ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ಈ ವರ್ಷದ ಕೊನೇ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆಗಳಲ್ಲಿ ಮಧ್ಯಾಹ್ನನದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಿದೆ.
ಇಂದಿನ ಚಂದ್ರಗ್ರಹಣ 30 ವರ್ಷಗಳ ಬಳಿಕ ಸಂಭವಿಸುತ್ತಿರುವ ರಾಹುಗ್ರಸ್ತ ಚಂದ್ರಗ್ರಹಣವಾಗಿದೆ. ಇಂದು ಮಧ್ಯರಾತ್ರಿ ಚಂದ್ರಗಹಣ ಸಂಭವಿಸಲಿದೆ. ರಾತ್ರಿ 11:30ಕ್ಕೆ ಗ್ರಹಣ ಆರಭವಾಗಲಿದ್ದು, 1:45 ಗ್ರಹಣ ಮಧ್ಯ ಕಾಲವಾಗಿದೆ. ಬೆಳಗಿನ ಜಾವ 3:30ಕ್ಕೆ ಗ್ರಹಣ ಮೋಕ್ಷಕಾಲವಾಗಿದೆ. ಸಂಜೆ 7:30ರೊಳಗೆ ಊಟ ಮುಗಿಸಿಕೊಳ್ಳಬೇಕು ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಗ್ರಹಣ ಹಿಡಿಯುತ್ತಿರುವುದರಿಂದ ಮೇಷರಾಶಿ, ಕುಂಭ, ತುಲಾ ರಾಶಿಯವರಿಗೆ ಸಮಸ್ಯೆಯಿದೆ. ಮೇಷರಾಶಿಯವರು ಗ್ರಹಣ ಕಾಲದಲ್ಲಿ ಶಿವನ ಆರಾಧನೆ ಮಾಡುವುದು ಸೂಕ್ತ. ಶಿವನ ದೇವಸ್ಥಾನಕ್ಕೆ ಅಕ್ಕಿ, ಮೊಸರು, ಹಾಲನ್ನು ನೀಡುವಿದು ಉತ್ತಮ. ಯಾವ ರಾಶಿಯ ಮೇಲೆ ಗ್ರಹಣ ಸಂಭವಿಸಿತ್ತದೆ ಆ ರಾಶಿಯವರು ಗ್ರಹಣ ಕಾಲದಲ್ಲಿ ದಾನ ಮಾಡುವುದು ಉತ್ತಮ.
ಗ್ರಹಣ ಸಮಯದಲ್ಲಿ ಆಹಾರ ಸೇವನೆ, ಪ್ರಯಾಣ ಸೂಕ್ತವಲ್ಲ. ಗ್ರಹಣ ಸಮಯದಲ್ಲಿ ಭಗವಂತನ ನಾಮಸ್ಮರಣೆ ಮಾಡಬೇಕು ಜ್ಯೋತಿಷಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ