*ರಾಜ್ಯಪಾಲರಿಗೆ ಮೇಯರ್ ಪತ್ರ; ಸರ್ಕಾರವೇ ಉತ್ತರ ನೀಡಲಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಅದಕ್ಕೆ ಸರ್ಕಾರವೇ ಉತ್ತರ ನೀಡಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ಈ ಕುರಿತು ವಿಕಾಸ ಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆಸ್ತಿ ಕರ ಪರಿಷ್ಕರಣೆಗೆ ಸಂಬಂಧಿಸಿ ಸರ್ಕಾರಕ್ಕೆ ಮಾಹಿತಿ ಕೊಡುವಾಗ ಅಧಿಕಾರಿಗಳಿಂದ ಸಣ್ಣ ತಪ್ಪಾಗಿರಬಹುದು. ಇದು ಕ್ಲರಿಕಲ್ ಮಿಸ್ಟೆಕ್. ಅದನ್ನೇ ದೊಡ್ಡ ತಪ್ಪು ಎಂದು ಬಿಂಬಿಸಿ, ಶಾಸಕ ಅಭಯ ಪಾಟೀಲ್ ಅನಗತ್ಯವಾಗಿ ಮೇಯರ್ ಅವರಿಂದ ರಾಜ್ಯಪಾಲರಿಗೆ ಪತ್ರ ಬರೆಯಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು.
ಮೇಯರ್ ಸೋಮನ್ನಾಚೆ ಅವರು ಶಾಸಕ ಅಭಯ ಪಾಟೀಲ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಶಾಸಕ ಅಭಯ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಪಾಲಿಕೆ ಅಧಿಕಾರಿಗಳ ಅಕ್ರಮವನ್ನು ಕೇಂದ್ರ ಲೋಕಸೇವಾ ಯೋಗದ ಮೂಲಕ ತನಿಖೆಗೆ ಒಳಪಡಿಸಲಾಗುವುದು ಎಂದು ಶಾಸಕ ಅಭಯ ಹೇಳಿದ್ದಾನೆ. ಇದು ನಿಯಮ ಬಾಹಿರ. ಅಧಿಕಾರಿಗಳು ಅಕ್ರಮ ಮಾಡಿದ್ದರೆ ರಾಜ್ಯ ಸರ್ಕಾರವೇ ತನಿಖೆ ಮಾಡುತ್ತದೆ. ಸರ್ಕಾರಕ್ಕೆ ತಿಳಿಸಬೇಕಿತ್ತು.?ಎಂದು ಪ್ರಶ್ನಿಸಿದರು.
ಮಾಹಾನಗರ ಪಾಲಿಕೆಯಲ್ಲಿ ಶಾಸಕ ಅಭಯ ಪಾಟೀಲ್ ಕಿಂಗ್ ಮಾಸ್ಟರ್, ಆಸ್ತಿ ಕರ ಪರಿಷ್ಕರಣೆಗೆ ಸಂಬಂಧಿಸಿದ ಪೈಲ್ ನ್ನು ಮುಚ್ಚಿಟ್ಟಿದ್ದಾರೆ. ಇದೇ ವಿಷಯ ಇಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಅವರನ್ನು ಭೇಟಿಯಾದರೆ ಅಚ್ಚರಿಪಡಬೇಕಿಲ್ಲ ಎಂದು ವ್ಯಂಗ್ಯ ವಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ