*ಮಹಾ ಸರ್ಕಾರಕ್ಕೆ ನಾಡದ್ರೋಹಿ ಎಂಇಎಸ್ ಸರ್ಟಿಫಿಕೇಟ್ ಬೇಕಂತೆ!*
ಪ್ರಗತಿವಾಹಿನಿ ಸುದ್ದಿ; ಮುಂಬೈ: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಹಾರಾಷ್ಟ್ರ ಮತ್ತೆ ಗಡಿ ವಿಚಾರದಲ್ಲಿ ಹೊಸ ಕ್ಯಾತೆ ಶುರುಮಾಡಲು ಮುಂದಾಗಿದೆ. ಗಡಿ ಭಾಗದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿ ಮಾಡುವುದರ ಜೊತೆಗೆ ಅದರ ಲಾಭ ಪಡೆಯಲು ಮರಾಠಿಗರು ಎಂಬ ಪತ್ರವನ್ನು ಎಂಇಎಸ್ ಕಚೇರಿಯಿಂದ ಪಡೆಯುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಎಂಇಎಸ್ ಸದಸ್ಯರ ಜೊತೆ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಸಂಸದ ಧೈರ್ಯಶೀಲ ಮಾನೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಮರಾಠಿ ಭಾಷಿಕರಿಗಾಗಿ ಗಡಿ ಭಾಗದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆ ಹಾಗೂ ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಚರ್ಚಿಸಲಾಗಿದೆ.
ಕೊಲ್ಲಾಪುರದ ಚಂದಗಡ್ ನಲ್ಲಿ ಮರಾಠಿಗರಿಗಾಗಿ ಕಚೇರಿ ಸ್ಥಾಪಿಸಿ ಪ್ರಾದೇಶಿಕ ಆಯುಕ್ತರ ಶ್ರೇಣಿಯ ಅಧಿಕಾರಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಜನಾರೋಗ್ಯ ಯೋಜನೆ ಹಾಗೂ ಈ ಯೋಜನೆಯ ಲಾಭ ಪಡೆಯಲು ಎಂಇಎಸ್ ಕಚೇರಿಯ ಪತ್ರ ಪ್ರಮುಖವಾಗಿ ಅವಶ್ಯಕವಾಗಿದೆ.
ಅಲ್ಲದೇ ಯೋಜನೆ ಲಾಭ ಪಡೆಯಲು ಮರಾಠಿ ಭಾಷಿಕ ಎಂದು ನಮೂದಿಸುವ ಜೊತೆಗೆ ಎಂಇಎಸ್ ಕಚೇರಿ ಪತ್ರ ಕಡ್ಡಾಯ ಮಾಡಲಾಗುವುದು ಎಂದು ತೀರ್ಮಾನಿಸಲಾಗಿದೆ.
ಜನಾರೋಗ್ಯ ಯೋಜನೆಯಡಿ 5ಲಕ್ಷ ರೂವರೆಗೆ ಆರೋಗ್ಯ ವಿಮೆ, ಮಹಾರಾಷ್ಟ್ರ ಅಷ್ಟೇ ಅಲ್ಲ ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯ ನೀಡಲು ಚಿಂತನೆ ನಡೆಲಾಗಿದೆ. ಮಹಾರಾಷ್ಟ್ರ ಸರ್ಕಾರ ಗಡಿ ವಿಚಾರವಾಗಿ ಮತ್ತೆ ಹೊಸ ಕ್ಯಾತೆಗೆ ಮುಂದಾಗಿದ್ದರೂ ರಾಜ್ಯ ಸರ್ಕಾರ ಮೌನವಾಗಿರುವುದಾದರೂ ಯಾಕೆ ಎಂಬುದು ಕನ್ನಡ ಪರ ಸಂಘಟನೆಗಳ ಪ್ರಶ್ನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ