Kannada NewsLatestNational

ಸಲಿಂಗ ವಿವಾಹ ಕುರಿತ ತೀರ್ಪಿನಿಂದ ಬೇಸರವಾಗಿದೆ ಎಂದ ಅಥ್ಲೀಟ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಲಿಂಗ ವಿವಾಹಕ್ಕೆ ಅವಕಾಶ ನೀಡದಿರುವ ಸುಪ್ರೀಂ ಕೋರ್ಟ್ ತೀರ್ಪು ಬೇಸರ ತಂದಿದೆ ಎಂದು ಒಲಿಂಪಿಯನ್ ದ್ಯುತಿ ಚಂದ್ ಪ್ರತಿಕ್ರಿಯಿಸಿದ್ದಾರೆ.

ಈ ತೀರ್ಪಿನಿಂದಾಗಿ ತಮ್ಮ ಸಂಗಾತಿ ಮೊನಾಲಿಶಾ ಜತೆ ಮದುವೆಯಾಗುವ ಯೋಜನೆ ವಿಫಲವಾಗಿದ್ದು ಇದು ತಮ್ಮನ್ನು ಅಸಮಾಧಾನಗೊಳಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

“ನಾನು ಐದು ವರ್ಷಗಳಿಂದ ಮೊನಾಲಿಶಾ ಅವರೊಂದಿಗೆ ವಾಸಿಸುತ್ತಿದ್ದೇನೆ ಸಲಿಂಗ ವಿವಾಹಗಳನ್ನು ಅನುಮತಿಸುವ ಕಾನೂನನ್ನು ಸಂಸತ್ತು ಅಂಗೀಕರಿಸುತ್ತದೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.

“ಹಲವಾರು ರಾಷ್ಟ್ರಗಳು ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸಿವೆ ಆದರೆ ಭಾರತದಲ್ಲಿ ಮಾತ್ರ ಅದನ್ನು ಕಾನೂನುಬದ್ಧಗೊಳಿಸಲು ಸಮಸ್ಯೆ ಏನು?” ಎಂದು ದ್ಯುತಿ ಪ್ರಶ್ನಿಸಿದ್ದಾರೆ.

2019 ರ ಮೇ ತಿಂಗಳಲ್ಲಿ ದ್ಯುತಿ ಮೊದಲ ಬಹಿರಂಗ ಸಲಿಂಗಕಾಮಿ ಭಾರತೀಯ ಅಥ್ಲೀಟ್ ಎಂದು ಘೋಷಿಸಲ್ಪಟ್ಟರು. ಅವರು ಸಲಿಂಗ ಸಂಬಂಧದಲ್ಲಿದ್ದಾರೆ ಎಂದು ಘೋಷಿಸಿದ ನಂತರ ಅವರ ಕುಟುಂಬದವರು ಟೀಕೆಗಳ ಸುರಿಮಳೆ ಎದುರಿಸಿದರು.

2021 ರಲ್ಲಿ, ದ್ಯುತಿ ಅವರು ಬರ್ಮಿಂಗ್ಹ್ಯಾಮ್‌ನಲ್ಲಿ ಕ್ವೀನ್ಸ್ ಬ್ಯಾಟನ್‌ನಲ್ಲಿ ಭಾಗವಹಿಸಿದ್ದಲ್ಲದೆ ಕಾಮನ್‌ವೆಲ್ತ್ ದೇಶಗಳಲ್ಲಿ ಹೋಮೋಫೋಬಿಯಾ ಮೇಲೆ ಬೆಳಕು ಚೆಲ್ಲುವ ಅವಕಾಶ ಪಡೆದರು. 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ LGBTQIA+ ಧ್ವಜ ಹಿಡಿದಿದ್ದ ದ್ಯುತಿ ಅವರು ಹೋಮೋಫೋಬಿಯಾ ವಿರುದ್ಧ ಸಮರ ಸಾರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button