ಮಾರಿಹಾಳದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸನ್ಮಾನ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರೀಹಾಳ ಗ್ರಾಮದ ಸಮಸ್ತ ನಾಗರಿಕರ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬುಧವಾರ ಸಂಜೆ ಸನ್ಮಾನಿಸಲಾಯಿತು.
ಎಲ್ಲೇ ಹೋದರೂ ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು, ಕ್ಷೇತ್ರದ ಜನರನ್ನು ಸ್ಮರಿಸಲು ಮರೆಯುವುದಿಲ್ಲ. ನಾನು ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದೇನೆ. ನಮ್ಮ ಉಡುಗೆ ತೊಡುಗೆಗೂ ಅವರ ಉಡುಗೆ ತೊಡುಗೆಗೂ, ಆಹಾರ ಪದ್ಧತಿಗೂ, ಮಾತನಾಡುವ ಶೈಲಿಗೂ ಸಾಕಷ್ಟು ವ್ಯತ್ಯಾಸವಿದೆ. ಆದಾಗ್ಯೂ ನಾನು ಅಲ್ಲಿಯ ಜನರ ಮನಸ್ಸನ್ನು ಗೆದ್ದಿದ್ದೇನೆ. ಉಡುಪಿಯಲ್ಲಿ ಎಲ್ಲ ಐವರು ಬಿಜೆಪಿ ಶಾಸಕರಿದ್ದರೂ ಅವರು ನನ್ನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಿಂದಾಗಿ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೆಬ್ಬಾಳಕರ್ ತಿಳಿಸಿದರು.
ಕ್ಷೇತ್ರಕ್ಕೆ ಸಾಕಷ್ಟು ಹಣ ತಂದು ಅಭಿವೃದ್ಧಿ ಮಾಡಲು ನಾನು ಬದ್ದನಾಗಿದ್ದೇನೆ. ಎಲ್ಲರೂ ಸೇರಿ ಮಾದರಿ ಕ್ಷೇತ್ರ ಮಾಡೋಣ. ಚುನಾವಣೆ ಸಂದರ್ಭದಲ್ಲಿ ಯಾರು ಏನೇ ಗಿಮಿಕ್ ಮಾಡಿದರೂ ನೀವು ನನ್ನ ಕೈ ಬಿಡಲಿಲ್ಲ. ನಿಮ್ಮ ಋಣವನ್ನು ತೀರಿಸುವುದು ನನ್ನ ಜವಾಬ್ದಾರಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಶಂಕರಗೌಡ ನಿರ್ವಾಣಿ, ಬಸವ ಸಮಿತಿ ಅಧ್ಯಕ್ಷ ಸಿ ಆರ್ ಪಾಟೀಲ, ರಾಮಚಂದ್ರ ಚೌವ್ಹಾಣ, ಬಸವರಾಜ ಮ್ಯಾಗೋಟಿ, ಅಪ್ಪಾ ಭಾಗವಾನ, ನಾರಾಯಣ ಸೊಗಲಿ, ಸಂಜಯ ಚಾಟೆ, ಶಂಕರಗೌಡ ಪಾಟೀಲ, ಸಮೀರ ಮುಲ್ಲಾ, ಬಸವರಾಜ ವಣ್ಣೂರ್, ದಿಲಾವರ್ ಪೆಂಡಾರಿ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ