸಾದ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳು ಹಾಗೂ ಸ್ವವಿವರದೊಂದಿಗೆ ಅರ್ಜಿಯನ್ನು ಅಕ್ಟೋಬರ್ ೨೦, ೨೦೨೩ ರ ಒಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸುವರ್ಣ ವಿಧಾನ ಸೌಧ, ಬೆಳಗಾವಿ. ಇಲ್ಲಿ ಸಲ್ಲಿಸಬಹುದಾಗಿದೆ.
ಭರ್ತಿ ಮಾಡಲಾಗುವ ಹುದ್ದೆಗಳ ವಿವರ:
ಸರಕಾರಿ ಬಾಲಕರ ಬಾಲಮಂದಿರ ಶಿವಾಜಿ ನಗರ ಬೆಳಗಾವಿ: ಅರೆಕಾಲಿಕ ಇಂಗ್ಲೀಷ್ ವಿಜ್ಞಾನ ಮತ್ತು ಗಣಿತ ಟ್ಯೂಷನ್ ಶಿಕ್ಷಕರು- ೦೨
ಸರಕಾರಿ ಬಾಲಕರ ಬಾಲಮಂದಿರ ಖಾನಾಪೂರ : ಅರೆಕಾಲಿಕ ಇಂಗ್ಲೀಷ್ ವಿಜ್ಞಾನ ಮತ್ತು ಗಣಿತ ಟ್ಯೂಷನ್ ಶಿಕ್ಷಕರು- ೦೨, ಅರೆಕಾಲಿಕ ಯೋಗ/ದೈಹಿಕ ಸಂಗೀತ/ಕ್ರಾಪ್ಟ್ ಶಿಕ್ಷಕರು- ೦೨, ಅರೆಕಾಲಿಕ ಪಾಠ ಹೇಳುವ ಶಿಕ್ಷಕರು (ಎಜ್ಯುಕೇಟರ್)- ೦೧
ಸರಕಾರಿ ಬಾಲಕಿಯರ ಬಾಲಮಂದಿರ, ಸವದತ್ತಿ: ಅರೆಕಾಲಿಕ ಇಂಗ್ಲೀಷ್ ವಿಜ್ಞಾನ ಮತ್ತು ಗಣಿತ ಟ್ಯೂಷನ್ ಶಿಕ್ಷಕರು- ೦೨, ಅರೆಕಾಲಿಕ ಯೋಗ/ದೈಹಿಕ ಸಂಗೀತ/ಕ್ರಾಪ್ಟ್ ಶಿಕ್ಷಕರು-೦೨, ಅರೆಕಾಲಿಕ ಪಾಠ ಹೇಳುವ ಶಿಕ್ಷಕರು (ಎಜ್ಯುಕೇಟರ್)- ೦೧
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ (ದೂ.ಸಂ:೦೮೩೧-೨೪೭೪೧೧೧)ಮೊಬೈಲ್ ಸಂಖ್ಯೆ:೮೦೭೩೯೭೨೯೨೯ ಗೆ ಸಂಪರ್ಕಿಸಬಹುದಾಗಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಮಾತ್ರ ಆಧ್ಯತೆ ನೀಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button