ಮಹಾರಾಷ್ಟ್ರದ ಮೂವರು ಸಚಿವರು, ಓರ್ವ ಸಂಸದನಿಗೆ ಬೆಳಗಾವಿ ಪ್ರವೇಶ ನಿಷೇಧ: ಡಿಸಿ ಆದೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಳಗಾವಿಗೆ ಬಂದು ಬ್ಲ್ಯಾಕ್ ಡೇ ಮೂಲಕ ಉದ್ದಟತನ ಪ್ರದರ್ಶಿಸಲು ಮುಂದಾಗಿದ್ದ ಮಹಾರಾಷ್ಟ್ರ ಮೂವರು ಸಚಿವರಿಗೆ ಹಾಗೂ ಓರ್ವ ಸಂಸದನಿಗೆ ಬೆಳಗಾವಿ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ 1) ಶ್ರೀ ಶಂಭುರಾಜೆ ದೇಸಾಯಿ, ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಸಚಿವರು, 3) ಶ್ರೀ ದೀಪಕ ಕೇಸರಕರ, ಮರಾಠಿ ಭಾಷೆ ಸಚಿವರು ಹಾಗೂ 4) ಶ್ರೀ ಧೈರ್ಯಶೀಲ ಮಾನೆ, ಸಂಸದರು – ಇವರಿಗೆ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸಲು ನಿರ್ಭಂಧಿತ ಆದೇಶವನ್ನು ಹೊರಡಿಸಲಾಗಿದೆ.
ದಿನಾಂಕ: 01-11-2023 ರಂದು ಮಹಾರಾಷ್ಟ್ರ ರಾಜ್ಯದ 1) ಶ್ರೀ ಶಂಭುರಾಜೆ ದೇಸಾಯಿ, ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಸಚಿವರು, 3) ಶ್ರೀ ದೀಪಕ ಕೇಸರಕರ, ಮರಾಠಿ ಭಾಷೆ ಸಚಿವರು ಹಾಗೂ 4) ಶ್ರೀ ಧೈರ್ಯಶೀಲ ಮಾನೆ, ಸಂಸದರು ಮಹಾರಾಷ್ಟ್ರ ರಾಜ್ಯ ಇವರುಗಳು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದಲ್ಲಿ ಎಮ್.ಇ.ಎಸ್. ಸಂಘಟನೆಯವರು ಕೈಗೊಳ್ಳಲಿರುವ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದು, ಆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ, ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದು ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವುದನ್ನು ಹಾಗೂ ಕರ್ನಾಟಕದ ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾದ್ಯತೆ ಇರುವುದರಿಂದ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಾನು, ನಿತೇಶ್.ಕೆ.ಪಾಟೀಲ, ಭಾ.ಆ.ಸೇ. ಜಿಲ್ಲಾ ದಂಡಾಧಿಕಾರಿ, ಬೆಳಗಾವಿ ಜಿಲ್ಲೆ ಸಿಆರ್‌ಪಿಸಿ 1973 ಕಲಂ. 144 (3) ರನ್ವಯ ನನ್ನಲ್ಲಿ ಪ್ರದತ್ತ ಅಧಿಕಾರದ ಮೇರೆಗೆ ದಿನಾಂಕ: 31.10.2023 ರ ಬೆಳಿಗ್ಗೆ 6-00 ಗಂಟೆಯಿಂದ ದಿನಾಂಕ:02.11.2023 ರ ಸಾಯಂಕಾಲ 6-00 ಗಂಟೆಯವರೆಗೆ 1) ಶ್ರೀ ಶಂಭುರಾಜೆ ದೇಸಾಯಿ, ಮಾನ್ಯ ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಮಾನ್ಯ ಸಚಿವರು, 3) ಶ್ರೀ: ದೀಪಕ ಕೇಸರಕರ, ಮಾನ್ಯ ಮರಾಠಿ ಭಾಷೆ ಸಚಿವರು ಹಾಗೂ 4) ಶ್ರೀ ಧೈರ್ಯಶೀಲ ಮಾನೆ, ಮಾನ್ಯ ಸಂಸದರು ಮಹಾರಾಷ್ಟ್ರ ರಾಜ್ಯ ಇವರಿಗೆ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸಲು ಈ ನಿರ್ಭಂಧಿತ ಆದೇಶವನ್ನು ಹೊರಡಿಸಿರುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆದೇಶದ ಪೂರ್ಣ ಪಾಠ ಹೀಗಿದೆ –
ಉಲ್ಲೇಖ (1) ರ ಪತ್ರದಲ್ಲಿ ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಬೆಳಗಾವಿ ಇವರು ದಿನಾಂಕ: 01-11-2023 ರಂದು ಕರ್ನಾಟಕ ರಾಜ್ಯೋತ್ಸವದ ಕಾಲಕ್ಕೆ ಮರಾಠಾ ವಿಕೀಕರಣ ಸಮೀತಿ (ಎಮ್.ಇ.ಎಸ್) ರವರು ಕರಾಳ ದಿನಾಚರಣೆಯನ್ನು ಆಚರಿಸುವ ಬಗ್ಗೆ ತಿಳಿದು ಬಂದಿದ್ದು, ಈ ಕಾಲಕ್ಕೆ ಡ್ಯಾಲಿ ಮೂಲಕ ತಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಾಠಾ ಮಂದಿರಕ್ಕೆ ಹೋಗಿ ಸಭಾ ಕಾರ್ಯಕ್ರಮವನ್ನು ಮಾಡುವವರು ಇರುವ ಬಗ್ಗೆ ಹಾಗೂ ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ರಾಜ್ಯದಿಂದ ಈ ಕೆಳಕಾಣಿಸಿದ ಸಚಿವರು ಹಾಗೂ ಸಂಸದರಾದ 1) ಶ್ರೀ ಶಂಭುರಾಜೆ ದೇಸಾಯಿ, ಮಾನ್ಯ ಸಚಿವರು, ಮಹಾರಾಷ್ಟ್ರ ರಾಜ್ಯ 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಮಾನ್ಯ ಸಚಿವರು, ಮಹಾರಾಷ್ಟ್ರ ರಾಜ್ಯ 3) ಶ್ರೀ ದೀಪಕ ಕೇಸರಕರ, ಮಾನ್ಯ ಸಚಿವರು, ಮಹಾರಾಷ್ಟ್ರ ರಾಜ್ಯ 4) ಶ್ರೀ ಧೈರ್ಯಶೀಲ ಮಾನೆ, ಮಾನ್ಯ ಸಂಸದರು ಮಹಾರಾಷ್ಟ್ರ ರಾಜ್ಯ ಇವರು ಭಾಗವಹಿಸಿ ಪ್ರಚೋದನಕಾರಿಯಾಗಿ ಮಾತನಾಡುವವರಿರುತ್ತಾರೆ ಎಂದು ತಿಳಿದು ಬಂದಿರುತ್ತದೆ. ಇದರಿಂದ
1) ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮಧ್ಯೆ ಗಡಿವಿವಾದವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇದ್ದು, ಸದರಿ ಮಾನ್ಯ ಸಚಿವರು ಹಾಗೂ ಸಂಸದರು ಗಡಿವಿವಾದದ ಬಗ್ಗೆ ಪ್ರಚೋದನಕಾರಿಯಾಗಿ ಮಾತನಾಡುವ ಸಾಧ್ಯತೆ ಇರುವದರಿಂದ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ.
2) ಮಹಾರಾಷ್ಟ್ರ ರಾಜ್ಯದ ಮಾನ್ಯ ಸಚಿವರು ಹಾಗೂ ಸಂಸದರು ಮಹಾರಾಷ್ಟ್ರ ರಾಜ್ಯ ರವರು ಈ ಸಂದರ್ಭದಲ್ಲಿ ಬೆಳಗಾವಿ: ಜಿಲ್ಲೆಯನ್ನು ಪ್ರವೇಶಿಸಿದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸದರಿಯವರಿಗೆ ಫೇರಾವ ಹಾಕಿ ಪ್ರತಿಭಟನೆಯನ್ನು ನಡೆಯಿಸುವ ಸಾಧ್ಯಗಳು ಇರುತ್ತವೆ. ಅಲ್ಲದೇ ಇದರಿಂದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಹಾಗೂ ಎಮ್.ಇ.ಎಸ್ ಕಾರ್ಯಕರ್ತರ ನಡುವೆ ಘರ್ಷಣೆಗಳು ಉಂಟಾಗಿ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆಯಾಗುವ ಸಾಧ್ಯತೆಗಳು ಇರುತ್ತವೆ.
ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಾನ್ಯ ಸಚಿವರು ಹಾಗೂ ಸಂಸದರು ರವರಿಗೆ ದಿನಾಂಕ: 31-10-2023 ರಂದು ಬೆಳಿಗ್ಗೆ 0600 ಗಂಟೆಯಿಂದ ದಿನಾಂಕ: 02-11-2023 ರಂದು ಸಾಯಂಕಾಲದ ವರೆಗೆ ಜಾರಿಗೆ ಬರುವಂತೆ ಸದರಿ ಮೇಲ್ಕಂಡ ಮಾನ್ಯ ಸಚಿವರಿಗೆ ಹಾಗೂ ಸಂಸದರಿಗೆ ಬೆಳಗಾವಿ ನಗರ ಮತ್ತು ಬೆಳಗಾವಿ ಜಿಲ್ಲೆ ಗಡಿಯೊಳಗೆ ಪ್ರವೇಶಿಸದಂತೆ ನಿರ್ಭಂಧಿಸಿ ಆದೇಶ ಹೊರಡಿಸಲು ಕೋರಿರುತ್ತಾರೆ.
ಅದು ಅಲ್ಲದೇ ಗಡಿ ವಿಷಯಕ್ಕೆ ಸಂಬಂಧಪಟ್ಟಂತೆ ದಿನಾಂಕ: 01-11-2023 ರಂದು ಮಹಾರಾಷ್ಟ್ರ ರಾಜ್ಯದ 1) ಶ್ರೀ ಶಂಭುರಾಜೆ ದೇಸಾಯಿ, ಮಾನ್ಯ ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಮಾನ್ಯ ಸಚಿವರು, ಶ್ರೀ ದೀಪಕ ಕೇಸರಕರ ಮಾನ್ಯ ಮರಾಠಿ ಭಾಷೆ ಸಚಿವರು ಹಾಗೂ ತಿರ್ಯಲ ಸಂಸದರು ಮಹಾರಾಷ್ಟ್ರ ರಾಜ್ಯ ಇವರುಗಳು ಒಂದು ವೇಳೆ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲಿ ಪ್ರಚೋದನಕಾರಿ ಭಾಷಣ ಅಥವಾ ಪ್ರಚೋದನಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ. ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆಗಳಿರುತ್ತವೆ, ಅದು ಅಲ್ಲದೇ ಕರ್ನಾಟಕದ ಮರಾಠಿ ಭಾಷಿಕ ನಿವಾಸಿಗರನ್ನು ಪ್ರಚೋದಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದರಿಂದ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಹಾಗೂ ಶಾಂತತೆಗೆ ಧಕ್ಕೆ ಬರುವ ಸಾಧ್ಯತೆಗಳಿರುತ್ತವೆ, ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಹಾಗೂ
ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಹಾರಾಷ್ಟ್ರ, ರಾಜ್ಯದ 1) ಶ್ರೀ ಶಂಭುರಾಜೆ ದೇಸಾಯಿ, ಮಾನ್ಯ
ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಮಾನ್ಯ ಸಚಿವರು, 3) ಶ್ರೀ ದೀಪಕ ಕೇಸರಕರ, ಮಾನ್ಯ
ಮರಾಠಿಭಾಷೆ ಸಚಿವರು ಹಾಗೂ 4) ಶ್ರೀ ಧೈರ್ಯಶೀಲ ಮಾನೆ, ಮಾನ್ಯ ಸಂಸದರು ಮಹಾರಾಷ್ಟ್ರ ರಾಜ್ಯ ಇವರುಗಳು
ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿಷೇಧಿಸುವುದು ಸೂಕ್ತವೆಂದು ಪೊಲೀಸ್ ಆಯುಕ್ತರು, ಬೆಳಗಾವಿ ನಗರ,
ಬೆಳಗಾವಿ ಇವರ ವರದಿ ಮೇಲಿಂದ ನನಗೆ ಮನವರಿಕೆಯಾಗಿದೆ. ಮೇಲ್ಕಂಡ ಕಾರಣಗಳಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ
ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ
ಕ್ರಮವಾಗಿ ಈ ಕೆಳಗಿನಂತೆ ಆದೇಶಿಸಿದೆ.
ಆದೇಶ:
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕ: ಗಮನದಲ್ಲಿಟ್ಟುಕೊಂಡು ದಿನಾಂಕ: 01-11-2023 ರಂದು ಮಹಾರಾಷ್ಟ್ರ ರಾಜ್ಯದ 1) ಶ್ರೀ ಶಂಭುರಾಜೆ ದೇಸಾಯಿ, ಮಾನ್ಯ ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಮಾನ್ಯ ಸಚಿವರು, 3) ಶ್ರೀ ದೀಪಕ ಕೇಸರಕರ, ಮಾನ್ಯ ಮರಾಠಿ ಭಾಷೆ ಸಚಿವರು ಹಾಗೂ 4) ಶ್ರೀ ಧೈರ್ಯಶೀಲ ಮಾನೆ, ಮಾನ್ಯ ಸಂಸದರು ಮಹಾರಾಷ್ಟ್ರ ರಾಜ್ಯ ಇವರುಗಳು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದಲ್ಲಿ ಎಮ್.ಇ.ಎಸ್. ಸಂಘಟನೆಯವರು ಕೈಗೊಳ್ಳಲಿರುವ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದು, ಆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ, ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದು ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವುದನ್ನು ಹಾಗೂ ಕರ್ನಾಟಕದ ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾದ್ಯತೆ ಇರುವುದರಿಂದ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಾನು, ನಿತೇಶ್.ಕೆ.ಪಾಟೀಲ, ಭಾ.ಆ.ಸೇ. ಜಿಲ್ಲಾ ದಂಡಾಧಿಕಾರಿ, ಬೆಳಗಾವಿ ಜಿಲ್ಲೆ ಸಿಆರ್‌ಪಿಸಿ 1973 ಕಲಂ. 144 (3) ರನ್ವಯ ನನ್ನಲ್ಲಿ ಪ್ರದತ್ತ ಅಧಿಕಾರದ ಮೇರೆಗೆ ದಿನಾಂಕ: 31.10.2023 ರ ಬೆಳಿಗ್ಗೆ 6-00 ಗಂಟೆಯಿಂದ ದಿನಾಂಕ:02.11.2023 ರ ಸಾಯಂಕಾಲ 6-00 ಗಂಟೆಯವರೆಗೆ 1) ಶ್ರೀ ಶಂಭುರಾಜೆ ದೇಸಾಯಿ, ಮಾನ್ಯ ಸಚಿವರು, 2) ಶ್ರೀ ಚಂದ್ರಕಾಂತ (ದಾದಾ) ಪಾಟೀಲ, ಮಾನ್ಯ ಸಚಿವರು, 3) ಶ್ರೀ: ದೀಪಕ ಕೇಸರಕರ, ಮಾನ್ಯ ಮರಾಠಿ ಭಾಷೆ ಸಚಿವರು ಹಾಗೂ 4) ಶ್ರೀ ಧೈರ್ಯಶೀಲ ಮಾನೆ, ಮಾನ್ಯ ಸಂಸದರು ಮಹಾರಾಷ್ಟ್ರ ರಾಜ್ಯ ಇವರಿಗೆ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸಲು ಈ ನಿರ್ಭಂಧಿತ ಆದೇಶವನ್ನು ಹೊರಡಿಸಿರುತ್ತೇನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ