ಕಿತ್ತೂರು ಉತ್ಸವ ೨೦೨೩: ವಿವಿಧ ಕಾರ್ಯಕ್ರಮಗಳ ವೇಳಾ ಪಟ್ಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಿತ್ತೂರು ಉತ್ಸವದ ನಿಮಿತ್ಯ ಕಿತ್ತೂರು ರಾಣಿ ಚನ್ನಮ್ಮಾ ವೇದಿಕೆ ಕೋಟೆ ಆವರಣದಲ್ಲಿ ಬುದುವಾರ ಅ.೨೫ ರಂದು ಬೆಳಿಗ್ಗೆ ೧೦ ಘಂಟೆಗೆ ರಾಜ್ಯಮಟ್ಟದ ಮಹಿಳಾ ವಿಚಾರ ಸಂಕೀರಣ ಗೋಷ್ಠಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಮಾರಂಭದ ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಹಿರಿಯ ಪತ್ರಕರ್ತೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ. ಭಾರತಿ ಹೆಗಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಮಹಿಳಾ ಹೋರಾಟಗಾರಾದ ರೋಹಿಣಿ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಳಗಾವಿ ಡಿಸಿಪಿ (ಅಪರಾದ ಮತ್ತು ಸಂಚಾರ) ಹಾಗೂ ಲೇಖಕರಾದ ಡಾ. ಪಿ ವಿ ಸ್ನೇಹಾ ಅವರು ಆಶಯ ನುಡಿ ಗಳನ್ನು ಹಂಚಿಕೊಳ್ಳಲಿದ್ದಾರೆ.
ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯ ಹಿರಿಯ ಉಪನ್ಯಾಸಕಿ ವಿನೋದಾ ಅಂಗಡಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ವಿಚಾರ ಗೋಷ್ಠಿ .
ರಾಣಿ ಚನ್ನಮ್ಮ ಹಾಗೂ ಜೀವನ ಹೋರಾಟದ ರೂಪಕವಾಗಿ ಮಹಿಳೆ ಡಾ. ಮಾನಸ ಎಂ.ವಿ ,ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮಹಿಳಾ ಸಬಲೀಕರಣ ಡಾ. ಸುಜಾತ ಕೊಂಬಳಿ,ಕಿತ್ತೂರು ಸಂಸ್ಥಾನ ಹಾಗೂ ರಾಣಿ ಚನ್ನಮ್ಮ ಡಾ. ಸಾವಿತ್ರಿ ಕಮಲಾಪುರ, ಸ್ವಾಭಿಮಾನದ ಹೆಗ್ಗುರುತಾಗಿ ರಾಣಿ ಚನ್ನಮ್ಮ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಪ್ರಸ್ತುತತೆ ಜಯಶ್ರೀ ಚುನಮರಿ,ಕಿತ್ತೂರು ಅಂದು-ಇಂದು ಭಾರತಿ ಮದಭಾವಿ ,ರಾಣಿ ಚನ್ನಮ್ಮಳ ಆಡಳಿತ ಹಾಗೂ ಮಮತಾಮಯಿ ಸ್ವಾತಿ ರಾವ್,ರಾಣಿ ಚನ್ನಮ್ಮ ಹಾಗೂ ಬ್ರಣಷರು ಮೀನಾಕ್ಷಿ ದೀಪಕ್,ಕಿತ್ತೂರು ಚನ್ನಮ್ಮನ ಆಡಳತದ ವೈಜ್ಞಾನಿಕ ದೃಷ್ಠಿಕೋನ ಭಾರತಿ ಮಠದ ವಿಚಾರ ಗೋಷ್ಠಿ ಗಳು ನಡೆಯಲಿವೆ.
ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು.
ಕಿತ್ತೂರಾಣಿ ಚೆನ್ನಮ್ಮ ಕೋಟೆ ಆವರಣದಲ್ಲಿ ಬುದುವಾರ ಅ. ೨೫ ರಂದು ಸಂಜೆ ೪.೩೦ ರಿಂದ ೮ ಗಂಟೆವರೆಗೆ ತತ್ವಪದ ,ಶಾಸ್ತ್ರೀಯ ಸಂಗೀತ, ಚೌಡಕಿ ಪದ, ಜಾನಪದ ಸಂಗೀತ,ಶಹನಾಯಿ, ನೃತ್ಯರೂಪಕ,ಶಾಸ್ತ್ರೀಯ ಸಂಗೀತ,ಭರತ ನಾಟ್ಯ, ಮಾತನಾಡೊ ಗೊಂಬೆ,ಜಾನಪದ ಸಂಗೀತ, ವಚನ ಸಂಗೀತ, ವಾಯಲಿನ್ ವಾದನ, ಜಾನಪದ ಸಂಗೀತ, ಸುಗಮ ಸಂಗೀತ, ಭರತ ನಾಟ್ಯ, ಹಾಸ್ಯ ನೃತ್ಯ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಮಾರೋಪ ಸಮಾರಂಭ ರಾತ್ರಿ ೯:ರಿಂದ ೧೧ ಗಂಟೆವರೆಗೆ ,ನೃತ್ಯ ವೈವಿದ್ಯ, ದೇಶ ಭಕ್ತಿ ಗೀತೆ ನೃತ್ಯ,ಜಾದೂ ಪ್ರದರ್ಶನ ,ಮಹಾನ್ ಬುದ್ಧ ನೃತ್ಯ ರೂಪಕ ನಡೆಯಲಿವೆ.
ರಾತ್ರಿ ೧೦ ರಿಂದ ೧೧ ಗಂಟೆವರೆಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರು ಹಂಸಲೇಖ ಹಾಗೂ ಹಿನ್ನೆಲೆ ಗಾಯಕರು ರಸಮಂಜರಿ ಕಾರ್ಯಕ್ರಮ ನಡೆಯಲಿವೆ.
ರಾತ್ರಿ ೧೧ ರಿಂದ ಶ್ರೀ ಸಿದ್ದೇಶ್ವರ ಸಂಸ್ಕೃತಿಕ ಕಲಾಸಂಘ ಹುಲಿಗೆನಟ್ಟಿ ಅವರಿಂದ ಸಂಗೊಳ್ಳಿ ರಾಯಣ್ಣ ನಾಟಕ ನಡೆಯಲಿದೆ.
ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು.
ಸರದಾರ ಗುರುಸಿದ್ದಪ್ಪ ವೇದಿಕೆ.
ವೀರಭದ್ರೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಬುಧವಾರ ಅ.೨೫ ರಂದು ಸಂಜೆ ೪:೩೦ ರಿಂದ ೮ ಗಂಟೆವರೆಗೆ ಕನ್ನಡ ಹಾಡುಗಳು, ಭಾವಗೀತೆ ,ಸುಗಮ ಸಂಗೀತ, ಜಾನಪದ ಸಂಗೀತ, ತಬಲಾ ವಾದನ, ಸೋಬಾನ ಪದ, ತತ್ವಪದ,ತಬಲಾ ವಾದನ, ಡೊಳ್ಳಿನ ಪದ, ಜಾನಪದ ಭಜನಾ, ಚೌಡಕಿ ಪದ, ಸಂಗೀತ ಕಾರ್ಯಕ್ರಗಳು ನಡೆಯಲಿವೆ.
ರಾತ್ರಿ ೮ ರಿಂದ ೯ ಗಂಟೆವರೆಗೆ ಕಿತ್ತೂರ ರಾಣಿ ಚೆನ್ನಮ್ಮ ವೇದಿಕೆ ಕೋಟೆ ಅವರನಾದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ. ರಾತ್ರಿ ೯ ರಿಂದ ೧೦ ಗಂಟೆವರೆಗೆ ರಸಮಂಜರಿ, ಶ್ರೀ ಕೃಷ್ಣ ಪಾರಿಜಾತ ನಡೆಯಲಿವೆ.
ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು.
ವಡ್ಡರ ಎಲ್ಲಣ್ಣ ವೇದಿಕೆ ಕಲ್ಮಠ ಆವರಣದ ಸಭಾಭವನದಲ್ಲಿ ಬುಧವಾರ ಅ.೨೫ ರಂದು ಸಂಜೆ ೪.೩೦ ರಿಂದ ೮ ಗಂಟೆವರೆಗೆ ಭಜನಾ,ಭಜನೆ,ಸೋಬಾನ ಪದ, ಭಜನೆ,ದಾಸರ ಪದ,ಭಜನೆ,ದಾಸರ ಪದ,ಪುರವಂತರ ಪದ,ನಾಟಕ ಪದಗಳು, ಕ್ಯಾರಿನೆಟ್ ವಾದನ,ದಾಸರ ಪದ ಹಾಗೂ ಡೊಳ್ಳಿನ ಸಂಘ ಕಾರ್ಯಕ್ರಮಗಳು ನಡೆಯಲಿವೆ.
ಕಿತ್ತೂರಾಣಿ ಚೆನ್ನಮ್ಮಾ ಕೋಟೆ ಆವರಣದಲ್ಲಿ ರಾತ್ರಿ ೮ ರಿಂದ ೯.೨೦ ವರೆಗೆ ಸಮಾರೋಪ ಸಮಾರಂಭ ಸೋಬಾನ ಪದ ಬಯಲಾಟ ನಡೆಯಲಿವೆ.
ಕ್ರೀಡಾ ಕಾರ್ಯಕ್ರಮಗಳು.
ಬೆಳಿಗ್ಗೆ ೬.೩೦ ಗಂಟೆಗೆ ಕಿತ್ತೂರಿನ ಗಜರಾಜ ಪ್ಯಾಲೆಸ್ ರೋಡನಲ್ಲಿ ಸೈಕ್ಲಿಂಗ್ ಸ್ಪರ್ಧೆ ಗಳು ನಡೆಯಲಿವೆ .
ಕಿತ್ತೂರು ವಿಧಾನಸಭಾ ಮತಕ್ಷೇತ್ರ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ್ದಲ್ಲಿ ಇರುವ ಕೆ.ಇ.ಬಿ ಮೈದಾನದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗೆ ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಸಮಾರೋಪ ಸಮಾರಂಭ ಸಂಜೆ ೮ ರಿಂದ ೯ ಗಂಟೆವರೆಗೆ.
ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠ, ಶ್ರೀ ಮ.ನಿ.ಪ್ರ.ಸ್ವ. ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ಶ್ರೀಗುರು ಮಡಿವಾಳೇಶ್ವರ ಮಠ ನಿಚ್ಚಣಕಿ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು,ಸಿಮೀಮಠ ಕಾದರವಳ್ಳಿಶ್ರೀಶ್ರೀಶ್ರೀ ಷ.ಬ್ರ. ಡಾ: ಪಾಲಾಕ್ಷ ಶಿವಯೋಗಿಶ್ವರರು,ಬೈಲೂರು ನಿಷ್ಕಲ ಮಂಟಪ ಪೂಜ್ಯಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ ಲಾಡ್ ಅವರು ಘನ ಉಪಸ್ಥಿತಿ ಇರಲಿದ್ದಾರೆ, ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಅಧ್ಯಕ್ಷತೆ ವಹಿಸಿಲಿದ್ದರೆ. ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಮ. ಪಟ್ಟಣ,ವಿಶೇಷ ಪ್ರತಿನಿಧಿ-೨, ನವದೆಹಲಿ ಪ್ರಕಾಶ ಬಾ. ಹುಕ್ಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ವಿನಯ್ ಕುಲಕರ್ಣಿ ಆಗಮಿಸಲಿದ್ದಾರೆ.
ಖ್ಯಾತ ಚಲನಚಿತ್ರ ನಟ ಹಾಗೂ ಸಂಸ್ಕೃತಿ ಚಿಂತಕರು ಡಾ.ರಮೇಶ್ ಅರವಿಂದ ಸಮಾರೋಪ ನುಡಿಗಳನ್ನು ಆಡಲಿದ್ದಾರೆ.
ಚನ್ನಮ್ಮನ ಕಿತ್ತೂರು ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಾದ ನಿತೇಶ್ ಕೆ. ಪಾಟೀಲ, ಬೆಳಗಾವಿ ಜಿಲ್ಲಾ ಪಂಚಾಯತಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದಹರ್ಷಲ್ ಭೂಯರ್, ಉಪವಿಭಾಗಾಧಿಕಾರಿಗಳಾದ ಪ್ರಭಾವತಿ ಫಕೀರಪೂರ,ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಳಾದ, ಡಾ.ಭೀಮಾಶಂಕರ ಗುಳೇದ ,ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆನಿರ್ದೆಶಕರಾದ ಡಾ. ಕೆ. ಧರಣಿ ದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಚೆನ್ನಮ್ಮ ಕಿತ್ತೂರು ಉತ್ಸವ ಎಲ್ಲ ಉಪಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಮಾಡಲಿದ್ದಾರೆ .
ಚನ್ನಮ್ಮನ ಕಿತ್ತೂರು ಉತ್ಸವದ ಎಲ್ಲ ಉಪಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಅ.೨೩ ಹಾಗೂ ೨೫ ರಂದು ಸಂಜೆ ೮ ಗಂಟೆಗೆ ಭತ್ತೇರಿ ಮೇಲೆ ದೀಪೋತ್ಸವ ಹಾಗೂ ಸಿಡಿಮದ್ದು ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು, ಚನ್ನಮ್ಮನ ಕಿತ್ತರು ಉತ್ಸವ ಸಮಿತಿ ಅಧ್ಯಕ್ಷರಾದ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.೨೪ ರಂದು ವೈವಿಧ್ಯಮಯ ಕಾರ್ಯಕ್ರಮಗಳು
ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿರುವ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಮಂಗಳವಾರ (ಅ.೨೪) ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ವಿಚಾರಗೋಷ್ಠಿ, ಕವಿಗೋಷ್ಠಿ, ಸೇರಿದಂತೆ ತರಹೇವಾರಿ ಕಾರ್ಯಕ್ರಮಗಳಿಗೆ ಐತಿಹಾಸಿಕ ನೆಲ ಸಾಕ್ಷಿಯಾಗಲಿದೆ.
ಕಿತ್ತೂರು ರಾಣಿ ಚನ್ನಮ್ಮ ವೇದಿಕೆ:
ರಾಜ್ಯ ಮಟ್ಟದ ಕಿತ್ತೂರು ಉತ್ಸವದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಿತ್ತೂರ ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿಗಳಾದ ಸಂತೋಷ ಹಾನಗಲ್ ಅವರು ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ, ಡಿವೈಎಸ್ಪಿ ರವಿ ಡಿ. ನಾಯ್ಕ, ಡಾ. ಪ್ರಜ್ಞಾ ಮತ್ತಿಹಳ್ಳಿ, ಪತ್ರಕರ್ತರಾದ ಬಸವರಾಜ ಚಿನಗುಡಿ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ ೧೦ ಗಂಟೆಯಿಂದ ೧೨ ರವರೆಗೆ ಕಿತ್ತೂರು ಸಂಸ್ಥಾನದ ವ್ಯಕ್ತಿತ್ವ ಅನಾವರಣ ವಿಚಾರಗೋಷ್ಠಿ ನಡೆಯಲಿದೆ. ಐತಿಹಾಸಿಕ ಕಾದಂಬರಿಕಾರರಾದ ಯ. ರು. ಪಾಟೀಲ್ ಅವರು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕಿತ್ತೂರು ಸಂಸ್ಥಾನದ ಆಡಳಿತದಲ್ಲಿ ರಾಣಿಯರ ಪಾತ್ರ, ಸವಾಯಿ ಮಲ್ಲಸರ್ಜನ ದತ್ತಕ ಪ್ರಕ್ರಿಯೆ, ಕಿತ್ತೂರು ಸಂಸ್ಥಾನದ ಬೆಳಕಿಗೆ ಬಾರದ ಕ್ರಾಂತಿವೀರರು, ಬ್ರಿಟಿಷ್ ದಾಖಲೆಗಳಲ್ಲಿ ರಾಣಿ ಚನ್ನಮ್ಮ, ಕಿತ್ತೂರು ಸಂಸ್ಥಾನ ಹಾಗೂ ಪ್ರಮುಖ ಬ್ರಿಟಿಷ್ ಅಧಿಕಾರಿಗಳು ಈ ವಿಷಯಗಳ ವಿಚಾರಗೋಷ್ಠಿ ನಡೆಯಲಿದೆ.
ಮಧ್ಯಾಹ್ನ ೧೨.೩೦ ರಿಂದ ೨ ಗಂಟೆವರೆಗೆ ಕಿತ್ತೂರು ಸಂಸ್ಥಾನದ ಆಡಳಿತಾತ್ಮಕ ನೋಟಗಳು ವಿಚಾರಗೋಷ್ಠಿ-೨ ನಡೆಯಲಿದ್ದು, ಹಿರಿಯ ಸಾಹಿತಿಗಳಾದ ಡಾ. ಸಂಗಮನಾಥ ಲೋಕಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
ಕಿತ್ತೂರು ಸಂಸ್ಥಾನ ಕಾಲದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಹೆಜ್ಜೆಗಳು, ಕಿತ್ತೂರ ಅರಸರ ಕಾಲದಲ್ಲಿ ಧಾರ್ಮಿಕ ಪ್ರಜ್ಞೆ, ಕಿತ್ತೂರು ಸಂಸ್ಥಾನ ಹಾಗೂ ಬ್ರಿಟಿಷರೊಂದಿಗೆನ ಹೋರಾಟ, ಕಿತ್ತೂರು ಸಂಸ್ಥಾನದೊಂದಿಗೆ ಸಮಕಾಲಿನ ದೇಶಗತಿ ಮನೆತನಗಳ ಸಂಬಂಧ, ಇತಿಹಾಸ ಸಂಶೋಧಕ ದೊಡ್ಡಭಾವೇಪ್ಪ ಮೂಗಿಯವರ ಕುರಿತು ಕಿತ್ತೂರು ಚೆನ್ನಮ್ಮನ ದೇಶಪ್ರೇಮ ವಿಷಯಗಳು ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಮಧ್ಯಾಹ್ನ ೩ ಗಂಟೆಗೆ ಬೆಳಗಾವಿಯ ನಾದ ಸುಧಾ ಸಂಗೀತ ಶಾಲೆ ಅವರಿಂದ ಸಂಗೀತ, ಮಧ್ಯಾಹ್ನ ೩.೧೦ಕ್ಕೆ ಬಸವರಾಜ ಅಡಿವೆಪ್ಪ ತಿಮ್ಮಾಪುರ ಅವರಿಂದ ತತ್ವಪದ, ಮಧ್ಯಾಹ್ನ ೩.೨೦ಕ್ಕೆ ಬಸವರಾಜ ಭಜಂತ್ರಿ ಅವರಿಂದ ಶಹನಾಯಿ, ಮಧ್ಯಾಹ್ನ ೩.೩೦ಕ್ಕೆ ಸೀಮಾ ಕುಲಕರ್ಣಿ ಅವರಿಂದ ಸುಗಮ ಸಂಗೀತ, ಮಧ್ಯಾಹ್ನ ೩.೪೦ಕ್ಕೆ ಪ್ರಕಾಶ್ ನ ಪರಸನಟ್ಟಿ ಹಾಗೂ ಶಿವಾನಂದನ ಪರಸನಟ್ಟಿ ಅವರಿಂದ ಜಾನಪದ ಸಂಗೀತ, ಮಧ್ಯಾಹ್ನ ೩.೫೦ಕ್ಕೆ ಬಸಪ್ಪ ಅಮರಗೋಳ ಅವರಿಂದ ತಬಲಾ ಸೋಲೊ, ಸಂಜೆ ೪ ಗಂಟೆಗೆ ಸಂಗಮೇಶ್ವರ ಪಾಟೀಲ ಅವರಿಂದ ವಚನ ಸಂಗೀತ, ಸಂಜೆ ೪.೧೦ಕ್ಕೆ ಯಶೋಧರೆ ಮಲ್ಲಿಗವಾಡ ಹಾಗೂ ತಂಡದವರಿಂದ ನೃತ್ಯ ರೂಪಕ, ಸಂಜೆ ೪.೨೦ಕ್ಕೆ ಹೃಷಿಕೇಶ ಹೆರ್ಲೆಕರ ಅವರಿಂದ ಸಂಗೀತ, ಸಂಜೆ ೪.೩೦ ಗಂಟೆಗೆ ಸಿತಾರ ಮಾಧುರ್ಯ ತಂಡದಿಂದ ಸಿತಾರವಾದನ, ಸಂಜೆ ೪.೪೦ ಕ್ಕೆ ಬೆಂಗಳೂರಿನ ರಂಗ ಕಹಳೆ ಹಾಗೂ ತಂಡದವರಿಂದ ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಸಂಜೆ ೫.೧೦ ಕ್ಕೆ ಶ್ರೀ ಮುರಸಿದ್ದೇಶ್ವರ ಕಲಾ ಪೋಷಕ ಸಂಘದಿಂದ ಡೊಳ್ಳಿನ ಪದ, ೫.೨೦ ಕ್ಕೆ ಪಪೆಟ್ ಶೋ ತಂಡದಿಂದ ತೊಗಲು ಗೊಂಬೆಯಾಟ, ೫.೫೦ ಕ್ಕೆ ಪೂಜಾ ಬೇವೂರ ಅವರಿಂದ ಜಾನಪದ ಸಂಗೀತ, ಸಂಜೆ ೬ ಗಂಟೆಗೆ ರೂಪಾ ಖಡಗಾಂವಿ ಅವರಿಂದ ತತ್ವಪದ, ೬.೧೦ ಕ್ಕೆ ಹೇಮಾ ವಾಘಮೋಡೆ ಅವರಿಂದ ನೃತ್ಯ ರೂಪಕ, ೬.೨೦ ಕ್ಕೆ ಸಿದ್ರಾಮಪ್ಪ ಪೊಲೀಸ ಪಾಟೀಲ ಅವರಿಂದ ಹಿಂದೂಸ್ತಾನಿ ಸಂಗೀತ, ೬.೩೦ಕ್ಕೆ ಪ್ರಣವ ಯೋಗ ಕೇಂದ್ರದಿಂದ ಯೋಗಾಸನ, ೬.೪೫ ಕ್ಕೆ ಸಂಕಲ್ಪ ನೃತ್ಯಾಲಯ ಸಾಂಸ್ಕೃತಿಕ ಲಹರಿಯವರಿಂದ ನೃತ್ಯ, ಸಂಜೆ ೭ ಗಂಟೆಗೆ ಜೀ ಕನ್ನಡ ತಂಡದ ಕಲಾವಿದರಿಂದ ನಗೆ ಹಬ್ಬ, ರಾತ್ರಿ ೮ ಕ್ಕೆ ಕಲಾವತಿ ದಯಾನಂದ ಮತ್ತು ದಿವ್ಯ ರಾಮಚಂದ್ರನ್ ತಂಡದವರಿಂದ ರಸಮಂಜರಿ, ರಾತ್ರಿ ೯ ಗಂಟೆಗೆ ಬೆಂಗಳೂರಿನ ಜೈ ಜೀವನ್ ಸ್ಟಾಕ್ಟೊ ಬ್ಯಾಂಡ್ರಾ ಅವರಿಂದ ರಸಮಂಜರಿ, ರಾತ್ರಿ ೧೦ಕ್ಕೆ ಬೆಂಗಳೂರಿನ ಶಮಿತಾ ಮಲ್ನಾಡ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸರದಾರ ಗುರುಸಿದ್ದಪ್ಪ ವೇದಿಕೆ:
ಮಂಗಳವಾರ(ಅ.೨೪) ಸಂಜೆ ೪.೩೦ ಗಂಟೆಗೆ ಕನ್ನಡ ಮಹಾಮದಿಯರ ಜನಪದ-ತತ್ವಪದ ಕಲಾ ಬಳಗದಿಂದ ತತ್ವಪದ, ೪:೪೫ಕ್ಕೆ ವೆಂಕಪ್ಪ ಅ ಸುತಗೇಕರ ಅವರಿಂದ ಗೊಂದಲಿಗರ ಮೇಳ, ೫ ಗಂಟೆಗೆ ಅಕ್ಷತಾ ಅದೃಶಪ್ಪಾ ಕುಂಬಾರ ಅವರಿಂದ ಯೋಗಾಸನ, ೫.೧೫ ಕ್ಕೆ ಸಮೃದ್ಧಿ ಅಂಗವಿಕಲರ ಸಂಸ್ಥೆ ಅವರಿಂದ ಸಂಗೀತ, ೫.೩೦ ಕ್ಕೆ ವಿಶ್ವನಾಥ್ ವಿ ಶಿಗೀಹಳ್ಳಿ ಅವರಿಂದ ಲಾವಣಿ ಪದ, ೫.೪೫ ಕ್ಕೆ ಬೆಳವಿಯ ಡಿ. ಆರ್. ನದಾಫ್ ಅವರಿಂದ ಮೂಗಿನಿಂದ ಕೊಳಲು ವಾದನ, ೬.೧೫ ಕ್ಕೆ ಮಲ್ಲಯ್ಯ ವಿ. ಸಂಬಾಳ ಅವರಿಂದ ಸಂಗೀತ, ೬.೩೦ ಕ್ಕೆ ಹುಬ್ಬಳ್ಳಿಯ ವಿರಾಜ್ ಡಾನ್ಸ್ ಟೀಮ್ ಇಂದ ನೃತ್ಯ, ೬.೪೫ಕ್ಕೆ ಸ್ವರ ಸಿಂಚನ ಮೆಲೋಡಿಸ್ ಅವರಿಂದ ಸಂಗೀತ, ೭ ಗಂಟೆಗೆ ಬೆಳಗಾವಿಯ ಶ್ರೀರಂಗ ಜೋಶಿ ಅವರಿಂದ ವಚನ ಸಂಗೀತ, ೭.೧೫ಕ್ಕೆ ರಾಜೇಶ್ವರಿ ಹಿರೇಮಠ ಅವರಿಂದ ಸಂಗೀತ, ೭ ಗಂಟೆಗೆ ಸೌಜನ್ಯ ಆನಂದ ಗಾಣಿಗೇರ ರವರಿಂದ ಡೊಳ್ಳು ಕುಣಿತ, ೭.೪೫ ಕ್ಕೆ ಶ್ರೀಶೈಲ ಜಕ್ಕಪ್ಪನವರ ರವರಿಂದ ಭಜನೆ, ರಾತ್ರಿ ೮ ಗಂಟೆಗೆ ಸಮೃದ್ಧಿ ಸಂಪಗಾವಿ ಅವರಿಂದ ಭರತನಾಟ್ಯ, ೮.೧೫ ಕ್ಕೆ ಉತ್ತರ ಕರ್ನಾಟಕ ಮಹಿಳಾ ಜಾನಪದ ಕಲಾವಿದರ ಸಂಘದವರಿಂದ ಜಾನಪದ, ೮.೩೦ ಕ್ಕೆ ಶ್ರೀ ಗಾನ ಕೋಗಿಲೆ ಮೆಲೋಡಿಸ್ ಅವರಿಂದ ರಸಮಂಜರಿ, ರಾತ್ರಿ ೯.೩೦ ಗಂಟೆಗೆ ಮಲ್ಲವ್ವ ಮ್ಯಾಗೇರಿ ಅವರಿಂದ ಶ್ರೀ ಕೃಷ್ಣ ಪಾರಿಜಾತ ನಡೆಯಲಿದೆ.
ವಡ್ಡರ ಯಲ್ಲಣ್ಣ ವೇದಿಕೆ:
ಸಂಜೆ ೪.೩೦ ಗಂಟೆಗೆ ಬಾಹುಬಲಿ ಕೆ. ಬೆಳಗಾವಿ ಅವರಿಂದ ಭಜನೆ, ೪.೫೦ ಕ್ಕೆ ಸಿದ್ಧಾರೂಢ ಭಜನಾ ಮಂಡಳಿಯಿಂದ ಭಜನೆ, ೫.೧೦ ಕ್ಕೆ ಶ್ರೀ ಲಕ್ಷ್ಮೀದೇವಿ ಡೊಳ್ಳಿನ ಗಾಯನದವರಿಂದ ಡೊಳ್ಳಿನ ಪದ, ೫.೩೦ಕ್ಕೆ ಶ್ರೀ ರೇಣುಕಾದೇವಿ ಭಜನಾ ಮಂಡಳಿಯಿಂದ ಭಜನೆ, ೫.೫೦ ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ನಾಟ್ಯಕಲಾ ಸಂಗದವರಿಂದ ಭಜನೆ, ೬.೧೦ ಗಂಟೆಗೆ ಶ್ರೀ ಸಿಂಗಪ್ಪಾ ಶ್ರೀಶೈಲ್ ಶೆಟ್ಟರ ಅವರಿಂದ ತತ್ವಪದ, ೬.೩೦ ಕ್ಕೆ ಗ್ರಾಮ ದೇವತೆ ಭಜನಾ ಮಂಡಳದವರಿಂದ ಭಜನೆ, ೭ ಗಂಟೆಗೆ ಶ್ರೀ ಈರಪ್ಪ ಫ್. ಬಬ್ಲಿ ಅವರಿಂದ ಭಜನಾ, ೭.೧೫ಕ್ಕೆ ಶ್ರೀ ಈರಯ್ಯ ರಾಚಯ್ಯ ಕೇರಿಮಠ ಅವರಿಂದ ಭಜನಾ, ೭.೪೫ ಕ್ಕೆ ಶ್ರೀ ಶಿವಾನಂದೇಶ್ವರ ಮೆಲೋಡಿಸ್ ಅವರಿಂದ ಸಂಗೀತ, ೭.೪೫ ಕ್ಕೆ ಹವಳೆಪ್ಪ ಫ್. ಮಾದರ ಅವರಿಂದ ಭಜನಾ, ರಾತ್ರಿ ೮ ಗಂಟೆಗೆ ಶ್ರೀ ಗುರು ಶಿವಾನಂದ ಭಜನಾ ಮಂಡಳಿ ಅವರಿಂದ ಭಜನೆ, ೮.೨೦ ಕ್ಕೆ ಮಂಜುನಾಥ ಯಲ್ಲಪ್ಪ ಮಾದರ ರವರಿಂದ ಜಾನಪದ ಭಜನೆ, ೮.೪೦ಕ್ಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘದವರಿಂದ ಭಜನೆ, ಹಾಗೂ ೯:೩೦ಕ್ಕೆ ನಾಗಪ್ಪ ಸೂರ್ಯವಂಶಿಯವರಿಂದ ಸಂಗ್ಯಾ ಬಾಳ್ಯಾ ಕಾರ್ಯಕ್ರಮ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ