Belagavi NewsBelgaum NewsKannada NewsKarnataka News

ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಸಂಜೆ, ನವರಾತ್ರಿಯ ಪ್ರಯುಕ್ತ ಹಿಂಡಲಗಾ ಗ್ರಾಮದ ವಿಜಯ ನಗರದ ನಿವಾಸಿಗಳು ಹಮ್ಮಿಕೊಂಡಿದ್ದ ನವರಾತ್ರಿಯ ಉತ್ಸವದಲ್ಲಿ ಪಾಲ್ಗೊಂಡು, ಶ್ರೀ ದುರ್ಗಾ ಮಾತೆಗೆ ಪೂಜೆಯನ್ನು ಸಲ್ಲಿಸಿದರು.

 ಇದೇ ಸಮಯದಲ್ಲಿ ಶ್ರೀ ಮಾವುಲಿ ಮಂಡಳದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.

Home add -Advt

ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಪ್ರದೀಪ ರಾಯಗೋಳ, ಪ್ರಥಮೇಶ ಮುಚ್ಚಂಡಿ, ಅಶುತೋಷ ಕಾಂಬಳೆ, ಮಾವುಲಿ ಮಂಡಳದ ಸರ್ವಸದಸ್ಯರು ಉಪಸ್ಥಿತರಿದ್ದರು.

Related Articles

Back to top button