*ಕೆಎಲ್ಇ: ಇಂಡಿಯನ್ ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪ್ಯಾಥಾಲಜಿಸ್ಟ್ ಗಳ 30 ನೇ ರಾಷ್ಟ್ರೀಯ ಸಮ್ಮೇಳನ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ನ ಕೆಎಲ್ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಓರಲ್ ಪೆಥಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗವು ಇಂಡಿಯನ್ ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪ್ಯಾಥಾಲಜಿಸ್ಟ್ ಗಳ 30 ನೇ ರಾಷ್ಟ್ರೀಯ ಸಮ್ಮೇಳನವನ್ನು ಇದೇ ದಿ. 3 ರಿಂದ 5 ನವೆಂಬರ 2023ರ ವರೆಗೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಕೆಎಲ್ಇ ಶತಮಾನೋತ್ಸವ ಕನ್ವೆನ್ಷನ್ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ಕರ್ಯಾಧ್ಯಕ್ಷರೂ ಹಾಗೂ ಕಾಹೆರನ ಕುಲಪತಿಗಳಾದ ಡಾ ಪ್ರಭಾಕರ ಕೋರೆ ಅವರು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾಹೆರನ ಉಪಕುಲಪತಿ ಡಾ ನಿತಿನ್ ಗಂಗಾನೆ, ಸಂಸ್ಥೆಯ ನಿರ್ದೇಶಕರಾದ ಡಾ ವಿ ಐ ಪಾಟೀಲ ಅವರು ಆಗಮಿಸಲಿದ್ದಾರೆ.
ಸಮಾವೇಶದ ಮುಖ್ಯ ಭಾಷಣಕಾರರಾಗಿ ಜಪಾನ್ನ ಡಾ. ಯೂಚಿ ತನಕಾ, ಅಮೇರಿಕೆಯ ಡಾ. ಪ್ರವೀಣ್ ಆರಾನಿ, ಮಸ್ಕತ್ನ ಡಾ. ಸಂಜಯ್ ಸರಾಫ್, ನಾಗಪೂರನ ಡಾ. ಸುಚಿತ್ರಾ ಗೋಸಾವಿ, ಕೋಲ್ಕತ್ತಾದ ಡಾ ಜಯಗೋಪಾಲ್ ರೇ, ಬೆಂಗಳೂರಿನ ಡಾ ಕವಿತಾ ರಾವ್, ದೆಹಲಿಯ ಡಾ ಪುನೀತ್ ಅಹುಜಾ, ಓರಿಸ್ಸಾದ ಡಾ ಜಗದೀಶ್ ರಾಜಗುರು, ಮಧುರೈನ ಡಾ ನಾರಾಯಣ ಗುರುರಾಜ್ ಹಾಗೂ ಡಾ ಎನ್. ಗೋವಿಂದರಾಜ್ ಕುಮಾರ್ ಅವರು ಆಗಮಿಸಲಿದ್ದಾರೆ.
ಸಮಾವೇಶದಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಬಾಯಿಯ ಕ್ಯಾನ್ಸರ್, ತಂಬಾಕು ಸಂಬAಧಿತ ಬಾಯಿಯ ರೋಗಗಳು ಮತ್ತು ತಲೆ ಮತ್ತು ಕತ್ತಿನ ರೋಗಶಾಸ್ತ್ರದ ವಿಷಯಗಳ ಕುರಿತು ಭಾಷಣ, ವಿಚಾರ ಸಂಕಿರಣ, ಆಡುಮಾತಿನ ಮತ್ತು ವೈಜ್ಞಾನಿಕ ಪ್ರಬಂಧ, ಚರ್ಚೆ ನಡೆಸಲಾಗುತ್ತದೆ.
ಸಂಸ್ಥೆಯ ಕರ್ಯಾಧ್ಯಕ್ಷರು ಹಾಗೂ ಕಾಹೆರನ ಕುಲಪತಿಗಳಾದ ಡಾ. ಪ್ರಭಾಕರ ಕೋರೆ, ಉಪಕುಲಪತಿ ಡಾ. ನಿತಿನ ಗಂಗಾನೆ, ಪ್ರಾಚರ್ಯರಾದ ಡಾ. ಅಲ್ಕಾ ಕಾಳೆ ಅವರ ಮಾರ್ಗದರ್ಶನದಲ್ಲಿ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ನೇಪಾಳ, ಶಾರ್ಜಾ, ಅಮೇರಿಕಾ, ಮಸ್ಕತ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದು ಸುಮಾರು 600ಕ್ಕೂ ಅಧಿಕ ದಂತವೈದ್ಯರು ನೊಂದಾಯಿಸಿಕೊಂಡಿದ್ದಾರೆ.
ಈ ಸಮ್ಮೇಳನವನ್ನು ಸಂಘಟನಾಧ್ಯಕ್ಷೆಯಾಗಿ ಡಾ.ಸೀಮಾ ಹಳ್ಳಿಕೇರಿಮಠ, ಸಂಘಟನಾ ಕಾರ್ಯದರ್ಶಿಯಾಗಿ ಡಾ.ಪುಣ್ಯ ಅಂಗಡಿ ಹಾಗೂ ಕೋಶಾಧಿಕಾರಿ ಡಾ.ವೀಣಾ ನಾಯ್ಕರ ಅವರ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ವೈಜ್ಞಾನಿಕ ಸಮಿತಿ ಅಧ್ಯಕ್ಷೆ ಡಾ.ದೀಪಾ ಮಾನೆ, ಡಾ.ಪುಷ್ಪಕ ಶಾ. ಡಾ.ಮಂಜುಳಾ, ಎಂ.ಡಾ.ಚೇತನ್ ಬೆಳಲ್ದಾವರ್, ಡಾ.ಶ್ವೇತಾ ಕುಂಭೋಜಕರ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ