Kannada NewsLatest

ಜಲಾವೃತ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ ಭೇಟಿ

ಜಲಾವೃತ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ ಭೇಟಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿಯ ಸಮರ್ಥ ನಗರದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿರುವ ಸುದ್ದಿ ತಿಳಿದ ಶಾಸಕ ಅನಿಲ ಬೆನಕೆ ಸ್ಥಳಕ್ಕೆ ಧಾವಿಸಿ ಜಲಾವೃತ ಪ್ರದೇಶಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಂಡು ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ಥರಿಗೆ ನೆರವು ನೀಡಲಾಯಿತು.

ಸಮರ್ಥ ನಗರದಲ್ಲಿನ ನೀರನ್ನು ಹೊರಹಾಕಲು ಪೈಪಲೈನ್ ಅಳವಡಿಸುವ ಮುಖಾಂತರ ನಾಲಾ ಪ್ರದೇಶಕ್ಕೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಂಡರು. ಅದರಂತೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಶಾಸಕರು ಹಿಗೇಯೇ ಮಳೆ ಮುಂದುವರೆದರೆ ಅಲ್ಲಿರುವ ರಹವಾಸಿಗಳನ್ನು ಬೇರೆ ಕಡೆ ಸ್ಥಳಾಂತರಿಸುವ ಬಗ್ಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕೋರಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ನಿಶ್ಚಯಿಸಿದ್ದು ಅಧಿಕ ಮಳೆಯಾದಲ್ಲಿ ಎಲ್ಲ ಸಮರ್ಥ ನಗರ ರಹವಾಸಿಗಳನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದರು. ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ಥರ ನೆರವಿಗೆ ದಾವಿಸಿ ಬಂದ ಶಾಸಕರಿಗೆ ಅಲ್ಲಿರುವ ಸಾರ್ವಜನಿಕರು ಶಾಸಕರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ರಾಹುಲ ಮುಚ್ಚಂಡಿ, ನಾಗೇಶ ಲಂಗರಖಂಡೆ, ವಿಪುಲ ಜಾಧವ, ವಿನೋದ ಪೂಜಾರಿ, ಶಂಕರ ಪಾಟೀಲ, ಮಹಾಲಿಂಗ ತಂಗಡಗಿ, ಸಾಗರ ಜಾಧವ, ವಿಕ್ರಮ ಕಿಲ್ಲೆಕರ, ನಿಖಿಲ ಮುರ್ಕುಟೆ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂತ್ರಸ್ಥರು ಉಪಸ್ಥಿತರಿದ್ದರು.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button