ಪ್ರಗತಿವಾಹಿನಿ ಸುದ್ದಿ; ಕೋಲಾರ: ಕೋಲಾರ ಜಿಲ್ಲೆಯಲ್ಲಿ ಸರಣಿ ಕೊಲೆ ಪ್ರಕರಣಗಳು ನಡೆಯುತ್ತಿವೆ. ಇದು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುತ್ತಿದೆ. ಕಾಂಗ್ರೆಸ್ ಮುಖಂಡರ ಕೊಲೆ ಬೆನ್ನಲ್ಲೇ ಬಾಲಕನೊಬ್ಬನನ್ನು ಚಿತ್ರಹಿಂಸೆ ನೀಡಿ ಕೊಲೆಗೈದ ಘಟನೆ ನಡೆದಿತ್ತು.
ಕಾರ್ತಿಕ್ ಸಿಂಗ್ ಎಂಬ ಬಾಲಕನನ್ನು ಯುವಕರ ಗುಂಪು ಬರ್ಬರವಾಗಿ ಹತ್ಯೆ ಮಾಡಿತ್ತು. ಕೊಲೆಗು ಮುನ್ನ ಬಾಲಕನಿಗೆ ಕಿರುಕುಳ ನೀಡುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಾಲಕನ ಬಟ್ಟೆ ಬಿಚ್ಚಿಸಿ, ಮೈ ಕೈಗೆ ಗಾಜು, ಚಾಕು, ಬ್ಲೇಡ್ ನಿಂದ ಇರಿದು ಚಿತ್ರಹಿಂಸೆ ನೀಡಿದ್ದರು.
ಬಾಲಕನ ಕೊಲೆ ಪ್ರಕರಣ ಸಂಬಂಧ ಈಗ ಕೋಲಾರ ಠಣೆಯ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ, ಮಾಹಿತಿ ಕಲೆ ಹಾಕುವಲ್ಲಿ ವಿಫಲ ಆರೋಪದಲ್ಲಿ ಎ ಎಸ್ ಐ ಮುನಿರಾಜು, ಕಾನ್ಸ್ ಟೇಬಲ್ ಗಳಾದ ವಿಷ್ಣು, ಶಿವ ಎಂಬುವವರನ್ನು ಅಮಾನತು ಮಾಡಿ ಕೋಲಾರ ಎಸ್ ಪಿ ನಾರಾಯಣ ಆದೇಶ ನೀಡಿದ್ದಾರೆ.
17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ನನ್ನು ನ.3ರಂದು ನಗರದ ಟೇಕಲ್ ರಸ್ತೆಯ ಬಾಪೂಜಿ ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣದಲ್ಲಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ