Belagavi NewsBelgaum NewsKannada NewsKarnataka News

ಜಿಐಟಿಯಲ್ಲಿ ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೊರೆನ್ಸಿಕ್ ಕುರಿತ ಐಇಇಇ ತರಬೇತಿ ಕಾರ್ಯಾಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಯ  ಕೆಎಲ್‌ಎಸ್ ಗೊಗಟೆ  ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗವು 9 ರಿಂದ 11 ಅಕ್ಟೋಬರ್ ರವರೆಗೆ 3 ದಿನಗಳ “ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೋರೆನ್ಸಿಕ್ಸ್”ಕುರಿತ ತರಬೇತಿ ಕಾರ್ಯಾಗಾರವನ್ನು ಐಇಇಇ ಉತ್ತರ ಕರ್ನಾಟಕ ಉಪವಿಭಾಗದ ಸಹಯೋಗದೊಂದಿಗೆ ಐಇಇಇ ಜಿಐಟಿ ವಿದ್ಯಾರ್ಥಿ ಶಾಖೆಯು ಆಯೋಜಿಸಿತ್ತು. ಬೆಳಗಾವಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕ ಡಾ.ಪ್ರವೀಣ ಯು.ಸಂಗನಾಳಮಠ, ಕಾರ್ಯಾಗಾರವನ್ನು ಉದ್ಘಾಟಿಸಿ, ಪ್ರಸ್ತುತ  ಯುಗದಲ್ಲಿ ಸೈಬರ್  ಭದ್ರತೆ ಮತ್ತು ಡಿಜಿಟಲ್ ಫೋರೆನ್ಸಿಕ್ಸ್‌ನ  ಮಹತ್ವದ  ಕುರಿತು  ವಿದ್ಯಾರ್ಥಿಗಳು  ಮತ್ತು ಅಧ್ಯಾಪಕರನ್ನು  ಉದ್ದೇಶಿಸಿ ಮಾತನಾಡಿದರು. ಪ್ರಾಂಶುಪಾಲರಾದ  ಡಾ.ಎಂ.ಎಸ್.ಪಾಟೀಲ್, ಡೀನ್  ಪ್ರೊ.ಡಿ.ಎ. ಕುಲಕರ್ಣಿ ಎಚ್‌ಒಡಿ ಇಸಿ , ಡಾ.ಬಸವರಾಜ ಕೋಟಿ ಈ ಸಂಧರ್ಭದಲ್ಲಿ ಉಪಸ್ಥಿತ ರಿದ್ದರು.

ಈ 3 ದಿನಗಳ  ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಬಸವರಾಜ  ಕೋಟಿ ಹಿರಿಯ ವೈಜ್ಞಾನಿಕ ಅಧಿಕಾರಿ  ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ ಬೆಳಗಾವಿ ಅವರು ವಿವಿಧ ರಾಸಾಯನಿಕ ಮತ್ತು ಜೈವಿಕ ವಿಧಿವಿಜ್ಞಾನ ತನಿಖಾ ನಿರ್ವಹಣೆಯ ವಿಧಾನಗಳನ್ನು ವಿದ್ಯಾರ್ಥಿಗಳೊಂದಿಗೆ ಅನ್ವೇಷಿಸಿದರು. ಡಾ.ರವಿ ಎಸ್. ಹಿರಿಯ ವೈಜ್ಞಾನಿಕ ಅಧಿಕಾರಿ ಪ್ರಾದೇಶಿಕ ವಿಧಿ  ವಿಜ್ಞಾನ ಪ್ರಯೋಗಾಲಯ  ಹುಬ್ಬಳ್ಳಿ ವಿವಿಧ ಮೊಬೈಲ್ ವಿಧಿವಿಜ್ಞಾನ ವಿಶ್ಲೇಷಣಾ ವಿಧಾನಗಳನ್ನು ವಿವರವಾಗಿ ವಿವರಿಸಿದರು. ಪುಣೆಯ ಡಿಕ್ ರಿಪ್ಟ್೦ ನ ಸಂಸ್ಥಾಪಕ ಮತ್ತು ಸಿಇಓ ಶ್ರೀ ಪ್ರತೀಕ್ ಗಾಯಕ್ವಾಡ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಬಗ್ ಬೌಂಟಿಗಳ ಬಳಕೆ ಕುರಿತು ತರಬೇತಿ ನೀಡಿದರು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜೈವಿಕ ಮತ್ತು ರಾಸಾಯನಿಕ ಫೋರೆನ್ಸಿಕ್ಸ್ ತನಿಖಾ ನಿರ್ವಹಣೆ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು  ಪ್ರಾದೇಶಿಕ  ವಿಧಿವಿಜ್ಞಾನ ಪ್ರಯೋಗಾಲಯ ಬೆಳಗಾವಿಗೆ ಭೇಟಿ ನೀಡಿದರು. ಪ್ರಯೋಗಾಲಯದಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಗಳು ತನಿಖಾ ಪ್ರಕ್ರಿಯೆಯಲ್ಲಿ ಬಳಸಿದ ವಿಧಾನಗಳು ಮತ್ತು ಉಪಕರಣಗಳನ್ನು  ವಿವರಿಸಿದರು.

ಡಾ.ಭಾಗ್ಯಶ್ರೀ ಪಾಂಡುರಂಗಿ, ಡಾ.ಮಂಜುನಾಥ್, ಡಾ.ರಮೇಶ ಬಿ  ಕೋಟಿ ಮತ್ತು  ಪ್ರೊ.ಅಭಿಷೇಕ  ದೇಶಮುಖ ತರಬೇತಿ  ಕಾರ್ಯಕ್ರಮವನ್ನು  ಸಂಯೋಜಿಸಿದರು.  ತರಬೇತಿ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ವಿವಿಧ ಇಂಜಿನೀಯರಿಂಗ್  ಕಾಲೇಜುಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button