ರಾಜಕೀಯಕ್ಕೆ ಗುಡ್ ಬೈ ಹೇಳಿದ ಕುಮಾರಸ್ವಾಮಿ !
- ಆಕಸ್ಮಿಕವಾಗಿ ಮುಖ್ಯಮಂತ್ರಿ ಆದೆ – ಕುಮಾರಸ್ವಾಮಿ
ಪ್ರಗತಿವಾಹಿನಿ ಸುದ್ದಿ : ಅಧಿಕಾರ ಕಳೆದುಕೊಂಡ ಕೆಲವೇ ದಿನಗಳಲ್ಲಿ ರಾಜಕೀಯದಿಂದ ದೂರವಿರಲು ಬಯಸುತ್ತೇನೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ದಶಕಗಳ ಕಾಲ ಕರ್ನಾಟಕ ರಾಜಕೀಯದಲ್ಲಿ ನಿರ್ಣಾಯಕವಾಗಿ ಕೆಲಸಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶನಿವಾರ ನಡೆದ, ಹಾಸನ, ಮಂಡ್ಯ, ಕೆ.ಆರ್.ಪೇಟೆ ಕಾರ್ಯಕರ್ತರ ಸಭೆಯ ನಂತರ ಅವರು ಮಾಧ್ಯಮಗಳ ಜೊತೆ ಮಾತಿಗಿಳಿದರು.
ರಾಜಕೀಯದಿಂದ ದೂರ ಹೋಗಲು ಆಲೋಚಿಸುತ್ತಿದ್ದೇನೆ, ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೇನೆ. ದೇವರು ನನಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶವನ್ನು ಕೊಟ್ಟನು ಎಂದರು.
ಇದನ್ನೂ ಓದಿ – ವಿಶ್ವಾಸ ಗೊತ್ತುವಳಿಯಲ್ಲಿ ಕುಮಾರಸ್ವಾಮಿಗೆ ಸೋಲು
ನನ್ನ ಪದವಿ ಯಾರೊನ್ನೊ ಸಂತೃಪ್ತಿ ಪಡಿಸುವುದಾಗಿರಲಿಲ್ಲ, ಆ 14 ತಿಂಗಳುಗಳಲ್ಲಿ ನಾನು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದೇನೆ. ಅದು ನನಗೆ ಸಂತೃಪ್ತಿಯನ್ನು ನೀಡಿದೆ ಎಂದರು. ಇನ್ನಾದರೂ ಪ್ರಶಾಂತ ಜೀವನವನ್ನು ಕಳೆಯಬೇಕೆಂದಿದ್ದೇನೆ, ರಾಜಕೀಯದಲ್ಲಿ ಮುಂದುವರೆಯ ಬೇಕೆಂದು ಇಲ್ಲ ಎಂದಿದ್ದಾರೆ.
ಹಾಸನದಲ್ಲಿ ಕುಮಾರಸ್ವಾಮಿ ಮಾತನಾಡಿ, “ರಾಜಕೀಯ ವ್ಯವಸ್ಥೆಯು ದಾರಿ ತಪ್ಪಿದೆ. ಜಾತಿಯ ಪ್ರಭಾವ ಹೆಚ್ಚಾಗಿದೆ. ರಾಜಕೀಯದಲ್ಲೇ ಮುಂದುವರೆಯಬೇಕೆಂಬ ಹುಚ್ಚು ನನಗೆ ಇಲ್ಲ. ನಮ್ಮ ಕುಟುಂಬವನ್ನು ಮತ್ತೆ ಮತ್ತೆ ಎಳೆಯಬೇಡಿ.. ಹುಣಸೂರು, ಕೆ.ಆರ್.ಪೇಟೆ ಸೇರಿ ಎಲ್ಲೆಡೆ ಅಭ್ಯರ್ಥಿಗಳು ಪೈಪೋಟಿ ತಯಾರಾಗಿದ್ದಾರೆ. ನಿಖಿಲ್ ಮತ್ತು ಪ್ರಜ್ವಾಲ್ ಸ್ಪರ್ಧಿಸುವುದಿಲ್ಲ. ಎಂದರು.
ಕೆ.ಆರ್.ಪೇಟೆ ವಿಚಾರ ಮಾತನಾಡಿದ ಕುಮಾರಸ್ವಾಮಿ, ” ಟಿಕೆಟ್ ಗಾಗಿ ನಮ್ಮ ಸುತ್ತ ಸುತ್ತಿದ ನಾರಾಯಣಗೌಡ ಗೆ ಅವಕಾಶ ಕೊಟ್ಟಿದ್ದೆವು, ಆದರೆ ನಮ್ಮ ನಂಭಿಕೆ ಹಾಗೂ ಅವಕಾಶಕ್ಕೆ ಮೋಸವಾಗಿದೆ ಎಂಬ ಆವೇದನೆ ವ್ಯಕ್ತಪಡಿಸಿದರು.
ಇದನ್ನೂ ಓದಿ –
https://pragati.taskdun.com/belagavi-news/siddaramayya-old-speech-video-viral/
ವೃದ್ಧಾಶ್ರಮ ನಿರ್ಮಿಸಿ ವೃದ್ಧರೊಂದಿಗೆ ಇರಲು ಬಯಸುತ್ತೇನೆ . .
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿ.ಎಂ.ಕುಮಾರ ಸ್ವಾಮಿ, ಕೇತುಗಾನಹಳ್ಳಿಯ ತನ್ನ ಸಂಪಾದನೆಯ ಜಮೀನಿನಲ್ಲಿ ವೃದ್ಧಾಶ್ರಮ ನಿರ್ಮಾಣ ಮಾಡಿ ಅವರೊಂದಿಗೆ ಬದುಕಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಯಾವದೇ ರಾಜಕೀಯ ಜಂಜಾಟವಿಲ್ಲದೆ, ಕೇತುಗಾನಹಳ್ಳಿಯಲ್ಲಿ ವೃದ್ಧರಿಗೆ ಆಶ್ರಮ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಯಾವುದೇ ಪೂರ್ವಾಪರ ಆಲೋಚನೆ ಇಲ್ಲದೆ, ಮಂಡ್ಯದ ಶಾಸಕ ಹಾಗೂ ಸಚಿವರ ಒತ್ತಡಕ್ಕೆ ಮಣಿದು ತನ್ನ ಮಗನನ್ನು ಕಣಕ್ಕಿಳಿಸಿದೆ. ಅಷ್ಟಕ್ಕೇ ಕೆಲ ಮಾಧ್ಯಮಗಳು ನನ್ನನ್ನು ಮತ್ತು ನನ್ನ ಮಗನನ್ನು ಖಳನಾಯಕರನ್ನಾಗಿ ಬಿಂಬಿಸಿದವು, ಅದರಲ್ಲಿ ನಾವು ಮಾಡಿದ ತಪ್ಪೇನು ? ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದರು.
ರೈತರ ಕಷ್ಟಕ್ಕೆ, ಅವರ ಭೂಮಿಗೆ ನೀರು ಬಿಡಿಸಿದರೆ, ಕೆಲವರು ಇಲ್ಲದ ಆರೋಪ ಹೊರಿಸಿ ಆಯೋಗದಿಂದ ನೋಟಿಸ್ ಕೊಡಿಸಿದರು. ಆದರೆ ನಾನು ಜನರನ್ನು ಎಂದೂ ಕೈಬಿಟ್ಟವನಲ್ಲ ಎಂದು ಭಾವುಕರಾದರು…… ////
ಇದನ್ನೂ ಓದಿ – https://pragati.taskdun.com/kannada-news/bs-yeddyurappa-sworn-4th-time-as-chief-minister/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ