Kannada NewsKarnataka NewsLatest
*ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಮಗ*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ತಾಯಿಗೆ ಅಪ್ಪ ನೀಡುತ್ತಿದ್ದ ಹಿಂಸೆ, ಕಿರುಕುಳವನ್ನು ನೋಡಲಾಗದೇ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪೂರಿನಲ್ಲಿ ನಡೆದಿದೆ.
ಬಂಡಿತಿಮ್ಮಣ್ಣ (55) ಮಗನಿಂದಲೇ ಕೊಲೆಯಾದ ವ್ಯಕ್ತಿ. ಶೀಲವಂತ ತಂದೆಯನ್ನು ಕೊಲೆಗೈದ ಮಗ. ತಂದೆ ಪ್ರತಿ ದಿನ ಕುಡಿದು ಬಂದು ತಾಯಿಗೆ ಕಿರುಕುಳ, ಹಿಂಸೆ ನೀಡುತ್ತಿದ್ದನಂತೆ. ಇದನ್ನು ಕಂಡು ಬೇಸತ್ತಿದ್ದ ಮಗ ಕುಟುಂಬದವರ ಮುಂದೆಯೇ ತಂದೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಬಳಿಕ ಪೊಲೀಸರುಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.



